November 19, 2026
;
suddi-8 (1)

 

 

ಕಂಟ್ರಾಕ್ಟರ್ ವೃತ್ತಿಗೆ ಜೊತೆಗೆ ಸಂಘವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿ ಕವಾಗಿ ಸಮಾಜಮುಖಿ ಕಾರ್ಯದಲ್ಲೂ ತೊಡಗಿಸಿಕೊಂಡು ಬಡಜನರಿಗೆ ಸಹಾಯಹಸ್ತ ಚಾಚುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕಂಟ್ರಾಕ್ಟರ್‍ಗಳ ಸಂಘದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ ಹೇಳಿದರು.

ನಗರದ ಜಿಲ್ಲಾ ಕಂಟ್ರಾಕ್ಟರ್‍ಗಳ ಸಂಘದ ಕಚೇರಿಯಲ್ಲಿ 2025-26ನೇ ಸಾಲಿನ 16ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಅವರು ಮಾತನಾಡಿದರು.

ಇತ್ತೀಚೆಗೆ ಆಶಾಕಿರಣ ಅಂಧಮಕ್ಕಳ ಅನುಕೂಲಕ್ಕೆ ಊಟದ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ  ಕದ್ರಿಮಿದ್ರಿ ಹಾಗೂ ಇಂದಾವರ ಸಮೀಪದ ವೃದ್ದಾಶ್ರಮಕ್ಕೆ ಊಟೋಪಚಾರ ವ್ಯವಸ್ಥೆ ಸೇರಿದಂತೆ ಆಸಕ್ತ ಸಾ ರ್ವಜನಿಕ ವಲಯಕ್ಕೆ ಸಾಮಾಜಿಕವಾಗಿ ನೆರವು ಕಲ್ಪಿಸುತ್ತಿದೆ ಎಂದು ತಿಳಿಸಿದರು.

ಆರ್ಥಿಕವಾಗಿ ತೊಂದರೆಯಲ್ಲಿ ಸಿಲುಕಿರುವ ಗುತ್ತಿಗೆದಾರರು ಮರಣ ಹೊಂದಿದರೆ ಅವರಿಗೆ ಸಂಘ ದ ವತಿಯಿಂದ ಧನಸಹಾಯ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೇ ಸಂಘದಿಂದ ಶಿಕ್ಷಣ ಸಂಸ್ಥೆ ಆರಂಭಿ ಸುವ ಆಲೋಚನೆಯಿದ್ದು, ಈ ಬಗ್ಗೆ ಜಿಲ್ಲಾಡಳಿತಕ್ಕೆ ನಿವೇಶನಕ್ಕಾಗಿ ಸದ್ಯದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರತಿವರ್ಷವು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ಗುತ್ತಿಗೆದಾರರ ಮಕ್ಕಳಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಅದರಂತೆ ಸಂಘದ ಹಿರಿಯ ಗುತ್ತಿಗೆದಾರರನ್ನುನ ಗುರು ತಿಸಿ ಸಂಘದಿಂದ ಸನ್ಮಾನಿಸಲಾಗಿದೆ ಎಂದು ತಿಳಿಸಿದರು.

ಆರ್ಥಿಕ ವರ್ಷದಲ್ಲಿ ಸುಮಾರು 10 ಲಕ್ಷಗಳನ್ನು ವ್ಯಯಿಸಿ ಕಟ್ಟಡಕ್ಕೆ ನೂತನ ಲಿಫ್ಟ್ ಅಳವಡಿಸಲಾಗಿದೆ. ಒಟ್ಟಾರೆ ಸಂಘವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲಾ ಸದಸ್ಯರುಗಳ ಸಲಹೆ, ಸಹಕಾರ ಅಗತ್ಯ ವಾಗಿದೆ. ಸಂಘದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತೇವೆ ಎಂದರು.

ಜಿಲ್ಲಾ ಕಂಟ್ರಾಕ್ಟರ್ ಸಂಘದ ಕಾರ್ಯದರ್ಶಿ ಕೆ.ವಿ.ಮಂಜುನಾಥ್ ಮಾತನಾಡಿ ರಾಜ್ಯದಲ್ಲೇ ಚಿಕ್ಕಮ ಗಳೂರು ಗುತ್ತಿಗೆದಾರರ ಸಂಘವು ಎರಡನೇ ಸ್ಥಾನ ಪಡೆದುಕೊಂಡಿದೆ. ಉತ್ತಮ ಕಟ್ಟಡ, ವಹಿವಾಟು ಸೇರಿ ದಂತೆ ಸಮಾಜಿಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.

ಇದೇ ವೇಳೆ ಹಿರಿಯ ಗುತ್ತಿಗೆದಾರರಾದ ಅಂತೋಣಿ, ಶಂಬೈನೂರು ಆನಂದ್, ಟಿ.ಡಿ.ರಮೇಶ್, ಲೋ ಕೇಶ್ ಅವರಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಎ.ನಾಗರಾಜ್, ಪ್ರ. ಕಾರ್ಯದರ್ಶಿ ಬಿ.ಎಂ.ಪುಟ್ಟಸ್ವಾಮಿ, ಕೆ.ಎನ್.ದೊಡ್ಡೇಗೌಡ, ಉಪಾಧ್ಯಕ್ಷ ಜಿ.ಎಂ.ಪ್ರಕಾಶ್, ಸಿ.ಎಸ್.ಖಲಂ ಧರ್, ನಿರ್ದೇಶಕರುಗಳಾದ ಎಂ.ಮಂ ಜೇಗೌಡ, ಟಿ.ಎಂ.ನಾಸೀರ್, ಎಂ.ಎ.ರವಿಕುಮಾರ್, ಬಿ.ಕುಮಾರ್, ಎನ್. ರವಿ, ಎಂ.ಶಿವಕುಮಾರ್, ಎ.ಟಿ. ಅನೂಪ್, ಗುಮಾಸ್ತ ಆರ್.ಮುಳ್ಳೇಗೌಡ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *