November 19, 2026
;
suddi-9

 

 

ಪ್ರಾಣಹಾನಿ ಆಗುವುದಕ್ಕೇ ಮೊದಲೇ ಅರಣ್ಯ ಇಲಾಖೆ ಕಾಡಾನೆಗಳನ್ನು ಓಡಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಮು ಖಂಡರುಗಳು ಚಿಕ್ಕಮಗಳೂರು ನಗರದ ಆಜಾದ್‍ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಈ ಕುರಿತು ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ತಾಲ್ಲೂಕಿನ ಮತ್ತಾವರ, ದಂಬದ ಹಳ್ಳಿ, ಕೆಸವಿನಮನೆ ಸೇರಿದಂತೆ ಒಂಟಿ ಕಾಡಾನೆಯೊಂದು ಓಡಾಡುತ್ತಿರುವುದಾಗಿ ತಿಳಿದು ಬಂದಿದೆ. ಕಾಡಾ ನೆ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ಕಾಡಂಚಿನ ಹಾಗೂ ಗ್ರಾಮೀಣ ಭಾಗದ ಜನರು ಜೀವ ಭಯ ದಿಂದ ಬದುಕುತ್ತಿದ್ದಾರೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಕಾಡುಪ್ರಾಣಿ ಹಾವಳಿಯಿಂದ 18 ಜೀವ ಬಲಿಯಾಗಿದೆ. ಹಾಸನ ಜಿಲ್ಲೆಯಲ್ಲಿ 19 ಸಾವಾಗಿದೆ. ಒಟ್ಟಾರೆ ರಾಜ್ಯದಲ್ಲಿ ಒಟ್ಟು 750ಕ್ಕೂ ಹೆಚ್ಚು ಜನರು ಜೀವ ಕಳೆದುಯಕೊಂಡಿದ್ದು ಈ ಪೈಕಿ ಶೇ.65 ರಿಂದ 70 ಭಾಗ ಕಾಡಾನೆಯಿಂದಲೇ ಜೀವನ ಕಳೆದುಕೊಂಡಿರುವುದಾಗಿ ದಾಖಲೆಗಳು ತಿಳಿಸುತ್ತಿವೆ ಎಂದು ಹೇಳಿದರು.

ಗ್ರಾಮೀಣ ಭಾಗಕ್ಕೆ ಕಾಡಾನೆಗಳು ಕಾಡಪ್ರಾಣಿಗಳು ಬರದಂತೆ ಶಾಶ್ವತ ಯೋಜನೆ ರೂಪಿಸಬೇಕಾಗಿ ಹ ಲವಾರು ಭಾರಿ ಒತ್ತಾಯಿಸಿದ್ದರೂ ಈ ಬಗ್ಗೆ ಸರ್ಕಾರ ಗಮನಹರಿಸದಿರುವುದು ಜನರ ಜೀವನಕ್ಕೆ ಬೆಲೆ ಇಲ್ಲ ಂತಾಗಿದೆ. ಇನ್ನೊಂದೆಡೆ ಅರಣ್ಯ ಇಲಾಖೆಯು ಸಹ ನಿಷ್ಕ್ರೀಯವಾಗಿರುವುದು ಕಂಡುಬರುತ್ತಿದೆ ಎಂದು ಆ ರೋಪಿಸಿದರು.

ಮಲೆನಾಡಿನ ಭಾಗದಲ್ಲಿ ಕಾಫಿ ಕುಯ್ಲಿಗೆ ಬಂದಿದೆ. ಕಾರ್ಮಿಕರು ಜೀವ ಭಯದಿಂದಲೇ ತೋಟಗಳಲ್ಲಿ ಕೆಲಸ ಮಾಡುವಂತಾಗಿದೆ. ಯಾವ ಸಂದರ್ಭದಲ್ಲೂ ಕಾಡಾನೆಗಳು ದಾಳಿ ನಡೆಸುತ್ತವೆಯೋ ಎಂಬ ಹೆದರಿ ಕೆಯಿದೆ. ಮಳೆ ಅಭಾವದ ಕಾರಣದಿಂದ ಅಲ್ವಸ್ವಲ್ಪ ಕಾಫಿ ಬೆಳೆ ಬಂದಿದ್ದು ಈ ಬೆಳೆಯ ಕುಯ್ಲಿಗೆ ಕಾಡಾನೆ ಗಳಿಂದ ಅಡಚಣೆಯುಂಟಾಗುತ್ತಿದೆ ಎಂದರು.

ಆದ್ದರಿಂದ ಬೇಲೂರಿನಿಂದ ಕಾಡಾನೆಯ ಹಿಂಡು ಚಿಕ್ಕಮಗಳೂರು ಮಲೆನಾಡು ಭಾಗಕ್ಕೆ ಬರುವ ಮೊ ದಲೇ ಮುಂಜಾಗ್ರತೆ ವಹಿಸಿ ಕಾಡಾನೆಗಳನ್ನು ಕಾಡಿಗೆ ಓಡಿಸಬೇಕು. ಜೀವ ಕಳೆದುಕೊಂಡ ರೈತರು ಮತ್ತು ಕಾರ್ಮಿಕರಿಗೆ ವೈಜ್ಞಾನಿಕವಾಗಿ ಪರಿಹಾರ ಕೊಟ್ಟು, ಓರ್ವರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾ ಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಎಂ.ಸಿ.ಬಸವರಾಜ್, ಚಂದ್ರಶೇಖರ್, ಕುಮಾ ರಸ್ವಾಮಿ, ಕೃಷ್ಣಯ್ಯಗೌಡ, ದೇವರಾಜು, ಶಿವಕುಮಾರ್, ಛಾಯಾಪತಿ, ಮಂಜು, ಶಿವಣ್ಣ, ವಿಜಯ್‍ಕುಮಾ ರ್, ಚಂದ್ರಶೇಖರ್, ಸುನೀಲ್‍ಕುಮಾರ್, ವೆಂಕಟೇಶ್, ಉಮೇಶ್, ಜಯರಾಮ್, ಮಂಜುನಾಥ್, ಸಿದ್ದೇಗೌ ಡ, ಜಗದೀಶ್ ಮುಂತಾದವರಿದ್ದರು.

 

 

Leave a Reply

Your email address will not be published. Required fields are marked *