telescope

 

 

ಬ್ರಿಟೀಷ್ ರಾಣಿ ವಿಕ್ಟೋರಿಯಾ ಕಾಲದ ಹಿತ್ತಾಳೆ ಟೆಲಿಸ್ಕೋಪ್ ಒಂದನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ವ್ಯಕ್ತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

1915ರ ಅವಧಿಯಲ್ಲಿ ತಯಾರಿಸಿದ್ದೆನ್ನಲಾದ ಬೆಲೆಬಾಳುವ ಹಿತ್ತಾಳೆ ಟೆಲಿಸ್ಕೋಪ್ ಒಂದನ್ನು ಕಡೂರು ಪಟ್ಟಣದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿ.

ಮೈಸೂರಿನ ಸಂಕ್ರಾಂತಿ ವೃತ್ತದ ಕೆಂಪರಾಜ್ ಎಂಬುವವನು ಟೆಲಿಸ್ಕೋಪನ್ನು ಮೈಸೂರಿನಿಂದ ತಂದು ಕಡೂರಿನಲ್ಲಿ ಜೈನ್ ಟೆಂಪಲ್ ರಸ್ತೆಯ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ.

ಈ ಟೆಲಿಸ್ಕೋಪನ್ನು 15ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಅರಿತ ಕಡೂರು ಠಾಣೆ ಪೊಲೀಸರು ದಾಳಿ ನಡೆಸಿ ಕೆಂಪರಾಜ್ ನನ್ನು ಬಂಧಿಸಿ ಟೆಲಿಸ್ಕೋಪ್ ವಶಪಡಿಸಿಕೊಂಡಿದ್ದಾರೆ.

ಇಷ್ಟು ಬೆಲೆಬಾಳುವ ಮತ್ತು ರಾಜಮನೆತನಕ್ಕೆ ಸೇರಿದ ಟೆಲಿಸ್ಕೋಪ್ ಈತನಿಗೆ ಎಲ್ಲಿ ದೊರೆಯಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ