October 8, 2026
;
palguni

 

 

ರಿಯಲ್ ಎಸ್ಟೇಟ್ ಮಾಫಿಯಾದ ಮಣ್ಣು ದಂಧೆಗೆ. ಮೂಡಿಗೆರೆ ತಾಲ್ಲೂಕು ಪಲ್ಗುಣಿ  ರಸ್ತೆ ಗುಂಡಿ ಬಿದ್ದು ನಲುಗಿ ಹೋಗುತ್ತಿದ್ದು. ಕೂಡಲೇ ಪೊಲೀಸ್ ಇಲಾಖೆ ಮತ್ತು ತಾಲೂಕ ದಂಡಾದಿಕಾರಿಗಳು  ಮಧ್ಯಪ್ರವೇಶಿಸಿ ರಸ್ತೆಯನ್ನು ಉಳಿಸಬೇಕು ಎಂದು  ಗ್ರಾಮದ ಮುಖಂಡ ನವೀನ್ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇತಿಹಾಸ ಪ್ರಸಿದ್ದ ದೇವರಮನೆ. ಪಲ್ಗುಣಿ ಕಲನಾಥೆಶ್ವರ. ಪದ್ಮಾವತಿ ಅಮ್ಮನವರ ದೇವಸ್ಥಾನ ಹೊಂದಿರುವ ಸುಮಾರು ಎಂಟುವರೆ ಕೀಮಿ ದೂರದ ಪಲ್ಗುಣಿ ಬೆಟ್ಟಗೆರೆ ಕೂಡು ರಸ್ತೆಯನ್ನು. ಗ್ರಾಮಸ್ಥರ ಹಲವು ವರ್ಷಗಳ ಹೋರಾಟದ ಶ್ರಮದಿಂದ. ಕಳೆದ ಮೂರು ವರ್ಷಗಳ ಹಿಂದೆ. ಕೇಂದ್ರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ . 7 ಕೋಟಿ ರೂ ವೆಚ್ಚದಲ್ಲಿ  ಸುಸಜ್ಜಿತ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು.

ಆದರೆ ಕಳೆದ ಮೂರು ತಿಂಗಳಿಂದ 60 ಟನ್ ಹೆಚ್ಚು ತೂಕದ 10 ಚಕ್ರ ಹೊಂದಿರುವ ಮಣ್ಣು ಲಾರಿಗಳು. ಬೆಟ್ಟಿಗೆರೆಯಿಂದ ಚಕ್ಕಮಕ್ಕಿಗೆ ಈ ರಸ್ತೆ ಮುಖಾಂತರ ದಿನನಿತ್ಯ ನೂರಾರು ಲೋಡ್ ಗಳಷ್ಟು ಸಾಗಾಟ ಮಾಡುತ್ತಿದ್ದು. ಗ್ರಾಮದ ಚಿಕ್ಕ ರಸ್ತೆ ಆಗಿರುವುದರಿಂದ ಇಷ್ಟು ಕೆಪಾಸಿಟಿ ರಸ್ತೆ ಹೊಂದಿಲ್ಲದ ಕಾರಣ. ರಸ್ತೆ ಒಡೆದು ಗುಂಡಿ ಬಿದ್ದು ಕಿತ್ತು ಹೋಗುತ್ತಿದ್ದು. ಕೂಡಲೆ ಮಣ್ಣು ಮಾಪಿಯಾವನ್ನು ಅಧಿಕಾರಿಗಳು ತಢೆದು ಸಾರ್ವಜನಿಕ ಹಣದ ಈ ರಸ್ತೆಯನ್ನು ಗ್ರಾಮಸ್ಥರ ಸಂಚಾರಕ್ಕೆ ಉಳಿಸಿಕೊಡಬೇಕು ಎಂದು ಅಗ್ರಹಿಸಿದ್ದಾರೆ.

 

 

Leave a Reply

Your email address will not be published. Required fields are marked *