ಬಾಳೆಹೊನ್ನೂರು ಖಾಂಡ್ಯ ಹೋಬಳಿ, ಉಜ್ಜಯಿನಿ ಶ್ರೀ ಬನ್ನಿ ಮಹಾಂಕಾಳಿ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪರಿವಾರ ದೇವತೆಗಳ ನವರಾತ್ರಿ ಪೂಜೆ ಮಹೋತ್ಸವವು ಇಂದು ಸಂಪ್ರದಾಯ ಬದ್ಧವಾಗಿ ಆಚರಿಸಲಾಗಿದೆ ಎಂದು ದೇವಸ್ಥಾನದ ಧರ್ಮಾಧಿಕಾರಿಗಳಾದ ಯು ಸಿ ಗೋಪಾಲ ಗೌಡ ತಿಳಿಸಿದರು.
ಕೆಂಡಾರ್ಚನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದವರು 9 ದಿನಗಳು ರಾತ್ರಿಯ ವೇಳೆ ವಿಶೇಷ ಪೂಜಾ ಕಾರ್ಯಕ್ರಮ ನಡೆದಿದ್ದು, ರಾತ್ರಿಯ ವೇಳೆ ಕೆಂಡಾರ್ಚನೆಗಾಗಿ ಅಗ್ನಿ ಪ್ರತಿ ಮಾಡಲಾಯಿತು. ಕೆಂಡ ಹಾಯುವ ಮುನ್ನ ಅಂಬು ಹೊಡೆಯುವುದು ಹಾಗೂ ಬಂದೂಕಿನಿಂದ ಗುರಿ ಹೊಡೆಯುವ ಕಾರ್ಯಕ್ರಮ ನಡೆಯಿತು.ಯುವಕರಿಗಾಗಿ ಉರುಡುಕಾಯಿಯನ್ನು ಹಿಡಿಯುವ ಸೇವೆ ನಡೆಯಿತು. ಮೊದಲಿಗೆ ಮಲ್ಲಿಕಾರ್ಜುನ ಸ್ವಾಮಿ ಕೆಂಡಾರ್ಚನೆ ಬಳಿಕ ಶ್ರೀ ಬನ್ನಿ ಮಹಾಂಕಾಳಿ ಅಮ್ಮನವರ ಕೆಂಡಾರ್ಚನೆ ನಡೆಯಿತು. ಶೀ ಮಲ್ಲಿಕಾರ್ಜುನ ಸ್ವಾಮಿ ನೂತನ ದೇವಸ್ಥಾನದ ಕಾಮಗಾರಿ ಪ್ರಾರಂಭವಾಗಿದ್ದು ಸುಮಾರು 3 ಕೋಟಿ ವೆಚ್ಚದಲ್ಲಿ ಶಿಲಾಮಯ ದೇವಸ್ಥಾನವನ್ನು ನಿರ್ಮಿಸಲಾಗುವುದು. ನೂತನ ದೇವಸ್ಥಾನದ ನಿರ್ಮಾಣಕ್ಕೆ ಗ್ರಾಮಸ್ಥರು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಧನ್ಯತೆ ಪಡೆದರು. ಶಿರುವಾಸೆ, ಕಡವಂತಿ, ಕೊಂಡದ ಖಾನ್, ಬಾಸಾಪುರ, ಜೇನುಗದ್ದೆ, ಸಂಗಮೇಶ್ವರ ಪೇಟೆ, ಕಡಬಗೆg,É ಬಾಳೆಹೊನ್ನೂರು, ಬನ್ನೂರು ಹಾಗು ಆಡುವಳ್ಳಿ ಗ್ರಾಮದ ಭಕ್ತರು ಭಾಗವಹಿಸಿದ್ದರು.
ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗದ ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಕೆಂಡಾರ್ಚನೆಗೂ ಮುನ್ನ ನೂರಾರು ವಾಹನಗಳಿಗೆ ಪೂಜಾ ಸಲ್ಲಿಸಲಾಯಿತು. ಧಾರ್ಮಿಕ ವಿಧಿಯನ್ನು ಪರದೇಶಪ್ಪನವರ ಮಠದ ಧರ್ಮಾಧಿಕಾರಿ ಮಧುಕುಮಾರ್ ಹಾಗೂ ಖಾಂಡ್ಯದ ಅರ್ಚಕರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಹುಯಿಗೆರೆ ಕಾಫಿ ಗಿರೀಶ್, ವಿಶ್ವನಾಥ್ ಗದ್ದೆಮನೆ, ತೋರುವಾನೆ ಸುರೇಶ್, ದೇವಸ್ಥಾನದ ಅರ್ಚಕರು ಸೇರಿದಂತೆ ಸಾವಿರಾರು ಭಕ್ತರು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದನ್ಯತೆ ಪಡೆದರು.


