November 3, 2026
;
IMG-20261102-WA0334

 

 

ಕೊಟ್ಟಿಗೆಹಾರ ಪಟ್ಟಣ ಸೇರಿದಂತೆ ಬಣಕಲ್,ಕೊಟ್ಟಿಗೆಹಾರ, ಜಾವಳಿ,ಬಾಳೂರು,ಕೂವೆ,ಕೆಳಗೂರು ಸೇರಿದಂತೆ ಜಿಲ್ಲೆಯಾದ್ಯಂತ ಕ್ರೈಸ್ತರು ಸೋಮವಾರ ಮೃತರಾದ ಕುಟುಂಬದ ಸದಸ್ಯರ ಸಮಾಧಿಗೆ ತೆರಳಿ ವಿಶೇಷ ಪ್ರಾರ್ಥನೆ ನೆರವೇರಿಸಿ ಸಮಾದಿ ಹಬ್ಬ ಆಚರಿಸಿದರು.

ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚ್ ದರ್ಮಗುರು ಫಾ.ವಿಲಿಯಂ ಡಿ ಬೆರ್ನಾರ್ಡ್ ಮಾತನಾಡಿ ‘ಕ್ರೈಸ್ತರಿಗೆ ಮರಣವು ಇಹಲೋಕ ಜೀವನದ ಅಂತ್ಯವಾದರೂ,ಕ್ರಿಸ್ತರಲ್ಲಿ ನಮಗೆ ದೊರೆತಿರುವ ನಿತ್ಯಜೀವದ ಭರವಸೆಯ ಅಂತ್ಯವಲ್ಲ, ಪುನರುಜ್ಜೀವನದ ಆರಂಭವಾಗಿದೆ.ಶರೀರ ನಶ್ವರವಾದರೂ ಆತ್ಮಕ್ಕೆ ಪುನರುತ್ಥಾನವಿದೆ.ನಾವು ಸಮಾಜದಲ್ಲಿ ನೆಲೆಸುವಾಗ ಉತ್ತಮ ಮಾದರಿ ಕಾರ್ಯಗಳ ಮೂಲಕ ಉತ್ತಮ ಜೀವನ ನಡೆಸಬೇಕು.ಯೇಸು ಕ್ರಿಸ್ತರು ಶಿಲುಭೆಯ ಮೂಲಕ ನಮಗಾಗಿ ಪ್ರಾಣ ತ್ಯಾಗಮಾಡಿ ಪಾಪ ವಿಮುಕ್ತ ಗೊಳಿಸಿದರು.ಅವರ ತ್ಯಾಗಮಯೀ ಜೀವನ ನಮಗೆ ಆದರ್ಶವಾಗಿದೆ.ಮೃತರು ಸ್ವರ್ಗ ಸಾಮ್ರಾಜ್ಯದಲ್ಲಿ ಆನಂದ ಪಡೆಯುವಂತಾಗಲು ನಮ್ಮೆಲ್ಲರ ಪ್ರಾರ್ಥನೆ ಅವರಿಗೆ ತುಂಬಾ ಅವಶ್ಯಕತೆ ಇದೆ’ ಎಂದರು.

ಕೊಟ್ಟಿಗೆಹಾರ ಪಟ್ಟಣದ ಸಂತ ಅಂತೋಣಿ ಚರ್ಚಿನಲ್ಲಿ ಫಾ.ಸುನಿಲ್ ರೊಡ್ರಿಗಸ್, ಬಣಕಲ್ ಬಾಲಿಕ ಮರಿಯ ಚರ್ಚಿನಲ್ಲಿ ಫಾ.ಪ್ರೇಮ್ ಲಾರೆನ್ಸ್ ಡಿಸೋಜ,ಫಾ.ತೋಮಸ್ ಕಲಘಟಗಿ,ಕೂವೆ ಚರ್ಚಿನಲ್ಲಿ ಫಾ.ಮಾರ್ಸೆಲ್ ಪಿಂಟೊ,ಕಸ್ಕೇಬೈಲ್ ಚರ್ಚಿನಲ್ಲಿ ಫಾ. ಪೀಟರ್ ಬ್ರ್ಯಾಂಕ್ ಸಮಾಧಿ ಹಬ್ಬದ ವಿಶೇಷ ಪೂಜೆ ಸಲ್ಲಿಸಿ ಸಮಾದಿಗಳನ್ನು ತೀರ್ಥ ಪ್ರೋಕ್ಷಣೆ ಮಾಡಿ ಮಂತ್ರಿಸಿದರು.ಕ್ರೈಸ್ತರು ತಮ್ಮ ಕುಟುಂಬದಲ್ಲಿ ಮೃತರಾದ ಸದಸ್ಯರ ಸಮಾಧಿಗಳನ್ನು ಸ್ವಚ್ಛಗೊಳಿಸಿ ಹೂಗಳಿಂದ ಶೃಂಗರಿಸಿ ಮೇಣದ ಬತ್ತಿ ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 

 

Leave a Reply

Your email address will not be published. Required fields are marked *