kere

 

 

ಕೆರೆಗಳು ಗ್ರಾಮೀಣ ಭಾರತದ ರೈತರ ಜೀವನಾಡಿಗಳಾಗಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ  ಧರ್ಮೋಸ್ಥಾನ ಟ್ರಸ್ಟಿನ ಟ್ರಸ್ಟಿ ಆದ  ಚಿಪ್ರಗುತ್ತಿ ಪ್ರಶಾಂತ್ ರವರು ಹೇಳಿದ್ದಾರೆ.

ಅವರು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿ ಜಿ.ಹೊಸಳ್ಳಿ ದಿಣ್ಣೇಕೆರೆ ಗ್ರಾಮದಲ್ಲಿ  ಶ್ರೀ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ  ಭಾಗವಾದ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

ಆಧುನಿಕ ಜೆಸಿಬಿ ಯುಗದಲ್ಲೂ ನಾವು ಕೆರೆಯನ್ನು ಮಾಡಲು  ಪೇಚಾಡುತ್ತಿದ್ದೇವೆ, ಆದರೆ ದೂರದೃಷ್ಟಿಯನ್ನು ಇಟ್ಟುಕೊಂಡು ಕೇವಲ ಮಾನವ ಸಂಪನ್ಮೂಲವನ್ನು ಬಳಸಿ ರೈತರಿಗೆ ಪ್ರಕೃತಿಗೆ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಲೆಂದು ರಾಜರು ಮಹಾರಾಜರು ಕಾಲದಲ್ಲಿ ಲಕ್ಷಾಂತರ ಕೆರೆಗಳನ್ನು ನಿರ್ಮಿಸಿದ್ದರು. ಈಗಿನ ಪ್ರಸ್ತುತ ದಿನಗಳಲ್ಲಿ   ನಮ್ಮ  ಸರಕಾರಗಳು ಹಾಗೂ ಜನಗಳ ಸ್ವಾರ್ಥ ಹಾಗೂ ಬೇಜವಾಬ್ದಾರಿತನದಿಂದ ಕೆರೆಗಳು ಅಪಾಯದ ಅಂಚಿನ ಮಟ್ಟವನ್ನು ಮುಟ್ಟಿವೆ.

ಈ ಎಲ್ಲಾ ಕಾರಣಕ್ಕಾಗಿ  ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನೂರಾರು ಕೋಟಿ ಹಣವನ್ನು ಖರ್ಚು ಮಾಡಿ ಕೆರೆಗಳನ್ನು ನಿರ್ಮಿಸುತ್ತಿದ್ದಾರೆ ಇದರಿಂದ ರೈತರು ಪ್ರಾಣಿ ಪಕ್ಷಿಗಳು ಪ್ರಕೃತಿಗೆ ಹಾಗೂ  ಪರಿಸರದಲ್ಲಿ ಅಂತರ್ಜಲ ಹೆಚ್ಚಾಗಿ ಪರಿಸರಕ್ಕೆ ತುಂಬಾ ಉಪಯೋಗವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆರೆ ಸಮಿತಿಯ ಅಧ್ಯಕ್ಷರಾದ ಕಿರಣ್ ರವರು ಶ್ರೀ ಹೆಗ್ಗಡೆಯವರ ಕಾರ್ಯಕ್ರಮವನ್ನು ಶ್ಲಾಘನೆ ಮಾಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿನೇಶ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಿರ್ಮಾಣ ಆಗುತ್ತಿರುವ ಈ ಕೆರೆಗೆ ನಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ, ಭರವಸೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ದೀಪಕ್, ರಘು, ಚಂದ್ರಶೇಖರ್, ಗಿರೀಶ್ ಮಣ್ಣಿಕೆರೆ, ಜಗತ್, ಯೋಜನಾಧಿಕಾರಿ ಶಿವಾನಂದ್, ಮೇಲ್ವಿಚಾರಕರಾಧ ದೀಪಕ್ ಹಾಗೂ ಇನ್ನಿತರು ಇದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ