November 3, 2026
;
suddi2

 

 

ಶೃಂಗೇರಿ ಕ್ಷೇತ್ರದಾದ್ಯಂತ ಕಾಡು ಪ್ರಾಣಿಗಳ ಉಪಟಳ ಮಿತಿಮೀರಿದ್ದು ಜನರು ಹಾಗೂ ಕೃಷಿಕರು ದಾಳಿಯಿಂದ ರೋಸಿ ಹೋಗಿದ್ದಾರೆ. ಬಾಳೆಹೊನ್ನೂರು ಅರಣ್ಯ ಇಲಾಖೆ ವ್ಯಾಪ್ತಿಯ ಪಟ್ಟಣದ ಹೊರವಲಯದ ಹಳ್ಳಿಗಳಲ್ಲಿ ಜನರು ಭಯದ ವಾತಾವರಣದಲ್ಲಿ ಬದುಕಬೇಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸಮೀಪದ ಇಟ್ಟಿಗೆ ಸಿಗೋಡಿನಲ್ಲಿ ಕಾಡುಕೋಣಗಳು ದಾರಿ ಪಕ್ಕದಲ್ಲಿ ನಿಲ್ಲುತ್ತವೆ. ಕಾಡು ಕೋಣ ಹಾಗೂ ಕಾಡು ಹಂದಿ ದಾಳಿಯಿಂದ ಬಹುತೇಕ ರೈತರು ಭತ್ತದ ಕೃಷಿಯನ್ನು ಬಿಟ್ಟಿದ್ದಾರೆ ಭತ್ತದ ಕಣಜವಾಗಿದ್ದ ಬಾಳೆಹೊನ್ನೂರಿನಲ್ಲಿ ಇದೀಗ ಬೆರಳೆಣಿಕೆ ರೈತರು ಭತ್ತದ ಕೃಷಿಯನ್ನು ಮಾಡುತ್ತಿದ್ದು ಬೆಳೆ ರಕ್ಷಣೆಗಾಗಿ ಹರಸಾಹಸ ಪಡುತ್ತಿದ್ದಾರೆ.   ಕಾಡು ಹಂದಿಗಳು ಭತ್ತದ ಗದ್ದೆಯ ಬದು ಹಾಗೂ ತೋಟದಲ್ಲಿ ಬೆಳೆದಿದ್ದ ಕರಿಕೆಸುವಿನ ಗಡ್ಡೆ ಹಾಗೂ ಕೆಸುವಿನ ಬಳ್ಳಿಯನ್ನು ತಿಂದು ಹಾಕಿ, ಅಡಿಕೆ ಸಸಿಯನ್ನು ಕಿತ್ತು ಹಾಕಿರುತ್ತದೆ. ಕಾಡುಕೋಣಗಳು ಸುಮಾರು ಐದರಿಂದ ಆರು ಅಡಿ ಎತ್ತರಕ್ಕೆ ಬೆಳೆದ ಅಡಿಕೆ ಮರವನ್ನು ನಾಶಪಡಿಸುತ್ತಿವೆ.

ಎಲೆಕಲ್ ಬಸವನಕೋಟೆ ಮೀಸಲು ಅರಣ್ಯ ಹಾಗೂ ಜೇನು ಗದ್ದೆ, ಬಸರವಳ್ಳಿ ಸುತ್ತ ಮುತ್ತ ಎರಡು ಕಾಡಾನೆಗಳು ಸಂಚರಿಸುತ್ತಿದು,್ದ ಜನರು ಭಯದ ವಾತಾವರಣದಲ್ಲಿ ತಿರುಗುತ್ತಿದ್ದಾರೆ. ಅರಣ್ಯ ಇಲಾಖೆ ಸಂಜೆಯ ವೇಳೆ ಮನೆಯಿಂದ ಹೊರಬರದಂತೆ ವಾಟ್ಸಪ್ ಮೆಸೇಜ್ ಹಾಕಿರುತ್ತಾರೆ ಇದರಿಂದ ಜನರು ಇದರಿಂದ ಯಾವುದೇ ಕ್ಷಣದಲ್ಲಿ ಆನೆ ಮಾಡಿ ದಾಳಿ ಮಾಡಬಹುದೆಂಬ ಭಯದಲ್ಲಿದ್ದಾರೆ.

ಪಟ್ಟಣದಲ್ಲಿ ಮಂಗಗಳ ಕಾಟ ಮಿತಿಮೀರಿದ್ದು ಮುಖ್ಯರಸ್ತೆ ಪಕ್ಕದ ಸುಧಾಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಮಂಗಗಳ ಗುಂಪು ಇತ್ತೀಚಿಗೆ ಬೇಕರಿ ಗೆ ನುಗ್ಗಿ ಬ್ರೆಡ್, ಪರೋಟ ಹಾಗೂ ಇನ್ನಿತರ ತಿಂಡಿ ತಿನಿಸುಗಳನ್ನು ಹೊತ್ತು ತಿಂದಿದೆ.  ಮಾರಿಗುಡಿ ರಸ್ತೆಯಲ್ಲಿ ೫೦ಕ್ಕೂ ಹೆಚ್ಚು ಹಾಗೂ ಹನುಮಾನ್ ಗಲ್ಲಿಯಲ್ಲಿ ೨೫ಕ್ಕೂ ಹೆಚ್ಚು ಮಂಗಗಳು ಉಪಟಳ ನೀಡುತ್ತಿದೆ. ಶಾಂತಿನಗರ ಹಾಗೂ ಕುಂಬಾರಗಲ್ಲಿಯಲ್ಲಿ ಮಂಗಗಳು ಮನೆಯ ಮೇಲ್ಚಾವಣಿ ಹೆಂಚು ತೆಗೆದು ಮನೆ ಒಳಗೆನುಗುತ್ತಿವೆ. ಒಣಹಾಕಿದ ಬಟ್ಟೆಯನ್ನು ತೆಗೆದುಕೊಂಡು ಹೋಗಿ ತೆಂಗಿನ ಮರದಲ್ಲಿ ಕುಳಿತುಕೊಳ್ಳುತ್ತದೆ ಹಾಗೂ ಎಳನೀರು ಕುಡಿದು ಹಂಚು ಮೇಲೆ ಹಾಕುತ್ತಿದ್ದು ಹಂಚುಗಳು ಒಡೆದು ಹೋಗುತ್ತಿದೆ.

ಮೇಗುಂದ ಹೋಬಳಿ ತಿಲಿಕೆ ರಾಘವೇಂದ್ರರವರ ಮನೆಂಗಳಕ್ಕೆ ಇತ್ತಿಚೆಗೆ ಚಿರತೆಯೊಂದು ಬಂದಿದ್ದು, ಅರಣ್ಯ ಇಲಾಖೆಯವರು ಬೋನ್À ಇಟ್ಟು ಚಿರತೆ ಹಿಡಿಯುತ್ತೇವೆ ಎಂದು ಹೇಳಿ ತಿಂಗಳು ಕಳೆದರೂ ಇದುವರೆಗೂ ಬೋನನ್ನು ಇಟ್ಟಿರುವುದಿಲ್ಲ. ಸಸಿ ಮನೆ ಎಂಬಲ್ಲಿ ಶಿವಶಂಕರ ಎಂಬುವರ ಕೃಷಿ ಜಮೀನಿಗೆ ಕಾಡುಕೋಣಗಳ ಗುಂಪು ನುಗ್ಗಿ ಭತ್ತದ ಗದ್ದೆ ಕೃಷಿಯನ್ನು ತುಳಿದು ತಿಂದು ಹಾಕಿದೆ ಇದರಿಂದ ರೈತರಿಗೆ ನಷ್ಟವಾಗಿದೆ.

ಈ ಕಾಡು ಪ್ರಾಣಿಗಳ ಉಪಟಳದ ಬಗ್ಗೆ ಬಾಳೆಹೊನ್ನೂರಿನ ಎ ಸಿ ಎಫ್ ಮೋಹನ್ ಅವರನ್ನು ಪ್ರಶ್ನಿಸಿದಾಗ ಉತ್ತರಿಸಿದ ಅವರು ಬೆಳೆ ನಾಶದ ಬಗ್ಗೆ ಅರ್ಜಿಯನ್ನು ನೀಡಿದರೆ ಪರಿಹಾರ ಕೊಡಿಸುವುದಾಗಿ ತಿಳಿಸಿದ್ದಾರೆ. ಹಾಗೂ ಕಾಡುಕೋಣಗಳನ್ನು ಓಡಿಸುವ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದ್ದಾರೆ, ಹಾಗೂ ಮಂಗಗಳನ್ನು ಹಿಡಿಯಲು ಗ್ರಾಮ ಪಂಚಾಯಿತಿಯವರು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *