November 20, 2026
;
suddi-2

 

 

ಆಲ್ದೂರು ಮಾರ್ಗವಾಗಿ ಹಾದು ಹೋಗುವ ರಾಜ್ಯ ಹೆದ್ದಾರಿ 27 ರಸ್ತೆಯು ಎಲ್ಲೆಂದರಲ್ಲಿ ಗುಂಡಿಗಳಿಂದ ತುಂಬಿಹೋಗಿತ್ತು ಇದೀಗ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಪ್ರಾರಂಭವಾಗಿದ್ದು ಕಳಪೆಯಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಗುರುವಾರ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿಯನ್ನು ನಿಲ್ಲಿಸಿದ್ದಾರೆ.

ಕಾಂಗ್ರೆಸ್ ಹೋಬಳಿ ಕಾರ್ಯದರ್ಶಿ ಸಿ ರವಿಚಂದ್ರ, ಕ್ಷೇತ್ರದ ಶಾಸಕರಾದ ನಯನ ಮೋಟಮ್ಮ ನವರು ಸವಾರರ ಭವಣೆಯನ್ನು ಮನಗಂಡು ಅನುದಾನ ಒದಗಿಸಿ ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆ ನೀಡಿದ್ದಾರೆ.

ಕಾಮಗಾರಿ ನಡೆಯುವ ಸ್ಥಳದಲ್ಲಿ ಸಂಬಂಧಪಟ್ಟ ಇಲಾಖೆ ವತಿಯಿಂದ ಯಾವುದೇ ಎಂಜಿನಿಯರ್ ಗಳು ಗುತ್ತಿಗೆದಾರ ಸ್ಥಳದಲ್ಲಿ ಗುಣಮಟ್ಟವನ್ನು ಪರೀಕ್ಷಿಸಲು ವೀಕ್ಷಣೆ ಮಾಡಲು ಇಲ್ಲ, ಕ್ಷೇತ್ರದ ಶಾಸಕರ ಹೆಸರಿಗೆ ಮಸಿ ಬಳಿಯಲು ಹುನ್ನಾರವನ್ನು ಗುತ್ತಿಗೆದಾರ ಮತ್ತು ಆತನ ತಂಡ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯರಾದ ಎ ಯು ಇಬ್ರಾಹಿಂ, ಅಬ್ದುಲ್ ರೆಹಮಾನ್, ಪೃಥ್ವಿರಾಜ್, ನಾಗೇಂದ್ರ, ರಸ್ತೆ ಗುಂಡಿಗಳನ್ನು ಸರಿಯಾದ ಯಂತ್ರಗಳನ್ನು ಬಳಸಿ ಸ್ವಚ್ಛತೆ ಮಾಡಿಲ್ಲ ಮಣ್ಣು ಹಾಗೆ ಗುಂಡಿಗಳಲ್ಲಿ ತುಂಬಿಕೊಂಡಿದ್ದು ಅದರ ಮೇಲೆಯೇ ಜಲ್ಲಿಗಳನ್ನು ಸುರಿದು ಬೇಕಾಬಿಟ್ಟಿ ಕಾಮಗಾರಿ ಮಾಡುತ್ತಿರುವುದು ಬೇಸರ ತರಿಸಿದೆ ರಸ್ತೆ ಇಲ್ಲದೆ ಇನ್ನೆರಡು ವರ್ಷ ಕಳೆದರೂ ಪರವಾಗಿಲ್ಲ ಕಾಮಗಾರಿಗಳನ್ನು ಮಾಡುವಾಗ ಉನ್ನತವಾದ ಗುಣಮಟ್ಟದಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

 

 

Leave a Reply

Your email address will not be published. Required fields are marked *