ಒಳ್ಳೆಯ ಅಭ್ಯಾಸ, ಕ್ರಿಯಾಶೀಲತೆ, ಸಕಾರಾತ್ಮಕತೆ ಹಾಗೂ ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರುದ್ರಪ್ಪ ನುಡಿದರು.
ಚಿಕ್ಕಮಗಳೂರು ರೋಟರಿಕ್ಲಬ್ ನಗರದ ಎಂಎಲ್‍ವಿ ರೋಟರಿ ಸಭಾಂಗಣದಲ್ಲಿ ಆಯೋಜಿಸಿರುವ “ಯುವಚೇತನ 2026-27” ಪ್ರತಿಭೋತ್ಸವವನ್ನು ನಿನ್ನೆ ಸಂಜೆ ಜ್ಯೋತಿಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಾಹ್ಮಿ ಮೂಹರ್ತದಲ್ಲಿ ಮಾಡುವ ಕೆಲಸಗಳೆಲ್ಲವೂ ಸಿದ್ಧಿಸುತ್ತದೆ. ವಿದ್ಯಾರ್ಥಿಗಳು ಬೆಳಗಿನಜಾವ ಓದು ಬರಹ ಅಭ್ಯಾಸ ಅಧ್ಯಯನಕ್ಕೆ ತೊಡಗಿಸಿಕೊಳ್ಳಬೇಕು. ಹಿಂದೂ ಸಂಪ್ರದಾಯದಲ್ಲಿ ಮುಂಜಾನೆಗೆ ವಿಶೇಷ ಮಹತ್ವ. ನೂತನ ದೇವಸ್ಥಾನದಲ್ಲಿ ದೇವರಿಗೆ ಶಕ್ತಿ ತುಂಬುವುದಾಗಲಿ, ಹೊಸಮನೆ ಪ್ರವೇಶವಾಗಲಿ ಬ್ರಾಹ್ಮಿಯೆ ಶ್ರೇಷ್ಠ ಎಂದ ಬಿಇಓ ರುದ್ರಪ್ಪ, ಮುಸಲ್ಮಾನ್ ಬಾಂಧವರೂ ಬೆಳಗಿನಜಾವವೇ ಮೊದಲ ನಮಾಜ್ ಸಲ್ಲಿಸುವ ಪರಿಪಾಠ ಇಟ್ಟುಕೊಂಡಿದ್ದಾರೆಂದರು.
ಸಮಾಜಮುಖಿ ಚಟುವಟಿಕೆ-ಒಳ್ಳೆಯ ಹವ್ಯಾಸ ಸೋಮಾರಿಯಾಗಿ ಕೂರಲು ಬಿಡುವುದಿಲ್ಲ. ಚಟುವಟಿಕೆ ಇಲ್ಲದ ದೇಹ ರೋಗಕ್ಕೆ ತುತ್ತಾಗುತ್ತದೆ. ಮುಂದೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಉಂಟಾಗುತ್ತದೆ. ಸದಾ ಕ್ರಿಯಾಶೀಲವಾಗಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳು ಸಿಗುತ್ತವೆ. ಜೊತೆಗೆ ತಂದೆತಾಯಿಯರಿಗೂ ಹೊರೆಯಾಗುವುದಿಲ್ಲ ಎಂದವರು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಒಂದುವರ್ಷ ಪ್ರಪಂಚದಿಂದ ಕಣ್ಮರೆಯಾದರೆ ಯಾವುದೇ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಬಹುದು. ಕಣ್ಮರೆ ಎಂದರೆ ಫೇಸ್‍ಬುಕ್, ಇನ್ಟ್ರಾಗ್ರಾಮ್, ಟ್ವಿಟರ್, ಎಕ್ಸ್‍ಖಾತೆಗಳಿಂದ ದೂರವಿರುವುದು ಎಂದು ಅರ್ಥ. ಮನಸ್ಸು ಕೇವಲ ಗುರಿಯತ್ತ ಕೇಂದ್ರಿಕೃತವಾಗಬೇಕು. ಏಕಾಗ್ರತೆಯಿಂದ ಸಾಧನೆ ಸಾಧ್ಯ ಎಂದರು.
ವಿದ್ಯಾರ್ಥಿಗಳು ಕೋಟಿರೂಪಾಯಿ ಗಳಿಸಬಲ್ಲವರು. ಇಂದು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಒಂದರಿಂದ ಒಂದೂವರೆಕೋಟಿ ರೂ. ಪೇಮೆಂಟ್ ಸೀಟ್‍ಗೆ ನೀಡಬೇಕು. ಎರಡುವರ್ಷ ಪಣತೊಟ್ಟು ಶ್ರದ್ಧೆಯಿಂದ ಓದಿ ಉಚಿತಪ್ರವೇಶ ಪಡೆದರೆ ಕೋಟಿ ರೂ. ಗಳಿಸಿದಂತೆ ಎಂದ ರುದ್ರಪ್ಪ, ಪಠ್ಯೇತರ ಚಟುವಟಿಕೆಗಳು ಓದಿನ ಸಾಮಥ್ರ್ಯ ವಿಸ್ತರಿಸುತ್ತದೆ ಎಂದರು.
ಯುವಚೇತನ ಉಪಸಮಿತಿ ಅಧ್ಯಕ್ಷ ಮನೋಜ್‍ಬೈಸಾನಿ ಮಾತನಾಡಿ ಕಳೆದ 35ವರ್ಷಗಳಿಂದ ನಿರಂತರವಾಗಿ ಯುವಚೇತನ ಸಪ್ತಾಹವನ್ನು ಚಿಕ್ಕಮಗಳೂರು ರೋಟರಿ ನಡೆಸಿಕೊಂಡು ಬರುತ್ತಿದ್ದು, ಯುವಸಮೂಹದ ಮೆಚ್ಚುಗೆಯನ್ನು ಗಳಿಸಿದೆ. ಪ್ರತಿವರ್ಷವೂ 15 ರಿಂದ 20 ಪ್ರೌಢಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆಂದರು.
ಸುಪ್ತಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಯುವಚೇತನ ಅತ್ಯುತ್ತಮ ವೇದಿಕೆ. ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮ ಜೊತೆಗೆ ವಿಚಾರಪ್ರಚೋದಕ ಸ್ಪರ್ಧೆಗಳ ಮೂಲಕ ಪ್ರತಿಭಾವಂತರನ್ನು ಮಾನ್ಯ ಮಾಡಲಾಗುತ್ತದೆ. ಶಿಸ್ತು, ಸಮಯಪ್ರಜ್ಞೆ, ತಂಡ ಸ್ಫೂರ್ತಿಯಿಂದ ಕಾರ್ಯನಿರ್ವಹಿಸುವುದು ಜೊತೆಗೆ ನಾಯಕತ್ವದ ಗುಣ ಪ್ರತಿಭೋತ್ಸವ ಪ್ರೇರೇಪಿಸುತ್ತದೆ ಎಂದ ಮನೋಜ್, ಸಾಮಥ್ರ್ಯವನ್ನು ಗುರುತಿಸಿ ಪರಿಪೂರ್ಣತೆಯತ್ತ ಕೊಂಡೊಯ್ಯುವ ಆಶಯ ಇಲ್ಲಿದೆ ಎಂದರು.
ತಮಾಷೆ, ಕಲಿಕೆ ಜೊತೆಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಯುವಚೇತನ ಪ್ರೇರಣೆ ನೀಡುತ್ತಿದೆ. ಇದು ಕೇವಲ ಸ್ಪರ್ಧೆ ಮಾತ್ರವಲ್ಲ ವಿದ್ಯಾರ್ಥಿಗಳ ಸಂಭ್ರಮೋತ್ಸವವೂ ಹೌದು. ಸ್ಪರ್ಧಾತ್ಮಕ ಮನೋಭಾವದಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿ ದೊಡ್ಡ ಕನಸ್ಸನ್ನು ಸಾಕಾರಗೊಳಿಸುವ ಸಂದರ್ಭವಿದೆಂದು ಮನೋಜ್ ನುಡಿದರು.
ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎನ್.ಚಿದಾನಂದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಪ್ರತಿಷ್ಠಿತ ಕ್ಲಬ್‍ನ ಆದ್ಯತೆಯ ಕಾರ್ಯಕ್ರಮ ಯುವಚೇತನ. ನಾಲ್ಕು ದಿನಗಳಲ್ಲಿ ಏಳು ವಿಧದ ಸ್ಪರ್ಧೆಗಳನ್ನು ಈ ಬಾರಿ ಆಯೋಜಿಸಲಾಗಿದೆ. 21 ಪ್ರೌಢಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಸ್ಪರ್ಧೆಗಳಿಗಾಗಿ ನೊಂದಾಯಿಸಿಕೊಂಡಿವೆ ಎಂದರು.
ಮುಖ್ಯಅತಿಥಿಗಳಾಗಿದ್ದ ರೋಟರಿ ವಲಯನಾಯಕ ಶ್ರೀವಾತ್ಸವ್ ಮಾತನಾಡಿ ಸ್ಪರ್ಧೆಯಿಂದ ದೂರ ಉಳಿದರೆ ವಿಜೇತರಾಗಲು ಸಾಧ್ಯವಿಲ್ಲ. ಭಾಗವಹಿಸುವಿಕೆ ಅತಿಮುಖ್ಯ. ಆಸಕ್ತಿ ಇರುವ ವಿಷಯ ಗಮನಿಸಿ ಅದರಲ್ಲಿ ತರಬೇತಿ, ಅಭ್ಯಾಸ, ಪರಿಶ್ರಮ ಹಾಕಿದರೆ ಉತ್ತಮಸಾಧನೆ ಮಾಡಬಹುದೆಂದು ಸಲಹೆ ನೀಡಿದರು.
ಚಿಕ್ಕಮಗಳೂರು ಕ್ಲಬ್ ಯುವಸೇವಾ ನಿರ್ದೇಶಕ ಡಿ.ಎಸ್.ಪವನ್ ಸಪ್ತಾಹದ ವಿವರಗಳನ್ನು ನೀಡಿದರು. ಸಹಅಧ್ಯಕ್ಷ ಅವಿನಾಶ್ ಬಿ.ಅವರೇಬೀಳು, ಕ್ಲಬ್ ನಿರ್ದೇಶಕ ಎಂ.ಎಲ್.ಸುಜಿತ್ ಪಾಲ್ಗೊಂಡಿದ್ದರು. ಅಧ್ಯಕ್ಷ ಎನ್.ಚಿದಾನಂದ ಸ್ವಾಗತಿಸಿ, ಕಾರ್ಯದರ್ಶಿ ಕೆ.ಎಸ್.ಆದರ್ಶ ವಂದಿಸಿದರು. ವಿಷಯಾಧರಿತ ಸಮೂಹನೃತ್ಯ ಸ್ಪರ್ಧೆ ನಡೆಯಿತು.


