kodagu acci

 

 

ರಸ್ತೆ ಅಪಘಾತಕ್ಕೆ ತಾನೇ ಕಾರಣನಾಗಿ ಯುವಕನ ಜೀವಕ್ಕೆ ಮುಳುವಾದೆ  ಎಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯನ್ನು ಮಡಿಕೇರಿ ಸಮೀಪದ ಹೆರವನಾಡಿನ ನಿವಾಸಿ  ತಮ್ಮಯ್ಯ(57)  ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಾಸ್ಟರ್ ಡಿಗ್ರಿ ವಿದ್ಯಾರ್ಥಿ ಹಾಗೂ ಹಾಲೇರಿಯ ಕಾಂಡನಕೊಲ್ಲಿ ನಿವಾಸಿ ಧನಲ್ ಸುಬ್ಬಯ್ಯ(24ವರ್ಷ) ಎಂದು ತಿಳಿದುಬಂದಿದೆ. ಅಪಘಾತ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳೆದ ಶುಕ್ರವಾರ ಮಡಿಕೇರಿ ಚೈನ್ ಗೇಟ್ ಬಳಿ‌ ಬೈಕ್ ಸವಾರರ ನಡುವೆ ಅಪಘಾತ ಸಂಭವಿಸಿತ್ತು. ತಮ್ಮಯ್ಯ ಅವರ ಬೈಕ್ ಧನಲ್ ಅವರ ಬೈಕ್ ಡಿಕ್ಕಿಯಾಗಿ ಧನಲ್ ರಸ್ತೆಯಲ್ಲಿ ಬಿದ್ದ ಸಂದರ್ಭದಲ್ಲಿ ಲಾರಿಯೊಂದು ಅವರ ಮೇಲೆ ಹರಿದಿತ್ತು. ಪರಿಣಾಮ ಧನಲ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಅಪಘಾತಕ್ಕೆ ತಾನೇ ಕಾರಣ ಎಂದು ತಮ್ಮಯ್ಯ ತೀವ್ರ ನೊಂದಿದ್ದರು.

ಯುವಕನ ಮೆದುಳು ನಿಷ್ಕ್ರೀಯವಾಗಿದೆ ಎಂದು ಮೈಸೂರು ಆಸ್ಪತ್ರೆಯಲ್ಲಿ ತಿಳಿಸಿದ್ದರು. ಈ ವಿಷಯವನ್ನು ತಿಳಿದ ತಮ್ಮಯ್ಯ ಯುವಕನ ಜೀವಕ್ಕೆ ನಾನು ಕಂಟಕನಾದೆ ಎಂದು ಭಾವಿಸಿ ಭಾನುವಾರ ನಸುಕಿನ ವೇಳೆ ತಮ್ಮ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಧನಲ್ ಸುಬ್ಬಯ್ಯ  ಮೈಸೂರು ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ ಸುಮಾರು 3 ಗಂಟೆಗೆ ಸಾವನ್ನಪ್ಪಿದ್ದಾರೆ.

ಈ ಅಪಘಾತಕ್ಕೆ ತಾನೇ ಕಾರಣ ಎಂದು ಮನನೊಂದು ತಮ್ಮಯ್ಯ ಕಾಕತಾಳೀಯವೆಂಬಂತೆ ಅದೇ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ