October 30, 2026
;
bjp new

 

 

ಕಾಂಗ್ರೆಸ್ನ ಸುಳ್ಳುಗಳ ಅಧಿಕಾರ ಕೊನೆಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಬಿಜೆಪಿ ಮೂಡಿಗೆರೆ ಮಂಡಲ ಅಧ್ಯಕ್ಷ ಗಜೇಂದ್ರ ತಿಳಿಸಿದರು.

ಅವರು ಮೂಡಿಗೆರೆ ಲಯನ್ ಸರ್ಕಲ್ ನಲ್ಲಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ಜಯಗಳಿಸಿದ ಪ್ರಯುಕ್ತ ವಿಜಯೋತ್ಸವ ಆಚರಿಸಿ ಕಾರ್ಯಕರ್ತರನ್ನು ಉದ್ದೇಶ ಮಾತನಾಡಿ. ಈ ಹಿಂದೆ ಬಿಜೆಪಿ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವವನ್ನು ಆರಂಭಿಸಿತ್ತು. ಅದರಂತೆ ರಾಜ್ಯದ ದಿನ ದಲಿತರು ಬಡವರು. ಮಹಿಳೆಯರು. ಯುವಕರು. ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕ ಕಾರ್ಯ ನಿರ್ವಹಿಸಿತ್ತು. ಆದರೆ ಕಾಂಗ್ರೆಸ್ ಗ್ಯಾರಂಟಿಗಳು ಎಂಬ ಸುಳ್ಳಿನ ಮುಖಾಂತರ ಅಧಿಕಾರಕ್ಕೆ ಬಂದು. ರಾಜ್ಯವನ್ನು ಭ್ರಷ್ಟಾಚಾರದ ಕೋಪವನ್ನಾಗಿಸಿ ದಿವಾಳಿ ಎಬ್ಬಿಸಿದ್ದು. ಇದು ಮತದಾರರಿಗೆ ಅರ್ಥವಾಗುತ್ತಿದ್ದು. ಇದಕ್ಕೆ ನಿದರ್ಶನವೆಂಬಂತೆ ನಾಲ್ಕು ವಿಧಾನ ಪರಿಷತ್ ಸ್ಥಾನಗಳನ್ನು ಬಿಜೆಪಿ ನೇತೃತ್ವದ ಎನ್.ಡಿ.ಎ ಗೆದ್ದುಕೊಂಡಿರುವುದು ಸಾಕ್ಷಿಯಾಗಿದ್ದು. ನಿಮ್ಮ ಅಧಿಕಾರದ ಅವಧಿ ಕೊನೆಗೊಳ್ಳುವ ಕಾಲ ಸಂಗೀತ ಸನ್ನಿತವಾಗಿದೆ ಎಂದು ತಿಳಿಸಿದರು.

ಮುಖಂಡರಾದ  ದೀಪಕ್ ದೊಡ್ಡಯ್ಯ ಮಾತನಾಡಿ; ಕೇಂದ್ರ ಕೇಂದ್ರದಿಂದ ಅನೇಕ ಯೋಜಗಳನ್ನು ರಾಜ್ಯಕ್ಕೆ ನೀಡಿದರು ಕೂಡ ರಾಜ್ಯದಲ್ಲಿ ಕೇವಲ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡು ಜನರ ದಿಕ್ಕು ತಪ್ಪಿಸಲು ಮೋದಿಜಿ ಆಡಳಿತ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗು ಹಿಂದುಗಳನ್ನ ತೆಗಳುವ ಮೂಲಕ ಜನರನ್ನ ದಾರಿ ತಪ್ಪಿಸುವ ನಿಮ್ಮ ಕುತಂತ್ರಕ್ಕೆ ಇಂದು ಉತ್ತರ ಮತದಾರರು ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಶಾಂತ್ ಬಿಳಗುಳ. ಲೋಕೇಶ್ ಮರ್ಕಲ್. ನಯನ ತಳವಾರ. ಸಿದ್ದೇಶ್. ಸಂದೀಪ್. ಪ್ರಸನ್ನ ಕುಂದೂರು. ಬಸವರಾಜ್. ರಂಗಣ್ಣ. ಚಂದ್ರಣ್ಣ. ಪ್ರವೀಣ್. ವಿನ್ಸಿ. ರತನ್ ಊರುಬಗೆ, ಸಂತೋಷ್, ಸುನಿಲ್, ಪದ್ಮನಾಭ, ಬಸವರಾಜು, ಪ್ರಶಾಂತ್ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *