tekki

 

 

ಟ್ರಕ್ಕಿಂಗ್ ತೆರಳಿದ್ದ ಟೆಕ್ಕಿಯೊಬ್ಬರು ತಪ್ಪಿಸಿಕೊಂಡು ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.

ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನದುರ್ಗ ರಾಣಿಝರಿ ಫಾಲ್ಸ್ ಗೆ ಟ್ರಕ್ಕಿಂಗ್ ಬಂದಿದ್ದ ಬೆಂಗಳೂರು ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರದ ಪಾರೇಶ್ ಕಿಶನ್ ಲಾಲ್ ಅಗರ್ವಾಲ್ (25ವರ್ಷ) ನಾಪತ್ತೆಯಾಗಿದ್ದ ಯುವಕ.

ಶನಿವಾರ ಬೆಂಗಳೂರಿನಿಂದ ಬೈಕ್ ನಲ್ಲಿ ಅಗಮಿಸಿ ಮೂಡಿಗೆರೆ ಬಳಿ ರೂಂ ಮಾಡಿ ಉಳಿದು ಭಾನುವಾರ ಬೆಳಗ್ಗೆ 8 ಗಂಟೆಗೆ ಸಂಕಸಾಲೆ ಬಳಿ ಬೈಕ್ ಬಿಟ್ಟು ಟ್ರಕ್ಕಿಂಗ್ ಆರಂಭಿಸಿದ್ದ ಟೆಕ್ಕಿ ಅಗರ್ವಾಲ್.

ಸುಂಕಸಾಲೆ ಸಮೀಪದ ಬಲ್ಲಾಳರಾಯನದುರ್ಗ ರಾಣಿಝರಿಯಿಂದ ಟ್ರಕ್ಕಿಂಗ್ ಆರಂಭಿಸಿದ್ದು ಹಿಂತಿರುಗಿ ಬರಲು ದಾರಿಕಾಣದೇ ಕಾಡಿನಲ್ಲಿ ಒಬ್ಬಂಟಿಯಾಗಿದ್ದರು. ನಂತರ ತನ್ನ ಸ್ನೇಹಿತನಿಗೆ ಲೋಕೇಶನ್ ಕಳುಹಿಸಿ ಸಹಾಯಕ್ಕೆ ಯಾಚಿಸಿದ್ದರು. ಗೆಳೆಯ 112 ಸಹಾಯವಾಣಿ ಹಾಗೂ ಸ್ಥಳೀಯ ತಂಡಕ್ಕೆ ಮಾಹಿತಿ ನೀಡಿ ರಕ್ಷಣೆಗೆ ಮಾನವಿ ಮಾಡಿದ್ದ.

ಚಿಕ್ಕಮಗಳೂರು ಜಿಲ್ಲೆಯ ರಾಣಿಝರಿ ಫಾಲ್ಸ್ ಮೂಲಕ ಬಲ್ಲಾಳರಾಯನ ದುರ್ಗಾ ಕೋಟೆ ಅಗಿ ಬೆಳ್ತಂಗಡಿಯ ಬಂಡಾಜೆ ಫಾಲ್ಸ್ ಗೆ ಬಂದಿದ್ದ ಟೆಕ್ಕಿ. ಮೊಬೈಲ್ ನೆಟ್ ವರ್ಕ್ ಸಿಗುವ ಬಂಡಾಜೆ ಫಾಲ್ಸ್ ನ ತುದಿಯ ಕಲ್ಲಿನ ಬಂಡೆಯಲ್ಲಿ ಬೆಂಕಿ ಹಾಕಿಕೊಂಡು ರಕ್ಷಣೆ ಪಡೆದಿದ್ದ ಟೆಕ್ಕಿಯನ್ನು ಸ್ಥಳೀಯ ಯುವಕರ ತಂಡ ರಕ್ಷಣೆ ಮಾಡಿದೆ.

ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 3:30 ವರೆಗೆ ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ಕಾಡಿನಿಂದ ಕರೆತಂದ ರಕ್ಷಣಾ ತಂಡ. ಟೆಕ್ಕಿಯನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಾಳೂರು ಪೊಲೀಸ್ ಠಾಣೆಗೆ ಕರೆತರಲಾಯಿತು.ಬಾಳೂರು ಸಬ್ ಇನ್ಸ್ಪೆಕ್ಟರ್ ಪವನ್ ಕುಮಾರ್ ಅವರು ವಿಚಾರಣೆ ನಡೆಸಲಾಗುತ್ತಿದೆ.

ಟೆಕ್ಕಿ ಇರುವ ಸ್ಥಳವನ್ನು ಜೀವದ ಹಂಗು ತೊರೆದು ರಕ್ಷಣೆ ಮಾಡಿದ ಸ್ಥಳೀಯರ ತಂಡದಲ್ಲಿದ್ದ ಸಿನಾನ್ ಚಾರ್ಮಾಡಿ, ಮುಬಾಶೀರ್ ಚಾರ್ಮಾಡಿ,ಅಶ್ರಫ್ ಯಾನೆ ಅಶುರ್, ಸಂಶು ಕಾಜೂರ್, ನಾಸಿರ್ ಕಾಜೂರ್, ಸುದೀರ್ ವಳಂಜ್ರ , ಬೆಳ್ತಂಗಡಿ ಆಂಬುಲೆನ್ಸ್ ಚಾಲಕ ಜಲಿಲ್ ಬಾಬಾ ಬೆಳ್ತಂಗಡಿ 112 ಸಿಬ್ಬಂದಿಗಳಾದ ಶಶಿಧರ್ ಮತ್ತು ಅಸೀಫ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಸ್ಥಳೀಯರ ಸಾಹಸಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಆಗರ್ವಾಲ್ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ : ತನು ಕೊಟ್ಟಿಗೆಹಾರ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ