motamma

 

 

ಯಾವುದೇ ಧರ್ಮ ಹಾಗೂ ಧಾರ್ಮಿಕತೆಗೆ ಧಕ್ಕೆ ಬಾರದ ಹಾಗೆ ಶಕ್ತಿ ದೇವತೆ ದುರ್ಗಾ ದೇವಿ ಉತ್ವವವನ್ನು ಧಾರ್ಮಿಕ, ಶಕ್ತಿ, ಭಕ್ತಿ, ಇಷ್ಟಾನುಸಾರವಾಗಿ ಆಚರಿಸಲಾಗಿದೆ ಎಂದು ಮೂಡಿಗೆರೆ ಶ್ರೀ ದುರ್ಗಾದೇವಿ ಸಮಿತಿ ಅಧ್ಯಕ್ಷೆ ಮೋಟಮ್ಮ ಹೇಳಿದರು.

ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದುರ್ಗಾದೇವಿ ಪ್ರತಿಷ್ಠಾಪನೆ ಮಾಡುವ ಮುನ್ನ ಶ್ರೀ ಮಹಾ ಗಣಪತಿ ಸೇವಾ ಸಮಿತಿಯವರು ಹಾಕಿದ್ದ ಭಗವದ್ ಧ್ವಜವನ್ನು ದುರ್ಗಾದೇವಿ ಸಮಿತಿಯಿಂದ ತೆರವುಗೊಳಿಸಿದ್ದಾರೆಂದು ಗಣಪತಿ ಸಮಿತಿಯವರು ಆರೋಪಿಸಿದ್ದಾರೆ. ಆ ಆರೋಪ ಸತ್ಯಕ್ಕೆ ದೂರವಾಗಿದೆ. ದುರ್ಗಾ ದೇವಿ ಸಮಿತಿಯಿಂದ ಯಾವುದೇ ಭಗವದ್ ಧ್ವಜವನ್ನು ತೆರವುಗೊಳಿಸಿಲ್ಲ. ನಾವು ದುರ್ಗಿ ಉತ್ಸವ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೋರ್ವರಿಗೆ ಮೈಕ್ ಮತ್ತು ವಿದ್ಯುತ್ ದೀಪ ಅಳವಡಿಸಲು ಗುತ್ತಿಗೆ ನೀಡಲಾಗಿತ್ತು. ವಿದ್ಯುತ್ ದೀಪ ಅಲಂಕಾರ ಮಾಡುವ ಸಂದರ್ಭದಲ್ಲಿ ಭಗವದ್ ಧ್ವಜ ತೆರವುಗೊಳಿಸಿ ಅದನ್ನು ಸ್ವತಃ ಅವರ ಮನೆಯಲ್ಲಿ ಭದ್ರವಾಗಿ ಇಟ್ಟಿದ್ದಾರೆ. ಈ ಬಗ್ಗೆ ಅವರೇ ಹೇಳಿಕೆ ಪತ್ರದಲ್ಲಿ ಲಿಖಿತವಾಗಿ ತಿಳಿಸಿದ್ದಾರೆಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದ್ದು ಬಿ.ಜೆ.ಪಿ.ಗೆ ಟೀಕೆ ಮಾಡಲು ಬೇರೆ ವಿಷಯಗಳು ಇಲ್ಲದೇ ಕ್ಷುಲ್ಲಕ ವಿಚಾರಗಳನ್ನು ಮುಂದುಮಾಡಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಯುವಕರು ಇದನ್ನು ಅರ್ಥಮಾಡಿಕೊಂಡು ಭಾವೋದ್ವೇಗಕ್ಕೆ ಒಳಗಾಗದೇ ವಸ್ತುನಿಷ್ಠವಾಗಿ ಚಿಂತಿಸಬೇಕು ಎಂದು ಹೇಳಿದರು.

ಸಮಿತಿ ಕಾರ್ಯಾಧ್ಯಕ್ಷ ಮಂಚೇಗೌಡ ಮಾತನಾಡಿ, ಕಳೆದ 20 ವರ್ಷದಿಂದ ಪಟ್ಟಣದಲ್ಲಿ ಶ್ರೀ ದುರ್ಗಾದೇವಿ ಉತ್ಸವ ನಡೆಸಿಕೊಂಡು ಬರಲಾಗಿದೆ. ಸಮಿತಿಯಲ್ಲಿ ಎಲ್ಲಾ ಪಕ್ಷದವರು ಇದ್ದಾರೆ. ಇಲ್ಲಿ ಧಾರ್ಮಿಕ ವಿಚಾರದಲ್ಲಿ ರಾಜಕಾರಣ ತರಲು ಯಾರೂ ಇಷ್ಟ ಪಡುವುದಿಲ್ಲ. ಯಾವುದೇ ಧರ್ಮಕ್ಕೆ ಅಪಮಾನ ಮಾಡುವ ಉದ್ದೇಶ ಯಾರಿಗೂ ಇಲ್ಲ. ಒತ್ತಾಯವಾಗಿ ಯಾವುದೇ ಭಗವದ್ ಧ್ವಜ ತೆರವುಗೊಳಿಸಿಲ್ಲ. ಒಂದು ಸಣ್ಣ ಗೊಂದಲದಿಂದ ಸಮಸ್ಯೆ ಸೃಷ್ಟಿಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದ ರೀತಿಯಲ್ಲಿ  ದೇವಿ ಉತ್ಸವವನ್ನು ಯಾರಿಗೂ ನೋವಾಗದಂತೆ ಧಾರ್ಮಿಕ ಭಾವನೆ, ಶ್ರದ್ಧಾಭಕ್ತಿಯಿಂದ ಆಚರಿಸಲಾಗಿದೆ ಎಂದು ಹೇಳಿದರು.

ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದುರ್ಗಾದೇವಿ ಸಮಿತಿಯ ಸದಸ್ಯ ಹೆಚ್.ಜಿ. ಸುರೇಂದ್ರಗೌಡ ಮಾತನಾಡಿ ; ದೇವರ ಉತ್ಸವಗಳಲ್ಲಿ ರಾಜಕೀಯ ಮಾಡುವುದು ತಪ್ಪು. ಬಿ.ಜೆ.ಪಿ.ಯವರಿಗೆ ಬೇರೆ ಯಾವುದೇ ವಿಷಯ ಇಲ್ಲದೇ ಭಗವಧ್ವಜ ಮತ್ತು ದುರ್ಗಾದೇವಿಯ ಅಲಂಕಾರದ ವಿಚಾರದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಮೂಡಿಗೆರೆ ಒಂದು ಚಿಕ್ಕ ಊರು ಇಲ್ಲಿ ಪರಸ್ಪರರು ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸುತ್ತಿದ್ದೇವೆ. ಗಣಪತಿ ಮತ್ತು ದುರ್ಗಿ ಪೂಜೆಗಳೆರಡಕ್ಕೂ ಜನರು ತನುಮನಧನ ಸಹಕಾರ ನೀಡುತ್ತಿದ್ದಾರೆ. ಸರ್ವ ಧರ್ಮದವರು ಉತ್ಸವದಲ್ಲಿ ಭಾಗವಹಿಸುತ್ತಾರೆ. ಯಾವುದೇ ಬಣ್ಣಗಳು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲಾ ಬಣ್ಣಗಳು ಶ್ರೇಷ್ಟವಾದುವೇ. ಕೇಸರಿ, ಹಸಿರು, ಕೆಂಪು, ಅರಿಸಿನ ಈ ಎಲ್ಲಾ ಬಣ್ಣಗಳು ದೇವರಿಗೆ ಪ್ರಿಯವಾದವೇ ಆಗಿವೆ. ಆದ್ದರಿಂದ ಅನಾವಶ್ಯಕ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದಿದ್ದಾರೆ.

ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ದುರ್ಗಾ ಸಮಿತಿ ಸದಸ್ಯ ಬಿ.ಎಸ್.ಜಯರಾಂಗೌಡ ಮಾತನಾಡಿ ಕ್ಷೇತ್ರದಲ್ಲಿ ಮತ್ತು ರಾಜ್ಯದಲ್ಲಿ ಜನರ ಪರವಾಗಿ ಧ್ವನಿ ಎತ್ತಲು ಬಿ.ಜೆ.ಪಿ. ಬಹಳಷ್ಟು ವಿಷಯಗಳಿವೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಅದರ ಬಗ್ಗೆ ಸರ್ಕಾರದ ಶಾಸಕರ ಗಮನ ಸೆಳೆಯಬಹುದು. ಅದನ್ನು ಬಿಟ್ಟು ಧ್ವಜದ ವಿಚಾರವನ್ನು ಇಟ್ಟುಕೊಂಡು ಕ್ಷÄಲ್ಲಕ ರಾಜಕೀಯ ಮಾಡಲು ಹೊರಟಿದ್ದಾರೆ. ಇದನ್ನು ಜನರು ಗಮನಿಸುತ್ತಿದ್ದಾರೆ. ಜನರನ್ನು ಭಾವನಾತ್ಮಕ ವಿಚಾರಗಳಿಂದ ದಾರಿ ತಪ್ಪಿಸುವುದು ಬಿಟ್ಟು ಜನರ ನೈಜ ಸಮಸ್ಯೆಗಳ ಪರವಾಗಿ ಹೋರಾಟ ಮಾಡಲಿ ಎಂದು ಕಿವಿಮಾತು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯ ಸಿ.ಬಿ.ಶಂಕರ್, ಎಚ್.ಪಿ.ರಮೇಶ್, ರವಿ ಕುನ್ನಹಳ್ಳಿ, ನಿಶಾಂತ್ ಪಟೇಲ್, ಅಶೋಕ್‌ಗೌಡ, ಸುಧೀರ್, ಹರೀಶ್, ಪ್ರಕಾಶ್, ದೀಕ್ಷಿತ್, ಅನಿಲ್  ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ