October 22, 2026
;
divya 1

 

 

ಬಣಕಲ್ ಕ್ರೈಸ್ತರ ಅಭಿವೃದ್ದಿ ಸಂಘದ ವತಿಯಿಂದ ಕಳಸ ಸಮೀಪದ ದಿವ್ಯ ಕರುಣಾಲಯ ಅನಾಥ ವೃದ್ಧಾಶ್ರಮಕ್ಕೆ ಅಕ್ಕಿ ಸೇರಿದಂತೆ ವಿವಿಧ ಆಹಾರ ಸಾಮಾಗ್ರಿಯನ್ನು ವಿತರಿಸಲಾಯಿತು.

ಕ್ರೈಸ್ತರ ಅಭಿವೃದ್ದಿ ಸಂಘದ ಅಧ್ಯಕ್ಷ ಪೆಡ್ಡಿ ಲೋಬೊ ಮಾತನಾಡಿ ‘ಸಂಘವು ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ.ಅನಾಥಾಶ್ರಮದಲ್ಲಿ ವೃದ್ದರು, ರೋಗಿಗಳು,ಅನಾಥರು ಇದ್ದಾರೆ.ಕಳೆದ ಬಾರಿ ಅಲ್ಲಿಯೇ ಮಕ್ಕಳ ಹುಟ್ಟು ಹಬ್ಬ ಆಚರಿಸಿ ಅವರೊಂದಿಗೆ ಇಡಿ ದಿನ ಕಳೆದು ಸಹ ಬೋಜನ ಮಾಡಿ ಸಂತಸ ಹಂಚಿಕೊಂಡೆವು.ಆ ಸಮಯದಲ್ಲಿ ಅನಾಥರ ಮುಖದಲ್ಲಿ ಮಂದಹಾಸ ಮೂಡಿತ್ತು.ಈ ಬಾರಿ ನಮ್ಮ ಸಂಘದ ವತಿಯಿಂದಲೂ ದಾನಿಗಳಿಂದಲೂ ಆಹಾರ ದಾನ್ಯ ಬಟ್ಟೆ ಮತ್ತಿತರ ಸಾಮಾಗ್ರಿ ಸಂಗ್ರಹಿಸಿ ಅನಾಥ ಆಶ್ರಮದ ಮುಖ್ಯಸ್ಥರಿಗೆ ನೀಡಿದ್ದೇವೆ. ಅನಾಥರ ಮುಖದಲ್ಲಿ ಸಂತಸ ಕಾಣುವುದೇ ಇದರ ಮುಖ್ಯ ಉದ್ದೇಶವಾಗಿದೆ’ಎಂದರು.

ಈ ಸಮಯದಲ್ಲಿ  ಮೇಲ್ವಿಚಾರಕ ರಾಬಿನ್,ಲವೀನಾ,ಸಂಘದ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್,ಸದಸ್ಯರಾದ ಅರುಣ್ ಮೋರಾಸ್,ಅರುಣ್ ಡಿಕುನ್ನಾ, ಆಲ್ವಿನ್ ಮತ್ತಿತರರು ಇದ್ದರು.

 

 

Leave a Reply

Your email address will not be published. Required fields are marked *