November 28, 2026
;
WhatsApp Image 2026-11-27 at 9.03.58 PM

 

 

ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಕಸಾಪ ಹೋಬಳಿ ಅಧ್ಯಕ್ಷ ಸೋಮೇಶ್ ಮರ್ಕಲ್ ಅವರ ನೇತೃತ್ವದಲ್ಲಿ ನಿಡುವಾಳೆ ಗ್ರಾಮದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ನಿಡುವಾಳೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ಎಂ.ಪಿ. ಕುಮಾರ ಸ್ವಾಮಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮುಖ್ಯ ಭಾಷಣಕಾರರಾಗಿ ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಪ್ರಕಾಶ್ ಹಾಗೂ ಕರ್ನಾಟಕ ಸಾಹಿತ್ಯ ಸಂಭ್ರವ ವೇದಿಕೆ ರಾಜ್ಯಾಧ್ಯಕ್ಷ ಎಂ.ಎಸ್.ನಾಗರಾಜ್ ಮೂಡಿಗೆರೆ ಕನ್ನಡ ನಾಡು ನುಡಿಯ ಐತಿಹಾಸಿಕ ಹಿನ್ನಲೆ, ಕನ್ನಡ ಭಾಷೆಯ ನಿರಂತರ ಬಳಕೆ, ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸುವ, ಕನ್ನಡ ಶಾಲೆಗಳನ್ನು ಉಳಿಸುವ ಅಗತ್ಯತೆಯ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ಚಂದ್ರಯ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಾಳೂರು ಹೋಬಳಿ ವ್ಯಾಪ್ತಿಯ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಕನ್ನಡ ನಾಡುನುಡಿಗೆ ಸಂಬಂಧಿಸಿದ ಹಾಡುಗಳಿಗೆ ನೃತ್ಯ ಕಾರ್ಯಕ್ರಮ, ಸ್ಥಳೀಯ ಗಾಯಕರಿಂದ ಗೀತಗಾಯನ, ಯೋಗಪಟು ಜಗದೀಶ್ ಭಟ್ ಅವರಿಂದ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು. ಕನ್ನಡ ಕೈಬರಹ ಸೇರಿದಂತೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.


ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಯಲ್ಲಿ ಕನ್ನಡ ಮೆರವಣಿಗೆ ನಡೆಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಾಳೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮೇಶ್ ಮರ್ಕಲ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೆಂಪೇಗೌಡ ಒಕ್ಕಲಿಗ ವೇದಿಕೆ ಹೋಬಳಿ ಅಧ್ಯಕ್ಷ ಮತ್ತು ಕಸಾಪ ಹೋಬಳಿ ಗೌರವ ಕಾರ್ಯದರ್ಶಿ ಡಿ.ಟಿ.ಉಮೇಶ್, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಗೌರವ ಕಾರ್ಯದರ್ಶಿಗಳಾದ ಸುಚಿತ್ರ ಪ್ರಸನ್ನ, ಬಿ.ಆರ್. ನವೀನ್, ಗೌರವ ಕೋಶಾಧ್ಯಕ್ಷ ಆರ್. ಪ್ರಕಾಶ್, ಕಸಾಪ ಜಿಲ್ಲಾ ಸಂಚಾಲಕಿ ಅನಿತಾ ಜಗದೀಪ್, ಕಸಾಪ ಹೋಬಳಿ ಅಧ್ಯಕ್ಷರುಗಳಾದ ನವೀನ್ ಆನೆದಿಬ್ಬ, ಲೋಕೇಶ್ ಬೆಟ್ಟಗೆರೆ, ಬಾಳೂರು ಹೋಬಳಿ ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಿ, ಕಸಾಪ ಹೋಬಳಿ ಗೌರವ ಕಾರ್ಯದರ್ಸಿ ಬಿ.ಎಂ.ಸತೀಶ್, ಕಸಾಪ ಹೋಬಳಿ ನಿಕಟಪೂರ್ವ ಅಧ್ಯಕ್ಷ ರವಿ ಪಟೇಲ್, ಪದಾಧಿಕಾರಿಗಳಾದ ಸುಧೀರ್, ರವಿ ವಾಟೇಕಾನ್, ರಮೇಶ್ ಗಬ್ಗಲ್, ನಟೇಶ್ ನಿಡುವಾಳೆ, ಪರಮೇಶ್, ಸಂತೋಷ್, ಸಚಿನ್ ಮರ್ಕಲ್, ನವೀನ್ ಹಾವಳಿ, ರಮೇಶ್ ಯಾದವ್, ಮೋನಪ್ಪ ಮುಂತಾದವರು ಇದ್ದರು.

 

 

Leave a Reply

Your email address will not be published. Required fields are marked *