ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ಕುಮಾರ್ ವಜಾಗೊಳಿಸಿ, ಆತನ ವಿರುದ್ಧ ಕ್ರಿಮಿನಲ್ ಮೊಖದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿ ಚಿಕ್ಕಮಗಳೂರು ಶುಕ್ರವಾರ ದಸಂಸ ಮುಖಂಡರು ಗಳು ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಮುಖೇನಾ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು ಎಸ್ಐಆರ್ ಬಗೆಗಿನ ತೀರ್ಮಾನಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ಕುಮಾರ್ ಏಕಪಕ್ಷೀಯವಾಗಿ, ಕಾನೂನು ಬಾ ಹಿರವಾಗಿ ತೆಗೆದುಕೊಂಡಿದ್ದಾರೆ ಎಂಬುದು ಬಹಿರಂಗಪಡಿಸುತ್ತಿದ್ದಂತೆ, ಎಸ್ಐಆರ್ ವಿರೋಧಿ ಹೋರಾಟ ದೇಶದಲ್ಲೆಡೆ ಇನ್ನಷ್ಟು ಭಾಗವಾಗಿದೆ ಎಂದರು.
ಎಸ್ಐಆರ್ ಕಾರರ್ಣೀಕರ್ತರಾದ ಕೇಂದ್ರ ಸರ್ಕಾರ ಭಾಗಯಾಗಿದೆ. ಇತ್ತೀಚಿನ ವರದಿ ಸುಪ್ರೀಂ ಕೋರ್ಟ್ನಲ್ಲಿದ್ದು ಎಸ್ಐಆರ್ ವಿಷಯದಲ್ಲಿ ಮುಖ್ಯ ಚುನಾವಣಾ ಆಯುಕ್ತರು, ಉಳಿದ ಇಬ್ಬರು ಆಯು ಕ್ತರನ್ನು ಕತ್ತಲಲ್ಲಿ ಇಟ್ಟು ಕಾನೂನು ಬಾಹಿರವಾಗಿ ಮತ್ತು ಏಕಪಕ್ಷೀಯವಾಗಿ ಕ್ರಮ ಕೈಗೊಂಡಿರುವುದರಿಂದ ಎಸ್ಆರ್ಐ ರದ್ದುಗೊಳಿಸಬೇಕು ಎಂದರು.
ಮತದಾನದ ಕಾಯ್ದೆ ಪ್ರಕಾರವೇ ಮತದಾರರ ಗುರುತಿನ ಚೀಟಿ ನೀಡುವ ಅಥವಾ ರದ್ದುಪಡಿಸುವ ಪ್ರಕ್ರಿಯೆ ನಡೆಯಬೇಕು. ಆದರೆ ಈ ಪ್ರಕಾರ ನಡೆಸುತ್ತಿಲ್ಲ ಎಂದು ಮುಖ್ಯ ನ್ಯಾಯಾಮೂರ್ತಿಗಳು ಅಭಿಪ್ರಾ ಯಿಸಿದ್ದು ಇನ್ನೊಂದೆಡೆ ಅದೇ ಪೀಠದಲ್ಲಿರುವ ಮತ್ತೋರ್ವ ನ್ಯಾಯಮೂರ್ತಿಗಳು ಈ ಪ್ರಕ್ರಿಯೆಯಿಂದ ಮತದಾರರ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದಿದ್ದಾರೆ ಎಂದರು.
ಕೇಂದ್ರ ಚುನಾವಣಾ ಆಯೋಗದಲ್ಲಿರುವ ಮೂವರು ಚುನಾವಣಾ ಆಯುಕ್ತರ ನಡುವೆಯೇ ಒಮ್ಮತ ವಿಲ್ಲದೇ ಎಸ್ಐಆರ್ ನಿಯಮಾವಳಿಗಳು ರೂಪುಗೊಂಡಿವೆ ಎಂದು ಆಧಾರ ಸಮೇತ ವರದಿಯಾಗಿತ್ತು. ಅದನ್ನು ಚುನಾವಣಾ ಆಯೋಗ ಅಲ್ಲಗಳೆದರೂ ಈ ಕುರಿತುಮತದಾರರ ಮನಸ್ಸಿನಲ್ಲಿರುವ ಶಂಕೆಯನ್ನು ನಿವಾರಿಸಿಲ್ಲ ಎಂದು ಹೇಳಿದರು.
ಇದು ಹೀಗೆ ಮುಂದುವರೆಸಿದರೆ ಮತದಾರರರಿಗೆ ಚುನಾವಣಾ ಆಯೋಗುವ ನೀಡುವ ಕಿರಕುಳವಲ್ಲ ದೇ ಮತ್ತೇನು ಎಂದ ಅವರು ಎಸ್ಐಆರ್ ಪ್ರಕ್ರಿಯೆಲ್ಲಿ ಸಾಕಷ್ಟು ಲೋಪದೋಷಗಳಿವೆ. ಹಾಗಾಗಿ ಇದನ್ನು ಕೈಬಿಡಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಯೋಗೇಶ್ ತುಡುಕೂರು, ನಗರ ಸಂ ಚಾಲಕ ಪ್ರಸನ್ನಕುಮಾರ್, ಮುಖಂಡರುಗಳಾದ ಗಿರೀಶ್ ಕಲ್ಲುಗುಡ್ಡೆ, ಕೆಆರ್ಎಸ್ ಪಕ್ಷದ ಜಿಲ್ಲಾ ಕಾರ್ಯ ದರ್ಶಿ ಸಿ.ಆರ್.ರತನ್ ಹಾಜರಿದ್ದರು.


