ಕುಡಿಯುವ ನೀರು ಕಲುಷಿತ, ಉಸಿರಾಡಲು ಸಂಕಷ್ಟ, ಗ್ರಾಮಸ್ಥರೆಲ್ಲರೂ ಅನೇಕ ರೋಗರುಜಿನಗಳಿಗೆ ಸಿಲುಕಿ ಸಾವಪ್ಪಿರುವುದು ಖಂಡಿಸಿ ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳೀ ಗೌಡನಹಳ್ಳಿ ಗ್ರಾಮಸ್ಥರು ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಮುಖ್ಯರಸ್ತೆಯಲ್ಲಿ ನೇಗಿಲು, ದನ-ಕರುಗಳನ್ನು ರಸ್ತೆ ಮಧ್ಯವಿರಿಸಿ ಬೃಹ ತ್ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ರೈತ ಸಂಘ -ಹಸಿರುಸೇನೆ ಸದಸ್ಯ ಸುನೀಲ್‍ಕುಮಾರ್ ಮಾತನಾಡಿ ಕಳೆದ 17 ವರ್ಷಗಳಂದ ದೂಳು, ಹೊಗೆ ಮಾಲಿನ್ಯದಿಂದ ನರಕವನ್ನು ಗೌಡವನಹಳ್ಳಿ ಗ್ರಾಮಸ್ಥರು ಅನುಭವಿಸಿದ್ದಾ ರೆ. ಆದರೆ ಯಾವ ಪಕ್ಷದ ರಾಜಕಾರಣಿಗಳು ಈ ಪರವಾಗಿ ಧ್ವನಿಯೆತ್ತುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ ಅವರು ಗೌಡನಹಳ್ಳಿ ಗ್ರಾಮದ ನ್ಯಾಯಕ್ಕಾಗಿ ಸಾಂಕೇತಿಕವಾಗಿ ರಾಜ್ಯಾದ್ಯಂತ ಕರೆ ನೀಡಿದ್ದಾರೆ. ಜಿಲ್ಲಾಡಳಿತ ಗೌಡನಹಳ್ಳಿ ಗ್ರಾಮಸ್ಥರಿಗೆ ಕಾರ್ಖಾನೆಗಳ ಕೊಳಕು ನೀರು, ವಿಷಯುಕ್ತ ಮಾಲಿನ್ಯದಿಂದ ಮುಕ್ತಗೊಳಿಸದಿದ್ದಲ್ಲಿ ರಾಜ್ಯಾದ್ಯಂತ ರೈತರು ಗೌಡನಹಳ್ಳೀ ಹೋರಾಟಕ್ಕೆ ಬರಲಿದ್ದಾರೆ ಎಂದು ಎಚ್ಚರಿಸಿದರು.
ಗ್ರಾಮಸ್ಥ ಮೋಹನ್‍ಗೌಡ ಮಾತನಾಡಿ ಗ್ರಾಮದಲ್ಲಿ ಕಳೆದ 13 ದಿನಗಳಿಂದ ಅಹೋರಾತ್ರಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸರ ಮಾಲಿನ್ಯ ತಪ್ಪಿಸುವಂತೆ ಆಗ್ರಹಿಸಿ ಅನೇಕ ಭಾರಿ ಜಿಲ್ಲಾಡಳಿತ ಗಮನಕ್ಕೆ ತಂದರೂ ಕೂಡಾ ಕ್ರಮವಹಿಸುತ್ತಿಲ್ಲ. ಪ್ರತಿಭಟನೆಯಲ್ಲಿ ಬಾಲಕಿ ಸೇರಿದಂತೆ ಗ್ರಾಮಸ್ಥರು ಅಸ್ವಸ್ಥರಾಗಿ ಜಿಲ್ಲಾ ಸ್ಪತ್ರೆ ದಾಖಲಿಸಲಾಗಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ರೈತರು, ದನ-ಕರುಗಳು ಸ್ವಚ್ಚಂಧ ವಾತಾವರಣದಲ್ಲಿ ಜೀವಿಸಲು ಜಿಲ್ಲಾಡಳಿತ ಅನುವು ಮಾಡಿಕೊಡಬೇಕು. ಒಂದು ವೇಳೆ ಕಾರ್ಖಾನೆಗಳ ಒತ್ತಡಕ್ಕೆ ಮಣಿದು ನಿರ್ಲಕ್ಷಿಸಿದರೆ ಪ್ರಾಣ ಇರುವವರೆಗೂ ಇದೇ ಜಾಗದಲ್ಲಿ ಪ್ರತಿಭಟಿಸುತ್ತೇವೆ. ನ್ಯಾಯ ದೊರಕುವವರೆಗೂ ಕದಲುವುದಿಲ್ಲ ಎಂದು ಎಚ್ಚರಿಸಿದರು.
ಗೌಡನಹಳ್ಳಿ ಗ್ರಾಮಸ್ಥ ಮಾತನಾಡಿ ಗ್ರಾಮಕ್ಕೆ ಯಾವುದೇ ಪಕ್ಷವು ಬೇಡ, ಯಾರಿಗೂ ಮತ ಹಾಕುವು ದು ಬೇಡ. ರೈತಮಿತ್ರರು ದೇಶಕ್ಕೆ ಬೇಕು. ಈ ಕಾಯಕ ಯೋಗಿಗಳಿಗೆ ಕಾರ್ಖಾನೆಗಳು ರೈತರ ಜಮೀನನ್ನು ಖರೀದಿಸಿ, ರೈತರ ಮೇಲೆ ದಬ್ಬಾಳಿಕೆ, ದೌರ್ಜನ್ಯವೆಸಗುವುದು ಎಂದಿಗೂ ಸಹಿಸುವುದಿಲ್ಲ ಎಂದರು.
ಕಾರ್ಖಾನೆಗಳ ಅಬ್ಬರವೇ ಹೆಚ್ಚಳವಾದರೆ ಗ್ರಾಮದ ಪ್ರತಿಯೊಂದು ಮನೆಗೆ ನಿವೇಶನ ಹಂಚುವ ಮೂ ಲಕ ಇಡೀ ಗ್ರಾಮವನ್ನೇ ಬೇರೆಡೆ ಸ್ಥಳಾಂತರಿಸಬೇಕು. ಪುಟಾಣಿ, ವೃದ್ದರು ಈ ಕಲುಷಿತ ವಾತಾವರಣದಲ್ಲಿ ದಿನೇ ದಿನೇ ಸಾಯುವಂತಾಗಿದೆ ಎಂದರು.
ಈ ಸಂಧರ್ಭದಲ್ಲಿ ರೈತ ಸಂಘ – ಹಸಿರುಸೇನೆ ತಾಲ್ಲೂಕು ಅಧ್ಯಕ್ಷೀಯ ಮಂಡಳಿ ಸದಸ್ಯ ರಾಮೇ ಗೌಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗೌಡನಹಳ್ಳಿ ಗ್ರಾಮಸ್ಥರು, ಶಾಲಾಮಕ್ಕಳು ಪ್ರತಿಭಟನೆ ನಡೆಸಿದರು.


