November 23, 2026
;
20Mudigere1B

????????????

 

 

ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶುಕ್ರವಾರ ಮಾಕೋನಹಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಂಘವು ಕಳೆದ ಸಾಲಿನಲ್ಲಿ ತೋರಿರುವ ಅತ್ಯುತ್ತಮ ಸಾಧನೆ ಹಾಗೂ ತನ್ನ ಸದಸ್ಯರಿಗೆ ನೀಡಿದ ಸೇವೆ ಹಾಗೂ ಸಂಘದ ಸಮಗ್ರ ಬೆಳವಣಿಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಹಕಾರ ಸಪ್ತಾಹ ಸಮಾರಂಭದಲ್ಲಿ, ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಡಿಸಿಸಿ ಬ್ಯಾಂಕ್ ನಿರ್ದೆಶಕ ಹಳಸೆ ಶಿವಣ್ಣ, ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ, ಬಿ.ಬಿ.ನಿಂಗಯ್ಯ, ಸಹಕಾರ ಯೂನಿಯನ್ ನಿರ್ದೇಶಕಿ ಶ್ರೀಮತಿ ಭಾರತಿ ರವೀಂದ್ರ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ವಿತರಿಸಲಾಯಿತು.

ಸಂಘದ ಅಧ್ಯಕ್ಷ ಎಂ.ಎನ್. ಅಶ್ವಥ್, ಸಿಇಓ ಅಜಿತ್ ಅವರಿಗೆ ಗೌರವ ಸನ್ಮಾನ ಮಾಡಿ ಪ್ರಶಸ್ತಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ ಮೂರ್ತಿ ಪಿ.ಎಸ್, ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷ ಎಂ.ಎಲ್. ಕಲ್ಲೇಶ್, ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷ ಜಿ.ಯು.ಚಂದ್ರೇಗೌಡ, ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷ ಎನ್.ವಿ.ಸಂದೀಪ್, ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷೆ ಶ್ರೀಮತಿ ಬಿ.ಟಿ.ಮಂಜುಳ, ನಿರ್ದೇಶಕರುಗಳಾದ ಶ್ರೀಮತಿ ಶೃತಿ ಡಿ.ಸಿ, ಮನು ಎಂ.ಎನ್, ದೇವಿಪ್ರಸಾದ್ ಎನ್.ಎಸ್., ರವಿಕಿರಣ್ ಜಿ.ವಿ, ಅಣ್ಣಪ್ಪ ಎನ್.ಟಿ., ಪದನಿಮಿತ್ತ ನಿರ್ದೇಶಕರು, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ನಿತಿನ್ ಪಟೇಲ್ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎನ್. ಅಶ್ವಥ್ ; ಮಾಕೋನಹಳ್ಳಿ ಸಹಕಾರ ಸಂಘವನ್ನು ಗ್ರಾಮದ ಹಿರಿಯರು ಸ್ಥಾಪಿಸಿ ಅನೇಕ ಮಹನೀಯರು ಮುನ್ನಡೆಸಿಕೊಂಡು ಬಂದಿರುತ್ತಾರೆ. ಈ ಹಿಂದೆ ಸಂಘದ ಅಧ್ಯಕ್ಷರಾಗಿ, ನಿರ್ದೇಶಕರಾಗಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಎಲ್ಲಾ ಹಿರಿಯರ ಪರಶ್ರಮದಿಂದ ಸಂಘವು ಇಂದು ಸದೃಢವಾಗಿ ಬೆಳೆದು ನಿಂತಿದೆ. ಕಳೆದ ವರ್ಷವಷ್ಟೇ ಸಂಘಕ್ಕೆ ಸುಸಜ್ಜಿತವಾದ ಆಡಳಿತ ಕಛೇರಿ ಮತ್ತು ವ್ಯಾಪಾರ ಮಳಿಗೆಗಳನ್ನು ಒಳಗೊಂಡು ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.

ಸಂಘವು ತನ್ನ ವ್ಯಾಪ್ತಿಯ ರೈತರಿಗೆ ಅನೇಕ ರೀತಿಯ ಸೇವೆಗಳನ್ನು, ಸಾಲ ಸೌಲಭ್ಯಗಳನ್ನು, ರಸಗೊಬ್ಬರ ಸೇರಿದಂತೆ ಕೃಷಿ ಪರಿಕರ ವಿತರಣೆ, ಪಡಿತರ ವಿತರಣೆ ಸೇವೆಯನ್ನು ಒದಗಿಸುತ್ತಾ ಬಂದಿದೆ. ಸತತವಾಗಿ ಜಿಲ್ಲೆಯ ಲಾಭದಾಯಕ ಮುಂಚೂಣಿ ಸಹಕಾರ ಸಂಘವೆಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡು ಬರುತ್ತಿದೆ. ನಮ್ಮ ಸಂಘದ ಸಾಧನೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘವೆಂಬ ಪ್ರಶಸ್ತಿ ನೀಡಿರುವುದು ಸಂಘದ ಗೌರವವನ್ನು ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರು, ಮಾಜಿ ಅಧ್ಯಕ್ಷರುಗಳು, ಸಿಇಓ ಹಾಗೂ ಸಿಬ್ಬಂದಿ ವರ್ಗದವರ ಸಹಕಾರ ಮನೋಭಾವನೆ ಮತ್ತು ಪರಿಶ್ರಮ ಪ್ರಶಸ್ತಿ ಪಡೆಯಲು ಪ್ರೇರಣೆಯಾಗಿದೆ ಎಂದರು.

 

 

Leave a Reply

Your email address will not be published. Required fields are marked *