October 30, 2026
;
hakkothaya

 

 

ಬೆಳ್ತಂಗಡಿ ತಾಲ್ಲೂಕಿನ ಅರಿಶಿನ ಮಕ್ಕಿ ಯಲ್ಲಿ ನವೆಂಬರ್ 2ರಂದು ನಡೆಯುವ ಶಿಶಿಲ ಬೈರಾಪುರ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಬೃಹತ್ ಹಕ್ಕೊತ್ಯಾಯ ಸಮಾವೇಶಕ್ಕೆ ಭಾಗವಹಿಸಲು ಬೈರಾಪುರ ಶಿಶಿಲ ರಸ್ತೆಹೋರಾಟ ಸಮಿತಿ ವತಿಯಿಂದ ಮೂಡಿಗೆರೆ ತಾಲ್ಲೂಕಿನ ಊರುಬಗೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಊರುಬಗೆ ಗ್ರಾಮದ ಬಿ.ಕೆ. ಸುಂದರೇಶ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ  ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿ ಸದಸ್ಯ ಎಸ್.ಎ. ವಾಸುದೇವ್ ಸತ್ತಿಗನಹಳ್ಳಿ ; ಶಿಶಿಲ ಭೈರಾಪುರ ರಸ್ತೆ ಅಭಿವೃದ್ಧಿ ಆಗಬೇಕು ಎಂಬುದು ಈ ಭಾಗದ ಜನರ ದಶಕಗಳ ಕನಸಾಗಿದೆ. ಇದಕ್ಕಾಗಿ ಅನೇಕ ಹೋರಾಟಗಳನ್ನು ಮಾಡಲಾಗಿದೆ. ಈ ರಸ್ತೆ ಅಭಿವೃದ್ಧಿಯಾದರೆ ಕರಾವಳಿ ಮತ್ತು ಮಲೆನಾಡಿನ ನಡುವೆ ಸಂಚಾರ ಸುಗಮವಾಗಲಿದ್ದು, ಜನರಿಗೆ ಬಹಳ ಅನುಕೂಲವಾಗಲಿದೆ. ಕಡಿಮೆ ಅಂತರದಿಂದ ಸಂಪರ್ಕ ಸಾಧ್ಯವಾಗಲಿದೆ ಜೊತೆಗೆ ಅತಿವೃಷ್ಟಿ ಪ್ರದೇಶವಾಗಿರುವ ಊರುಬಗೆ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳ ಅಭಿವೃದ್ದಿಗೆ ಪೂರಕವಾಗುತ್ತದೆ ಎಂದರು.

ಅರಸಿನಮಕ್ಕಿಯಲ್ಲಿ ನಡೆಯುವ ಹಕ್ಕೋತ್ತಾಯ ಸಮಾವೇಶಕ್ಕೆ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಲು ಕರೆ ನೀಡಲಾಯಿತು ಹಾಗೆ ಸಮಾವೇಶಕ್ಕೆ ಆಯಾ ಗ್ರಾಮದವರು ವಾಹನದ ವ್ಯವಸ್ಥೆ ಮಾಡಿಕೊಂಡು ಸಮಾವೇಶಕ್ಕೆ 10:30ಕ್ಕೆ ಸೇರಬೇಕಾಗಿ ತೀರ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಮುಖಂಡರಾದ ಸತೀಶ್ ಊರುಬಗೆ, ಸತ್ಯೇಂದ್ರ ಹೊಸಕೆರೆ, ಪ್ರೇಮ್ ಕುಮಾರ್ ಸತ್ತಿಗನಹಳ್ಳಿ, ಮಹೇಶ್ ಸತ್ತಿಗನಹಳ್ಳಿ, ಜಯದೇವ ಸತ್ತಿಗನಹಳ್ಳಿ, ಸುಂದರೇಶ್ ಊರುಬಗೆ, ಪುಟ್ಟೇಗೌಡ್ರು ಬೈರಾಪುರ, ಶ್ರೇಯಸ್ ಹೊಸಕೆರೆ, ಲಿಂಗಪ್ಪ ಹೊಸಕೆರೆ, ಅಣ್ಣಪ್ಪ ಹೊಸಕೆರೆ ಮುಂತಾದವರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *