tomoto

 

 

ತರಕಾರಿ ಅಂಗಡಿಯಲ್ಲಿದ್ದ 3000 ಸಾವಿರ ಮೌಲ್ಯದ 40 ಕೆ.ಜಿ. ಟೊಮೋಟೋ ಇದ್ದ ಎರಡು ಟ್ರೇ ಕಳ್ಳತನವಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ನಡೆದಿದೆ.

ಆಲ್ದೂರು ಪಟ್ಟಣದ ನದೀಂ ಎಂಬುವರ ಅಂಗಡಿಯಲ್ಲಿ ಎರಡು ಟ್ರೇ ಟಮೋಟೋ ಕಳ್ಳತನವಾಗಿದೆ. ಸೋಮವಾರ ರಾತ್ರಿ ಎಂದಿನಂತೆ ತರಕಾರಿಯನ್ನ ಅಂಗಡಿಯಲ್ಲಿ ಇಟ್ಟು ಟಾರ್ಪಲ್ ಎಳೆದು ಹೋಗಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಅಂಗಡಿಗೆ ಬಂದಾಗ ಟಮೋಟೋ ಇರಲಿಲ್ಲ. ಆಗ ಅಂಗಡಿಯ ಟಾರ್ಪಲ್ ಸರಿಸಿರುವುದು ಬೆಳಕಿಗೆ ಬಂದಿದೆ.

ಆಲ್ದೂರು ಠಾಣೆಯ ಕಾಂಪೌಂಡ್‍ ಗೆ ಹೊಂದಿಕೊಂಡಂತಿರುವ ತರಕಾರಿ ಅಂಗಡಿಯಲ್ಲಿ ಟಮೋಟೋ ಕಳ್ಳತನವಾಗಿದ್ದು ಸಾಲ ಮಾಡಿ ತರಕಾರಿ ವ್ಯಾಪಾರ ಮಾಡಿಕೊಂಡು ಬದುಕು ದೂಡುತ್ತಿದ್ದ ನದೀಂ ಅವರು ನಷ್ಟಕ್ಕೊಳಗಾಗಿದ್ದಾರೆ.

ನದೀಂ ಅವರ ತರಾಕಾರಿ ಅಂಗಡಿಗೆ ಬಾಗಿಲು ಇರಲಿಲ್ಲ. ಟಾರ್ಪಲ್ ಕಟ್ಟಿ ಹೋಗುತ್ತಿದ್ದರು. ಹೀಗೆ ಟಾರ್ಪಲ್ ಕಟ್ಟಿ ಹೋದಾಗ ಬರುವಷ್ಟರಲ್ಲಿ ರಾತ್ರೋರಾತ್ರಿ ಕಳ್ಳತನವಾಗಿದ್ದು ನದೀಂ ಟಮೋಟೋ ಕಳ್ಳತನವಾಗಿರುವ ಬಗ್ಗೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟೊಮೋಟೋ ಬೆಲೆ ಗಗನಕ್ಕೇರಿದ್ದು ಕೇಜಿಗೆ 80ರಿಂದ 100 ರೂಪಾಯಿ ಆಗಿದೆ. ಹಾಗಾಗಿ ದೇಶದೆಲ್ಲೆಡೆ ಟೊಮೋಟೋ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಎರಡು ದಿನದ ಹಿಂದೆ ಬೆಂಗಳೂರಿನಲ್ಲಿ ಟೊಮೋಟೋ ತುಂಬಿಸಿದ್ದ ಗೂಡ್ಸ್ ಗಾಡಿಯೊಂದನ್ನು ಕಳ್ಳತನ ಮಾಡಿರುವ ಘಟನೆ ನಡೆದಿತ್ತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ