October 17, 2026
;
NEWS 2

 

 

ಕಣ್ಣಿನ ಆರೋಗ್ಯವೇ ಜೀವನದ ಬಹುದೊಡ್ಡ ಬೆಳಕು. ಜಗತ್ತಿನ ಸೌಂದ ರ್ಯ, ಪರಿಸರವನ್ನು ಸವಿಯಲು ಶರೀರದ ಅತ್ಯಮೂಲ್ಯ ಅಂಗ ಕಣ್ಣುಗಳು ಎಂದು ಸರ್ಕಾರಿ ಮಹಿಳಾ ಪ್ರಥ ಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಮೂಡಲಗಿರಿಯ್ಯ ಹೇಳಿದರು.

ಚಿಕ್ಕಮಗಳೂರು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಗ್ಲೋರಿ ಐ ಕ್ಲೀನಿಕ್ ಮತ್ತು ಆಫ್ಟಿ ಕಲ್ಸ್ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ಧ ಉಚಿತ ಕಣ್ಣಿನ ತಪಾಸಣಾ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಕಣ್ಣಿನ ಸಂರಕ್ಷಣೆ ಕಡ್ಡಾಯವಾಗಿ ಮಾಡಬೇಕು. ಕನಿಷ್ಟ ಆರು ತಿಂಗಳಿಗೊಮ್ಮೆ ತಪಾಸಣೆ ಗೆ ಒಳಗಾದರೆ ಸಣ್ಣಪುಟ್ಟ ಲೋಪದೋಷ ಗುರುತಿಸಿ ಪರಿಹರಿಸಬಹುದು ಎಂದ ಅವರು ದೃಷ್ಟಿ ದೋಷವ ನ್ನು ನಿರ್ಲಕ್ಷಿಸಿದರೆ ಮುಂದೆ ಅಂಧರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬೆಳಕಿನ ಕಿರಣಗಳು ಕಣ್ಣಿನ ಜೀವಸತ್ವವನ್ನು ಹಂತ ಹಂತವಾಗಿ ಕಸಿ ಯುತ್ತಿದೆ. ಶೇ.32 ರಷ್ಟು ಯುವಸಮೂಹ ಮಂಜುಮುಸುಕಿದ ಕಣ್ಣಿನ ಸಮಸ್ಯೆಗೆ ಒಳಗಾಗುತ್ತಿರುವುದು ಅಧ್ಯ ಯಗಳು ವರದಿ ಮಾಡಿದ್ದು, ಯುವಕರು ಅಗತ್ಯಕಷ್ಟೇ ಮೊಬೈಲ್ ವೀಕ್ಷಿಸಬೇಕು ಎಂದು ಸಲಹೆ ಮಾಡಿದರು.

ಕಣ್ಣನ್ನು ಸಂರಕ್ಷಿಸಲು ಹಚ್ಚ ಹಸಿರಿನ ಪರಿಸರ ಹಾಗೂ ಬಾನಂಗಳದಿ ಆಕಾಶವನ್ನು ದೃಷ್ಟಿಯಿಟ್ಟು ನೋ ಡಿದರೆ ಕಣ್ಣಿನ ಆರೋಗ್ಯವನ್ನು ಕಾಪಾಡಬಹುದು. ಹೀಗಾಗಿ ಕಲಿಕೆಗೆ ಹಾಗೂ ಜೀವನಕ್ಕೆ ಅಗತ್ಯನುಸಾರ ಮಾ ತ್ರ ಟಿವಿ, ಮೊಬೈಲ್‍ಗಳನ್ನು ವೀಕ್ಷಿಸಿ, ಹೆಚ್ಚು ಸಮಯ ಪುಸ್ತಕಗಳ ಅಧ್ಯಯನ ನಡೆಸಬೇಕು ಎಂದರು.

ಗ್ಲೋರಿ ಐ ಕ್ಲೀನಿಕ್ ಪೌಂಡರ್ ಡಾ. ಮೇಘ ರಂಗಸ್ವಾಮಿ ಮಾತನಾಡಿ ವಾಹನಗಳಲ್ಲಿ ಸಂಚರಿಸುವ ವೇಳೆ ದೂಳಿನಿಂದ ಕಣ್ಣಿಗೆ ಹಾನಿ, ಪದೇ ಪದೇ ಉಜ್ಜುವುದರಿಂದ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ದೇಹದ ಅಂಗಾಂಗಗಳಲ್ಲೇ ಕಣ್ಣು ಅತ್ಯಂತ ಸೂಕ್ಷ್ಮವಾದ ಅಂಗ. ಈ ಭಾಗವನ್ನು ಶುಚಿಯಾಗಿಡುವು ದು ಪ್ರತಿಯೊಬ್ಬರ ಕರ್ತವ್ಯ. ಆದ್ದರಿಂದ ಕಣ್ಣು ಕೆಂಪಾಗುವುದು, ಮಂಜುಮುಸುಕಿದ ಸನ್ನೆಗಳು ಕಂಡುಬಂದ ರೆ ಚಿಕಿತ್ಸೆ ಮುಖ್ಯವಾಗಿದ್ದು, ಆ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ಇಂದು ಉಚಿತ ತಪಾಸಣೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಇದೇ ವೇಳೆ ಸುಮಾರು 310 ವಿದ್ಯಾರ್ಥಿನಿಯರಿಗೆ ಉಚಿತ ಕಣ್ಣಿನ ತಪಾಸಣೆ ನಡೆಯಿತು. ಈ ಸಂದಭ ್ದಲ್ಲಿ ಕಾಲೇಜು ಐಕ್ಯೂಎಸಿ ಸಂಚಾಲಕ ದೀಕ್ಷಿತ್‍ಕುಮಾರ್, ಅಧ್ಯಾಪಕರಾದ ಪುಟ್ಟಸ್ವಾಮಿ, ಶಿವರಾಜ್, ಅಗ ರ್‍ವಾಲ್ ಆಸ್ಪತ್ರೆ ಸಹಾಯಕ ವ್ಯವಸ್ಥಾಪಕ ವಚನ್ ಹಾಗೂ ವೈದ್ಯರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *