October 17, 2026
;
0-0x0-0-0#

 

 

ಮೂಡಿಗೆರೆಯಲ್ಲಿ ನವೆಂಬರ್ 6 ರಂದು ನಡೆಯಲಿರುವ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಮೇಕನಗದ್ದೆ ಲಕ್ಷ್ಮಣಗೌಡ ಅವರನ್ನು ಕಸಾಪ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು.

ಚಿಕ್ಕಮಗಳೂರಿನ ಅವರ ನಿವಾಸಕ್ಕೆ ತೆರಳಿದ ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಲಕ್ಷ್ಮಣಗೌಡರಿಗೆ ಫಲಪುಷ್ಪ ನೀಡಿ ಗೌರವಿಸಿ ಸಮ್ಮೇಳನಕ್ಕೆ ಆಹ್ವಾನ ನೀಡಿದರು.

ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲಕ್ಷ್ಮಣಗೌಡರು ಮೂಡಿಗೆರೆ ತಾಲ್ಲೂಕು ಮೇಕನಗದ್ದೆ ಗ್ರಾಮದವರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾಸನಗಳ ಅಧ್ಯಯನ, ಮಲೆನಾಡಿನ ಜನಜೀವನ, ಸಂಸ್ಕೃತಿ ಸೇರಿದಂತೆ ಇಲ್ಲಿನ ಸುಗ್ಗಿಹಬ್ಬಗಳು, ಆಚರಣೆಗಳನ್ನು ತಮ್ಮ ಸಾಹಿತ್ಯದಲ್ಲಿ ಪ್ರತಿಬಿಂಬಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಕೃತಿ, ಕವನ ಸಂಕಲನಗಳನ್ನು ರಚಿಸಿದ್ದಾರೆ. ಜೊತೆಗೆ ಕೃಷಿಕರಾಗಿಯೂ ತೊಡಗಿಸಿಕೊಂಡಿದ್ದಾರೆ.

ಸಮ್ಮೇಳನ ಅಧ್ಯಕ್ಷತೆ ಆಹ್ವಾನ ಸ್ವೀಕರಿಸಿ ಮಾತನಾಡಿದ ಮೇಕನಗದ್ದೆ ಲಕ್ಷ್ಮಣಗೌಡರು ; ಮೂಡಿಗೆರೆ ತಾಲ್ಲೂಕು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ತನ್ನದೇ ಹಿರಿಮೆ ಗರಿಮೆ ಹೊಂದಿದೆ. ಮಹಾನ್ ಹೊಯ್ಸಳ ಸಾಮ್ರಾಜ್ಯದ ಮೂಲ ನೆಲೆಯಾಗಿದೆ. ಮೂಡಿಗೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವುದು ನನಗೆ ಅತೀವ ಆನಂದ ತಂದಿದೆ ಎಂದರು.

ಲಕ್ಷ್ಮಣಗೌಡರನ್ನು ಸಮ್ಮೇಳನಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷರಾದ ಸೂರಿ ಶ್ರೀನಿವಾಸ್, ಕಸಾಪ ಜಿಲ್ಲಾ.ಪ್ರಧಾನ ಸಂಚಾಲಕರಾದ ಮಗ್ಗಲಮಕ್ಕಿ ಗಣೇಶ್, ಕಸಾಪ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾದ ಡಿ.ಕೆ. ಲಕ್ಷ್ಮಣಗೌಡ. ಸ್ವಾಗತ ಸಮಿತಿಯ ಕಾರ್ಯದ್ಯಕ್ಷರಾದ ಬಿ.ಕೆ. ಲಕ್ಷ್ಮಣಕುಮಾರ್., ಐ ಡಿ ಎಸ್ ಜಿ ಕಾಲೇಜು ಪ್ರಾಂಶುಪಾಲರಾದ. ಮಹೇಶ್.ಹೆಚ್.ಎಂ, ಕ.ಸಾ.ಪ. ಪೂರ್ವದ್ಯಕ್ಷರಾದ ಶಾಂತಕುಮಾರ್, ಕಾರ್ಯದರ್ಶಿಗಳಾದ ಸುಚಿತ್ರ ಪ್ರಸನ್ನ…ನವೀನ್.ಬಿ.ಅರ್.  ಖಜಾಂಚಿ ಪ್ರಕಾಶ್.ಅರ್., ಕಸಾಪ ಸಂಚಾಲಕ ನಾಗರಾಜು ಎಂ.ಎಸ್, ‎ಜಿಲ್ಲಾ ಸಂಚಾಲಕಿ ಅನಿತಜಗದೀಪ್..ವೀಣಾ. ಗೊಣೀಬೀಡು, ಸ್ವಾಗತ ಸಮಿತಿ ಖಜಾಂಚಿ ವಿ.ಪಿ.ನಾರಾಯಣ್, ಕಸಾಪ ‎ಕಸಬಾ ಹೋಬಳಿ ಅಧ್ಯಕ್ಷ  ರವಿಕುನ್ನಳ್ಳಿ.. ಗೊಣೀಬೀಡು ಹೊಬಳಿ ಅಧ್ಯಕ್ಷ  ನವೀನ್ ಅನೆದಿಬ್ಬ, ಮುಖಂಡರಾದ ಮಾಡ್ಲ ಪ್ರಕಾಶ್, ‎ಲಕ್ಷ್ಮಣಗೌಡರ ಪತ್ನಿ, ಮಕ್ಕಳು, ಸಹೊದರರು ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *