ckm uts 4

 

 

ಇದೇ ಜನವರಿ 18 ರಿಂದ 22ರವರೆಗೆ 5 ದಿನಗಳ ಕಾಲ ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಉತ್ಸವಕ್ಕೆ ಜಿಲ್ಲಾ ಕೇಂದ್ರ ಚಿಕ್ಕಮಗಳೂರು ಸಜ್ಜುಗೊಳ್ಳುತ್ತಿದೆ.

ನಗರದ ಜಿಲ್ಲಾ ಆಟದ ಮೈದಾನದಲ್ಲಿ ಮುಖ್ಯವೇದಿಕೆಯಲ್ಲಿ ಉತ್ಸವ ಜರುಗಲಿದ್ದು ನಗರದಾದ್ಯಂತ ಅಲ್ಲಲ್ಲಿ ಏಕಕಾಲದಲ್ಲಿ ಅನೇಕ ಕಾರ್ಯಕ್ರಮಗಳು ಏರ್ಪಡಲಿವೆ.

2020ರಲ್ಲಿ ಮೊತ್ತಮೊದಲ ಬಾರಿಗೆ ನಡೆದಿದ್ದ ಜಿಲ್ಲಾ ಉತ್ಸವ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಯವರ ಆಸಕ್ತಿಯಿಂದ ಆರಂಭಗೊಂಡಿರುವ ಈ ಉತ್ಸವಕ್ಕೆ ಸರ್ಕಾರವು ಅನುದಾನ ನೀಡುತ್ತಿದೆ.

ಶಾಸಕ ಸಿ.ಟಿ.ರವಿ ಮತ್ತು ಜಿಲ್ಲಾಧಿಕಾರಿ ರಮೇಶ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಉತ್ಸವದ ಯಶಸ್ಸಿಗೆ ಭರ್ಜರಿ ಪೂರ್ವತಯಾರಿ ನಡೆಸಲಾಗುತ್ತಿದೆ. ಉತ್ಸವಕ್ಕಾಗಿ ಈಗಾಗಲೇ ಹಲವು ಸಮಿತಿಗಳನ್ನು ರಚಿಸಿದ್ದು ಆಯಾ ಸಮಿತಿಗಳು ತಮ್ಮ ಜವಾಬ್ದಾರಿ ನಿರ್ವಹಣೆಗೆ ಅಗತ್ಯ ತಯಾರಿಯಲ್ಲಿ ತೊಡಗಿವೆ.

ಚಿಕ್ಕಮಗಳೂರು ಜಿಲ್ಲೆಯು ಪ್ರಾಕೃತಿಕವಾಗಿ ಮಲೆನಾಡು ಹಾಗೂ ಬಯಲು ಪ್ರದೇಶದ ಭೂ ಲಕ್ಷಣಗಳನ್ನು ಹೊಂದಿರುವಂತಹ ಅಪರೂಪದ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ನೈಸರ್ಗಿಕವಾದ ಗಿರಿಸಾಲು, ಜಲಪಾತ, ಝರಿಧಾರೆಗಳು, ಅರಣ್ಯ ಪ್ರದೇಶ ವನ್ಯ ಸಂಕುಲಗಳ ಧಾಮವಾಗಿದ್ದು, ಪಂಚನದಿಗಳ ಉಗಮ ಸ್ಥಾನವನ್ನು ಹೊಂದಿರುವಂತಹ ಆಕರ್ಷಣೀಯ ಜಿಲ್ಲೆಯಾಗಿದೆ.

ಅದೇ ರೀತಿ ಜಿಲ್ಲೆಯಲ್ಲಿ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ನೆಲೆಗೊಂಡಿರುವ ಪುಣ್ಯ ಕ್ಷೇತ್ರವಾಗಿದ್ದು, ಜಿಲ್ಲೆಯು ಕಾಫಿ, ಏಲಕ್ಕಿ, ಮೆಣಸು, ಅಡಿಕೆ, ತೆಂಗು ಮುಂತಾದ ಬೆಳೆಗಳನ್ನು ಬೆಳೆಯುವಂತಹ ಕಂಪಿನ ಪ್ರದೇಶವಾಗಿ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ಸಾಹಿತ್ಯಿಕವಾಗಿ ಕವಿ ಲಕ್ಷ್ಮೀಶ, ಎ.ಆರ್.ಕೃಷ್ಣಶಾಸ್ತ್ರಿ, ರಾಷ್ಟ್ರಕವಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ ಹಾಗೂ ಇನ್ನೂ ಹಲವಾರು ಕವಿಗಳು ಜನಿಸಿ – ನೆಲೆಸಿ ಸ್ಪೂರ್ತಿ ನೀಡಿದ ಜಿಲ್ಲೆಯಾಗಿದೆ.

ವೀರಗಾಸೆ, ಡೊಳ್ಳು ಕುಣಿತ ಇತರೆ ಜಾನಪದ ಕಲೆಗಳು ಪ್ರಸಿದ್ಧಿ ಪಡೆದಿರುವ ಹಾಗೂ ಕುಸ್ತಿ, ಕಬಡ್ಡಿ, ಕೆಸರುಗದ್ದೆ ಓಟ ಮುಂತಾದ ಕ್ರೀಡಾ ಕ್ಷೇತ್ರಗಳಿಗೆ ಅಖಾಡವಾಗಿದ್ದು, ಭೋಜನ ಪ್ರಿಯರಿಗೆ ವಿಶೇಷವಾದ ಖಾದ್ಯಗಳನ್ನು ಉಣಬಡಿಸುವ ನೆಲೆಯಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಗ್ರ ಸಾಂಸ್ಕೃತಿಕ ಪರಂಪರೆಯನ್ನು ನಾಡಿನ ಜನತೆಗೆ ಪರಿಚಯಿಸುವುದು, ಅದೇ ರೀತಿ ಕಲಾ ಪ್ರಾಕಾರಗಳನ್ನು ಜನತೆಗೆ ಪರಿಚಯಿಸಿ ಮನೋರಂಜನೆಗೊಳಿಸುವುದು ” ಚಿಕ್ಕಮಗಳೂರು ಜಿಲ್ಲಾ ಉತ್ಸವ ” ದ ಪ್ರಮುಖ ಉದ್ದೇಶವಾಗಿದೆ.

ಉತ್ಸವದ ಅಂಗವಾಗಿ ಜಿಲ್ಲಾ ಆಟದ ಮೈದಾನದಲ್ಲಿ ಸಭಾ ಕಾರ್ಯಕ್ರಮ, ವೈವಿದ್ಯಮಯವಾದ ಸಾಂಸ್ಕøತಿಕ ಪ್ರದರ್ಶನ ಏರ್ಪಡಲಿದೆ. ಆಟದ ಮೈದಾನದ ಸುತ್ತಲ ರಸ್ತೆಗಳಲ್ಲಿ ಆಹಾರ ಮೇಳ ಮೇಳೈಸಲಿದೆ. ವಿಶೇಷ ಆಕರ್ಷಣೆಯಾಗಿ ಚಿಕ್ಕಮಗಳೂರು ಸುತ್ತಲ ಪ್ರದೇಶಗಳ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಹೆಲಿಟೂರಿಸಂ ಏರ್ಪಡಿಸಲಾಗಿದೆ. ಜಲಸಾಹಸ ಕ್ರೀಡೆಗಳು, ವಿವಿಧ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳು, ನಾಟಕ ಮತ್ತು ಸಿನಿಮಾ ಪ್ರದರ್ಶನ, ಮಹಿಳೆಯರಿಗೆ, ಮಕ್ಕಳಿಗೆ ವಿಶೇಷ ಸ್ಪರ್ಧೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಕೃಷಿ, ಗ್ರಾಮೀಣ ಬದುಕಿನ ಬಗ್ಗೆ ಉತ್ಸವದಲ್ಲಿ ವಿಶೇಷ ಕಾರ್ಯಕ್ರಮಗಳು ಇರಲಿವೆ. ಚಿಕ್ಕಮಗಳೂರು ನಗರ ದೀಪಾಲಂಕಾರದಿಂದ ಕಂಗೊಳಿಸಲಿದೆ.

ಜಿಲ್ಲೆಯ ಜನರಿಗೆ ಇದೊಂದು ದೊಡ್ಡ ಹಬ್ಬದಂತೆ ಇದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವದ ಸವಿಯನ್ನು ಆನಂದಿಸಬಹುದಾಗಿದೆ.

 

ಚಿಕ್ಕಮಗಳೂರು ಜಿಲ್ಲಾ ಉತ್ಸವದ ಲಾಂಛನ ಬಿಡುಗಡೆ


 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ