November 3, 2026
;
suddi-7

 

 

ಬದಲಾದ ಇಂದಿನ ಕಾಲಮಾನದಲ್ಲಿ ಶಿಕ್ಷಕರು ಕೇವಲ ಪಠ್ಯವನ್ನು ಬೋಧಿಸುವವರಾಗದೆ ವಿದ್ಯಾರ್ಥಿಗಳಿಗೆ ಆಪ್ತರಾಗಿ, ಮಾರ್ಗದರ್ಶಕರಾಗಿ, ಬದುಕನ್ನು ತೋರಿಸುವ ದಾರಿದೀಪವಾಗಿಯೂ ಕೆಲಸ ಮಾಡಬೇಕು ಎಂದು ಮನೋ ಸಂವಾದ ಸಂಸ್ಥೆಯ ಸಂಸ್ಥಾಪಕ, ಮನಶಾಸ್ತ್ರಜ್ಞ, ಅಕ್ಷರ ದಾಮ್ಲೆ ಸಲಹೆ ಮಾಡಿದರು.

ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶನಿವಾರ ನಡೆದ ಗುರುವಂದನೆ ಮತ್ತು ನಿವೃತ್ತ ನೌಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜೀವನವನ್ನು ಕಟ್ಟಿಕೊಳ್ಳಲು ಶಿಕ್ಷಣ ವೊಂದೇ ಸುಲಭವಾದ ಸಾಧನ, ಇಂದು ನಾವು ಏನಾಗಿದ್ದೇವೋ ಅದಕ್ಕೆ ಮೂಲ ಕಾರಣ ನಮ್ಮ ಶಿಕ್ಷಕರು, ಮಕ್ಕಳ ಎಲ್ಲಾ ಕೀಟಲೆಗಳನ್ನು, ಅವರು ನೀಡುವ ಕಷ್ಟಗಳನ್ನು ಸಹಿಸಿಕೊಂಡು ಅವರು ವಿದ್ಯಾದಾನ ಮಾಡುತ್ತಾರೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುತ್ತಿದ್ದಾರೆ, ಬಹಳ ಬೇಗ ಹತಾಶೆಗೆ, ಖಿನ್ನತೆಗೆ ಒಳಗಾಗುತ್ತಿದ್ದಾರೆ, ದೇಶದಲ್ಲಿಂದು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿμÁದಿಸಿದರು.

ಇಂದು ಬಹುತೇಕ ಎಲ್ಲಾ ಕುಟುಂಬಗಳಲ್ಲೂ ತಂದೆ ತಾಯಿ ಇಬ್ಬರೂ ಉದ್ಯೋಗಸ್ಥರಾಗಿರುವುದರಿಂದ ಒತ್ತಡ ಮತ್ತು ದಾವಂತದಲ್ಲಿ ತಮ್ಮಮಕ್ಕಳ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ, ಅವರ ಆಗು ಹೋಗುಗಳನ್ನು ಗಮನಿಸಲಾಗುತ್ತಿಲ್ಲ ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಅನಾಥ ಭಾವನೆ ಹೆಚ್ಚಾಗುತ್ತಿದೆ ಎಂದ ಅವರು ಈ ಹಿನ್ನೆಲೆಯಲ್ಲಿ ಶಿಕ್ಷಕರು ಪಠ್ಯದ ಜೊತೆಗೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢ ಗೊಳಿಸುವ, ಅವರನ್ನು ಕೈಹಿಡಿದು ನಡೆಸುವ, ಅವರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ ಡಿ.ಎಲ್. ವಿಜಯಕುಮಾರ್ ಸಂಸ್ಥೆ ಬೆಳವಣಿಗೆಗೆ ದುಡಿದಿರುವ ನಿವೃತ್ತ ಶಿಕ್ಷಕರನ್ನು ಮತ್ತು ನೌಕರರನ್ನು ಸನ್ಮಾನಿಸಿ, ಗೌರವಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಲೆನಾಡು ವಿದ್ಯಾಸಂಸ್ಥೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ, ಇತ್ತೀಚೆಗμÉ್ಟೀ ಶಿಕ್ಷಕರು ಮತ್ತು ನೌಕರರ ಸಂಬಳವನ್ನು ಶೇ 15 ರಿಂದ 20ರಷ್ಟು ಹೆಚ್ಚಳ ಮಾಡಲಾಗಿದೆ, ಸಂಸ್ಥೆಗೆ ಐದು ಬಸ್ ಗಳನ್ನು ಖರೀದಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಂ.ವಿ.ಷಡಾಕ್ಷರಿ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು, ಭವಿಷ್ಯವನ್ನು ರೂಪಿಸುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಶಿಕ್ಷಕರು ರಾಷ್ಟ್ರದ ಭವಿಷ್ಯದ ನಿರ್ಮಾತೃಗಳು ಎಂದು ಹೇಳಿದರು.

ಇತ್ತೀಚಿಗೆ ನಿಧನರಾದ ಸಂಸ್ಥೆಯ ಶಿಕ್ಷಕ ಜಿ. ಮಲ್ಲೇಗೌಡ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಚರಣೆ ಮಾಡಲಾಯಿತು. ನಿಕಟ ಪೂರ್ವ ಅಧ್ಯಕ್ಷ ಎನ್.ಕೇಶವಮೂರ್ತಿ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು,

ಸೇವೆಯಿಂದ ನಿವೃತ್ತಿ ಹೊಂದಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಮಲೆನಾಡು ವಿದ್ಯಾ ಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದರೇಶ್, ಸಹಕಾರ್ಯದರ್ಶಿ ಎಸ್.ಶ್ರೀಧರ್, ಖಜಾಂಚಿ ಎಂ.ಎನ್.ರಾಕೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ನಂಜೇಗೌಡ, ಬಸವೇಗೌಡ, ಆದಿತ್ಯ, ಎಂ.ಎಂ.ಗೌತಮ್, ಬಿ.ಸಿ.ವಿವೇಕ್, ಚಿದಾನಂದ್ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಕೆ.ಎನ್.ಮಂಜುನಾಥ ಭಟ್, ಕಚೇರಿ ವ್ಯವಸ್ಥಾಪಕಿ ಶ್ರೀ ಲಕ್ಷ್ಮಿ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *