November 14, 2026
;
suddi6

 

 

ರೈತರ ಭೂಮಿ ಮತ್ತು ಗ್ರಾಮಸ್ಥರ ಹಕ್ಕುಗಳಿಗೆ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ಸಮೀಪ ಅಂಬಳೆ ಹೋಬಳಿ ಗೌಡನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಬುಧವಾರ ರೈತ ಸಂಘ-ಹಸಿರು ಸೇನೆ, ವಿವಿಧ ಪ್ರಗತಿಪರ-ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಆಜಾದ್‍ಪಾರ್ಕ್ ಸಮೀಪ ಪ್ರತಿಭಟನೆ ನಡೆ ಸಿದರು.

ನೂರಾರು ರೈತರು ಪಾದಯಾ ತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಕಣ್ಣಾರೆ ಸಮಸ್ಯೆ ನೋಡಿ, ನ್ಯಾಯ ಒದಗಿಸಿ ಎಂದು ಮನವಿ ಸಲ್ಲಿಸು ವ ವೇಳೆಯಲ್ಲಿ ರೈತರು ತೆರಳಿದಾಗ ಪೊಲೀಸರು ಜಿಲ್ಲಾಸ್ಪತ್ರೆ ಸಮೀಪದಲ್ಲೇ ತಡೆಹಿಡಿದರು.

ಈ ಕುರಿತು ಮಾತನಾಡಿದ ರೈತ ಸಂಘದ ಸದಸ್ಯ ಸುನೀಲ್‍ಕುಮಾರ್ ಗೌಡನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಪ್ರತಿ ಭಟನೆ ಕಳೆದ ಐದಾರು ದಿನಗಳಿಂದ ನಡೆಯುತ್ತಿದ್ದರೂ, ಜಿಲ್ಲಾಡಳಿತ ಅಥವಾ ಸಂಬಂಧಿಸಿದ ಅಧಿಕಾರಿಗಳು  ಗಮನಹರಿಸುತ್ತಿಲ್ಲ. ಈ ಬಗ್ಗೆ ಗ್ರಾಮಕ್ಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಸಮಸ್ಯೆ ಪರಿಶೀಲಿಸಬೇಕು ಎಂ ದು ಮನವಿ ಸಲ್ಲಿಸಲು ಬಂದಿದ್ದೇವೆ ಎಂದರು.

ಗ್ರಾಮಸ್ಥರ ಸಮ್ಮುಖದಲ್ಲಿ ಜಂಟಿ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಗಳು ವೈಜ್ಞಾನಿಕವಾಗಿ ಮತ್ತು ತಾಂ ತ್ರಿಕವಾಗಿ ದೃಢಪಟ್ಟಲ್ಲಿ ಅವುಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಪ್ರಮುಖ ನಿರ್ಣಯವಾಗಿದೆ. ಅದಕ್ಕಾಗಿ ನೂರಾರು ರೈತರು ಬಾಂಧವರು ಪಾದಯಾತ್ರೆ ಮೂಲಕ ಜಿಲ್ಲಾಡಳಿತಕ್ಕೆ ನೀಡು ತ್ತಿರುವ ಪ್ರೀತಿಯ ಆಹ್ವಾನ ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿಗಳು ಪ್ರಜಾಸೇವೆ ಯೋಜನೆ ಜಾರಿಗೊಳಿಸಿ, ಅಧಿಕಾರಿಗಳು, ಸಚಿವರನ್ನು ಜನ ರೊಂದಿಗೆ ಸಮಸ್ಯೆ ಆಲಿಸಬೇಕು ಎಂಬ ಆದೇಶ ಹೊರಡಿಸಿದ್ದಾರೆ. ಆದರೆ ಗೌಡನಹಳ್ಳೀ ಗ್ರಾಮಸ್ಥರ ಐದಾರು ತಿಂಗಳ ಪ್ರತಿಭಟನೆಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸದೇ ಮುಖ್ಯಮಂತ್ರಿಗಳ ಆದೇಶ ಉಲ್ಲಂಘಿಸಿದ್ದಾರೆ ಎಂದು ದೂರಿದರು.

ಈ ಭಾಗದಲ್ಲಿ ಅತಿಹೆಚ್ಚು ಕೂಲಿಕಾರ್ಮಿಕರ ವಾಸಿಸುವ ಗ್ರಾಮ. ಕಾರ್ಖಾನೆಗಳಿಂದ ಹೊರ ಸೂಸುವ ವಿಷಅನಿಲ, ದೂಳಿನಿಂದ ಗ್ರಾಮಸ್ಥರ ಆರೋಗ್ಯದಲ್ಲಿ ಸಮಸ್ಯೆ ಕಾಡುತ್ತಿದೆ. ಕಾರ್ಖಾನೆಗಳ ನೀರು ಜಮೀನು, ಕೆರೆಗೆ ಹರಿಸುವ ಪರಿಣಾಮ ಬೆಳೆ ಕರಗಿ ಹೋಗುತ್ತಿದೆ. ಕೆರೆಯ ಮೀನುಗಳು ಸಾಯುತ್ತಿವೆ ಎಂದು ಆರೋಪಿಸಿದರು.

ವಕೀಲ ಅನಿಲ್ ಮಾತನಾಡಿ  ಗ್ರಾಮಸ್ಥರು ಭೂಮಿ, ಮನೆಗಾಗಿ ಪಾದಯಾತ್ರೆ ಬಂದಿಲ್ಲ. ಮಾಲಿನ್ಯ ತಡೆಗಟ್ಟಿ ಆರೋಗ್ಯಯುತ ಬದುಕು, ಭವಿಷ್ಯದ ಮಕ್ಕಳ ಹಿತದೃಷ್ಟಿಯಿಂದ ಹಸಿರು, ನೀಲಿ ಶಾಲು ಹಾಕಿ ಪಾದಯಾತ್ರೆ ಮಾಡಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ದೇಶದ ಬೆನ್ನೆಲುಬು ರೈತರ ಸಮಸ್ಯೆ ಆಲಿಸು ವುದು ಆದ್ಯ ಕರ್ತವ್ಯ ಎಂದರು.

ಈಗಾಗಲೇ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಲ್ಲ, ಕೊಳಕು ನೀರಿನಿಂದ ಜಾನುವಾರುಗಳು ಸಾವನ್ನ ಪ್ಪುತ್ತಿವೆ. ಅಲ್ಲದೇ ಕೊಳಚೆ ನೀರು ಜಮೀನಿಗೆ ಹರಿದಿರುವ ಪರಿಣಾಮ ಉತ್ತಮ ಬೆಳೆಗಳು ಬೆಳೆಯಲಾಗದ ಸ್ಥಿತಿ  ಗ್ರಾಮಸ್ಥರದ್ದಾಗಿದೆ. ದೇಶದ ಸಂವಿಧಾನದಡಿ ಪ್ರತಿಭಟಿಸುವ ಹಕ್ಕಿದೆ. ಆದರೆ ಪೊಲೀಸರು ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬಾರದು ಎಂದು ಹೇಳಿದರು.

ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ ಗೌಡನಹಳ್ಳಿ ಗ್ರಾಮದಲ್ಲಿ ಅನೇಕ ಕೈಗಾರಿಕಾ ಕಾರ್ಖಾನೆಗಳು ಸ್ಥಾಪನೆಗೊಂಡಿದೆ. ಈ ಕಾರ್ಖಾನೆಗಳು ವಾಯುಮಾಲಿನ್ಯ ಉಂಟು ಮಾಡಿ  ಗ್ರಾಮಸ್ಥರಿಗೆ ತೊಂದರೆ ನೀಡುವುದು ಸರಿಯಲ್ಲ. ಈ ಸಮಸ್ಯೆ ಆಲಿಸಲು ಜಿಲ್ಲಾ ದಂಡಾಧಿಕಾರಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಮನವಿ ಸ್ವೀಕರಿಸಿದ ದಿನಾಂಕ ನಿಗದಿಪಡಿಸುತ್ತೇವೆ ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಡಿ.ರಾಮೇಗೌಡ, ಕೆ.ಟಿ.ರಾಧಾಕೃಷ್ಣ, ಹುಣಸೇಮಕ್ಕಿ ಲಕ್ಷ್ಮಣ್, ಎಂ.ಸಿ.ಗಣೇಶಗೌಡ, ಎಂ.ಚಂದ್ರಶೇಖರ್, ನಜ್ಮಾಆಲಿ, ಚಿನ್ನಲಕ್ಷ್ಮೀ, ಕೆ.ಕೆ.ರವಿ, ಗ್ರಾಮಸ್ಥರಾಧ ಮೋಹನ್ ಗೌಡ, ಗಂಗಾಧರ್, ಚಂದ್ರೇಗೌಡ, ಹರೀಶ್‍ಗೌಡ, ಮಂಜೇಗೌಡ, ಶಿವಶಂಕರ್, ಕೆಂಚೇಗೌಡ, ಲಕ್ಷ್ಮಣಗೌಡ,  ಗೋವಿಂದೇಗೌಡ, ದರ್ಶನ್, ವೆಂಕಟೇಶ್‍ಗೌಡ, ನಿಂಗೇಗೌಡ, ಚಿಕ್ಕೇಗೌಡ, ಸುಬ್ಬೇಗೌಡ ಮುಂತಾದವರಿದ್ದರು.

 

 

Leave a Reply

Your email address will not be published. Required fields are marked *