IMG-20240520-WA0315

 

 

ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ, ಮತ್ತು ಬಣಕಲ್  ಮಲ್ನಾಡ್ ಕ್ಲಿನಿಕ್ ಮತ್ತು ಲ್ಯಾಬೋರೆಟರಿ  ಇವರ ಸಹಯೋಗದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬಣಕಲ್ ರಿವರ್ ವ್ಯೂವ್ ಶಾಲೆಯಲ್ಲಿ ನಡೆಸಲಾಯಿತು.
ಮಂಗಳೂರಿನ ಆಸ್ಪತ್ರೆಯ ವೈದ್ಯೆ ಡಾ. ಕೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ಗ್ರಾಮೀಣ ಭಾಗದ ಜನರು ಸಂಘ ಸಂಸ್ಥೆಗಳಿಂದ ಆಯೋಜಿಸುವ ಉಚಿತ ಆರೋಗ್ಯ ತಪಾಸಣೆಯ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಶಿಬಿರದಲ್ಲಿ ಡಾ.ಪೂರ್ಣ, ಡಾ ಹರ್ಷಿತ್, ಡಾ ಇಮ್ರಾನ್   ಅವರು ಜನರ ಆರೋಗ್ಯ ತಪಾಸಣೆ  ಮಾಡಿದರು. ರಕ್ತದ ಒತ್ತಡ, ಮಧುಮೇಹ ಪರೀಕ್ಷೆ, ಮೂತ್ರ ಕೋಶ ತಪಾಸಣೆ, ಹೃದ್ರೋಗ ತಪಾಸಣೆ, ಇನ್ನಿತರ ಪರೀಕ್ಷೆಗಳನ್ನು ಶಿಬಿರದಲ್ಲಿ ನಡೆಸಲಾಯಿತು.
ನೂರಾರು ಜನರು ಮಕ್ಕಳು ಸಹ ಶಿಬಿರದ ಲಾಭ ಪಡೆದರು.ಕಾರ್ಯಕ್ರಮದಲ್ಲಿ ಉತ್ತಮ ಸಾಮಾಜಿಕ ಸೇವೆಗಾಗಿ ಬಣಕಲ್ ಸಮಾಜ ಸೇವಕ ಮೊಹಮ್ಮದ್ ಆರೀಫ್  ಅವರನ್ನು ಸನ್ಮಾನಿಸಲಾಯಿತು.
ಬಣಕಲ್ ಗ್ರಾ.ಪಂ.ಅಧ್ಯಕ್ಷೆ ಅತಿಕಾ ಭಾನು, ಹಿರಿಯ ವರ್ತಕರಾದ ಯಶೋಧರ್ ರಾವ್, ಕೋಮು ಸೌಹಾರ್ದ ವೇದಿಕೆಯ ಗೌಸ್ ಮೊಯಿದಿನ್, ಅರುಣ್ ಪೂಜಾರಿ, ಇರ್ಫಾನ್, ಪ್ರಭಾಕರ್ ಬಿನ್ನಡಿ, ಇಮ್ರಾನ್, ಪಿ. ಮುಖ್ಯ ಶಿಕ್ಷಕ ಪಿ.ವಾಸುದೇವ್ ಭಟ್ ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ