ಲೋಕಸಭಾ ಚುನಾವಣೆಗೆ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಕರ್ತವ್ಯ ನಿರ್ವಹಿಸಲು ಆಗಮಿಸಿರುವ ಸಿ.ಆರ್.ಪಿ.ಏಫ್ ತುಕಡಿಗಳು ಶನಿವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪ್ಲಾಗ್ ಮಾರ್ಚ್ ನಡೆಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ತುಕಡಿಗಳ ಸಂಚಾರ ಮಾಡಿದ್ದು, ನಗರದ ಅಂಡೆಛತ್ರ, ಎಂಜಿ ರಸ್ತೆ ಕಡೆಯಿಂದ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ನಗರಠಾಣೆ ಯವರೆಗೆ ಮೆರವಣಿಗೆ ನಡೆಯಿತು.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ಮಾಹಿತಿ ನೀಡಿ ತುಕಡಿಗಳನ್ನು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮುಂದೆ ಇನ್ನು ಹೆಚ್ಚು ತುಕಡಿಗಳು ಚುನಾವಣೆ ಕರ್ತವ್ಯಕ್ಕೆ ಆಗಮಿಸಲಿವೆ ಎಂದು ಹೇಳಿ, ಜಿಲ್ಲೆಗೆ 70 ಸಿಬ್ಬಂದಿಗಳ ಮಹಿಳಾ ಅಧಿಕಾರಿಗಳ ಮೊದಲ ತಂಡ ಆಗಮಿಸಿದ್ದು ಇವರು ಜಿಲ್ಲೆಯಲ್ಲಿ ಇದ್ದು ಸಾರ್ವಜನೀಕರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದರು
ಈ ತುಕಡಿಗಳು ಚುನಾವಣೆಗೆ ಸಂಬಂಧಿಸಿದಂತೆ ಪ್ರದೇಶದ ಪ್ರಾಬಲ್ಯ, ಚೆಕ್ ಪೋಸ್ಟ್ ಕರ್ತವ್ಯ, ಸ್ಟ್ರಾಂಗ್ ರೂಮ್ ಭದ್ರತೆ ಕರ್ತವ್ಯ, ಪ್ರಮುಖ ಸ್ಥಳಗಳಲ್ಲಿ ರೂಟ್ ಮಾರ್ಚ್, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸ್ಥಳೀಯ ಪೊಲೀಸ್ ರಿಗೆ ಸಹಾಯಕ ಕರ್ತವ್ಯ ಹಾಗೂ ಇತರ ಚುನಾವಣೆ ಗೆ ಸಂಬಂದಿಸಿದ ಕರ್ತವ್ಯಗಳನ್ನು ನಿರ್ವಹಿಸಲಿವೆ ಎಂದು ವಿವರಿಸಿದರು.




