ಚಾಲಕನ ನಿಯಂತ್ರಣ ತಪ್ಪಿ ಟಿಂಬರ್ ತುಂಬಿದ ಲಾರಿ ಪಲ್ಟಿ ಹೊಡೆದ ಘಟನೆ ಚಾರ್ಮಾಡಿ ಘಾಟ್ ನ ವ್ಯೂವ್ ಪಾಯಿಂಟ್ ನಲ್ಲಿ ನಡೆದಿದೆ.
ಚಿಕ್ಕಮಗಳೂರಿನಿಂದ ಮಂಗಳೂರಿಗೆ ಮರದ ದಿಮ್ಮಿಗಳನ್ನು ತೆಗೆದುಕೊಂಡು ಸಾಗುತ್ತಿದ್ದ ಲಾರಿ ಸೋಮವಾರ ತಡ ರಾತ್ರಿ ಪಲ್ಟಿ ಹೊಡೆದಿದೆ.
ಚಾಲಕನ ತಲೆಗೆ ಗಂಭೀರ ಗಾಯವಾಗಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



