chinna 2

 

 

ಬಸ್ ನಿಲ್ದಾಣದಲ್ಲಿ ಕಳ್ಳರ ಕೈ ಚಳಕ ತೋರಿದ್ದು- ಸರಕಾರಿ ಬಸ್ಸಿಗೆ ಹತ್ತುವಾಗ್ಲೇ ಮಾಂಗಲ್ಯ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.

ಮೂಡಿಗೆರೆ ಕೆ ಎಸ್ ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೂಡಿಗೆರೆಯಿಂದ ಧರ್ಮಸ್ಥಳ ಬಸ್  ಹತ್ತುತ್ತಿದ್ದ ಮಹಿಳೆ ಯಶೋಧಮ್ಮ ಎಂಬುವವರ ಕುತ್ತಿಗೆಯಲ್ಲಿ ಹಾಕಿದ್ದ  ಮಾಂಗಲ್ಯ ಸರ ಕಿತ್ತ ಖದೀಮರು ಪರಾರಿಯಾದ ಘಟನೆ ನಡೆದಿದೆ.

ಈ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡಿಗೆರೆ ಸಮೀಪದ ಹೆಸಗಲ್ ವಾಸಿ ಆಕಾಶ್ ಎಂಬುವವರು ದೂರು ನೀಡಿದ್ದು ;   ದಿನಾಂಕ; 27/10/2023 ರಂದು  ಸಂಜೆ ಆಕಾಶ್ ಅವರ ಅಜ್ಜಿ ಯಶೋದಮ್ಮ ಇವರು ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಬಸ್ ಹತ್ತುತ್ತಿರುವಾಗ ಯಾರೋ ಯಶೋದಮ್ಮ ರವರ ಕುತ್ತಿಯಲ್ಲಿ ಧರಿಸಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದು, ಚಿನ್ನದ ಸರದ ಬೆಲೆ 1,10,000/- ರೂ ಅಗಿದ್ದು, ಕಳ್ಳರನ್ನು ಪತ್ತೆ ಮಾಡಿ, ಕಳುವಾಗಿರುವ ಚಿನ್ನದ ಸರವನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ