November 4, 2026
;
3Mudigere1A

 

 

ಮತಪಟ್ಟಿ ಪರಿಷ್ಕರಣೆ ನೆಪದಲ್ಲಿ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಡಲು ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗ ಷಡ್ಯಂತ್ರ ರೂಪಿಸಿದ್ದು, ಈ ಪ್ರಕ್ರಿಯೆಯಿಂದ ಗುಡ್ಡ ಅಗೆದು ಇಲಿ ಹಿಡಿದಂತಾಗಿದೆ ಎಂದು ಬಣಕಲ್ ಮೀಲಾದ್ ಟ್ರಸ್ಟ್ ಅಧ್ಯಕ್ಷ ಜಾಕೀರ್ ಹುಸೇನ್ ದೂರಿದರು.

ಅವರು ಮಂಗಳವಾರ ಮೂಡಿಗೆರೆ ತಾಲೂಕು ಕಚೇರಿ ಆವರಣದಲ್ಲಿ ಬಣಕಲ್ ಮೀಲಾದ್ ಟ್ರಸ್ಟ್ ವತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಬಾಂಗ್ಲಾ ನುಸುಳುಕೋರರನ್ನು ಪತ್ತೆಹಚ್ಚುವ ಉದ್ದೇಶದಿಂದ ಎಸ್‍ಐಆರ್ ಪ್ರಕ್ರಿಯೆ ನಡೆಸುತ್ತಿರುವುದಾಗಿ ಕೇಂದ್ರ ಸರಕಾರ ಹೇಳಿದೆ. ಆದರೆ ಕರ್ನಾಟಕದಲ್ಲಿ ಪತ್ತೆಯಾದ ಇಬ್ಬರು ಮಹಿಳೆಯರು ವಿವಾಹವಾಗಿ ರಾಜ್ಯಕ್ಕೆ ಬಂದಿರುವುದು ತನಿಖೆಯಿಂದ ತಿಳಿದುಬಂದಿದೆ. ರಾಜ್ಯದಲ್ಲಿ 99.25 ಲಕ್ಷ ನೈಜ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದ್ದು, ಮೂಡಿಗೆರೆ ತಾಲೂಕಿನಲ್ಲಿ 13,872 ಮಂದಿ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಈ ಪ್ರಕ್ರಿಯೆಗೆ ಸರಕಾರದ ಬೊಕ್ಕಸದಿಂದ 10 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿದರು.

ಮೀಲಾದ್ ಟ್ರಸ್ಟ್ ಮುಖಂಡ ಗೌಸ್ ಮೊಹಿಯುದ್ದೀನ್ ಮಾತನಾಡಿ, ಎಸ್‍ಐಆರ್ ಪ್ರಕ್ರಿಯೆ ವೇಳೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಸಮುದಾಯದವರನ್ನು ಹಾಗೂ ಮುಸ್ಲಿಮರ ಹೆಸರುಗಳನ್ನು ಮತಪಟ್ಟಿಯಿಂದ ಕೈಬಿಡುವ ಉದ್ದೇಶದಿಂದ ಫಾರಂ ನಂ.7ರಲ್ಲಿ ಸುಳ್ಳು ಅರ್ಜಿಗಳನ್ನು ಸಲ್ಲಿಸಿ ಸಂಚು ರೂಪಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ ಇದುವರೆಗೆ ಕ್ರಮ ಜರುಗಿಸಿಲ್ಲ. ಮುಸ್ಲಿಮರ ವಿರುದ್ಧದ ದಾಳಿಗಳನ್ನು ತಡೆಯುವಲ್ಲಿ ಸರಕಾರ  ವಿಫಲವಾಗಿದೆ ಎಂದು ದೂರಿದರು.

ಬಳಿಕ ತಹಸೀಲ್ದಾರ್ ಎಸ್.ಅಶ್ವಿನಿ ಅವರ ಮೂಲಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಪೆÇಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಹಸನ್ ಹಾಜಿ, ಫಾರೂಕ್, ಹಂಝ, ನಜೀರ್, ಪಿ.ಕೆ.ಹನೀಫ್, ಮುಂತು, ಜಾಕಿರ್ ಅಲಿ ಖಾನ್, ಶಂಶುದ್ದೀನ್, ಅಕ್ಬರಲಿ, ಅಜೀಜ್, ಸಿದ್ದೀಕ್, ಶಬ್ಬೀರ್ ಅಹಮದ್ ಹೊರಟಿ, ಅಬ್ದುಲ್ ಬಾಬಾ, ಮುನಫ್ ಸಾಬ್, ಅನೀಸ್, ಕರೀಂ, ಸಿದ್ದೀಕ್ ಕೊಟ್ಟಿಗೆಹಾರ, ಮಹಮ್ಮದ್ ಹನೀಫ್ ಹೈದ್ರೋಸ್, ಕೆ.ಪಿ.ಖಾಲಿದ್, ಎಂ.ಯು.ಶರೀಫ್ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *