IMG_20231102_181749_copy_398x232

 

 

ಕನ್ರನಡ ರಾಜ್ಯೋತ್ಸವ ಪ್ರಯುಕ್ತ ಬುಧವಾರದಂದು ಮೂಡಿಗೆರೆ ಪಟ್ಟಣದಲ್ಲಿ ಜೆಸಿಐ ಹಾಗೂ ಕನ್ನಡ ಸಾಹಿತ್ಯ ಪರಿಚತ್ ಇವರ ಸಹಭಾಗಿತ್ವದಲ್ಲಿ ಕರ್ನಾಟಕ ಸಂಭ್ರಮ-೫೦ರ ಆಚರಣೆ ನಡೆಯಿತು.

 

ಕಾರ್ಯಕ್ರಮದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರುನಾಡ ಬಾವುಟವನ್ನು ಹಿಡಿದು ಮೆರವಣಿಗೆ ನಡೆಸಿದರು.

 ಕಾರ್ಯಕ್ರಮ ಉದ್ಘಾಟನೆಯನ್ನು ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ನೆರವೇರಿಸಿ ಮಾತನಾಡಿದ ಅವರು ಕನ್ನಡ ಉಳಿಯಬೇಕಾದರೆ ಕನ್ನಡವನ್ನು ಬಳಸಿ,ಕನ್ನಡವನ್ನು ಬೆಳೆಸಿದರೆ,ಕನ್ನಡ ಭಾಷೆ ಅಳಿಯದೆ ಉಳಿಯುತ್ತದೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿರುವ ಹಾಗೂ ಮಾತನಾಡಿದ ಹಾಗೆ ಬರೆಯುವ,ಅಮೃತದಷ್ಟೂ ರುಚಿಯಿರುವ ಏಕೈಕ ಭಾಷೆ ಕನ್ನಡ,ಅಂತಹ ಕನ್ನಡದ ರಾಜ್ಯೋತ್ಸವ ಆಚರಣೆ ಮಾಡುತ್ತಿದುವುದು ನಮ್ಮ ಸೌಭಾಗ್ಯ ಎಂದು ನುಡಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸಾಹಿತಿ ಡಿ.ಎಂ.ಮಂಜುನಾಥ ಸ್ವಾಮಿ ಅವರು ಮಾತನಾಡಿ ಕನ್ನಡ ಉಳಿಯಬೇಕಾದರೆ ಕನ್ನಡವನ್ನು, ಕನ್ನಡದ ಸಂಸ್ಕೃತಿಯನ್ನು, ಕನ್ನಡದ ನೆಲಮೂಲದ ಕಲೆಯನ್ನು ಉಳಿಸುವುದು ಮುಖ್ಯ, ಕನ್ನಡಕ್ಕಾಗಿ ಎಷ್ಟೋ ತ್ಯಾಗ ಬಲಿದಾನಗಳಾಗಿವೆ. ಕನ್ನಡವನ್ನು ಬಳಸುವಂತೆ ಹಾಗೂ ಕನ್ನಡ ಸಾಹಿತ್ಯ ಮತ್ತು ನುಡಿಯನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ, ಜೆಸಿಐ ಮೂಡಿಗೆರೆ ಘಟಕದ ಅಧ್ಯಕ್ಷರಾದ ಸವಿತಾ ರವಿ, ನಿಕಟಪೂರ್ವ ಅಧ್ಯಕ್ಷರಾದ ವಿದ್ಯಾರಾಜು, ಚಂದ್ರಶೇಖರ್ ಕುನ್ನಹಳ್ಳಿ, ಸುಧಾ ಚಂದ್ರಶೇಖರ್, ಕಸಾಪ ತಾಲ್ಲೂಕು ಅಧ್ಯಕ್ಷರಾದ ಶಾಂತಕುಮಾರ್,ಗೌರವ ಕಾರ್ಯದರ್ಶಿಗಳಾದ ಆರ್.ಪ್ರಕಾಶ್,ವಿ.ಪಿ.ನಾರಾಯಣ್, ಜಿಲ್ಲಾ ಸಂಚಾಲಕರಾದ ವಿಶಾಲ ನಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಕ್ಕಿಮಂಜುನಾಥ್, ಜಿಲ್ಲಾ ಪ್ರಧಾನ ಸಂಚಾಲಕರಾದ ಮಗ್ಗಲಮಕ್ಕಿ ಗಣೇಶ್, ಜೆಸಿಐ ಮೂಡಿಗೆರೆ ಘಟಕದ ನಿಕಟಪೂರ್ವ ಅಧ್ಯಕ್ಷರಾದ ವಿದ್ಯಾ ರಾಜು, ಕಾರ್ಯಕ್ರಮ ನಿರ್ದೇಶಕರಾದ ದೀಕ್ಷಿತ್ ಕಣಚೂರು, ಕಸಾಪ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾ ಜಗದೀಪ್, ಜೆಸಿಐ ಮೂಡಿಗೆರೆ ಘಟಕದ ಕಾರ್ಯದರ್ಶಿ ಪ್ರದೀಪ್ ಕುನ್ನಹಳ್ಳಿ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೆಸಿಐ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ