bakrid

 

 

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಬಕ್ರಿದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹೊಸ ಬಟ್ಟೆ ತೊಟ್ಟು ಮಸೀದಿಗೆ ಹೋಗಿ ಕುರಾನ್ ಪಠಿಸಿ ನಮಾಜ್ ಮಾಡಿದರು. ಪರಸ್ಪರ ಹಬ್ಬದ ಶುಭಾಶಯ ಕೋರಿದರು.ಬಳಿಕ  ಖಬರಸ್ಥಾನಕ್ಕೆ ತೆರಳಿ ಕುಟುಂಬದಲ್ಲಿ ಮೃತರಾದ ಹಿರಿಯರಿಗೆ ಕುಟುಂಬದ ಸದಸ್ಯರ ಮುಕ್ತಿಗಾಗಿ ಪ್ರಾರ್ಥಿಸಿದರು.

ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆಯಲ್ಲಿರುವ ತಾಜಾರಿನ್, ಸಂಗೀನಾ, ನೆಹರು ನಗರದ ಬದ್ರಿಯಾ, ಉಪ್ಪಳ್ಳಿಯ ಶಾದ್ರುಲಿ, ಕಲ್ಲುದೊಡ್ಡಿಯ ಅಮ್ಜದ್ ಖಾರಾರ್ ಹಾಗೂ ಆದಿಶಕ್ತಿ ನಗರದ ಮಸೀದಿಗಳಲ್ಲಿ ಬ್ಯಾರಿ ಸಮುದಾಯದವರು ಬೆಳಿಗ್ಗೆ 8 ಗಂಟೆಯ ವೇಳೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆ 10 ಯ ವೇಳೆಗೆ ಮುಸ್ಲಿಂ ಸಮುದಾಯದವರು ಚಿಕ್ಕಮಗಳೂರಿನ ವಿಜಯಪುರ ಹಾಗೂ ಕೆಂಪನಹಳ್ಳಿಯ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೆಂಪನಹಳ್ಳಿಯ ಈದ್ಗಾ ಮೈದಾನಕ್ಕೆ ಸಾಮೂಹಿಕ ಪ್ರಾರ್ಥನೆ ವೇಳೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅವರು ಭೇಟಿ ನೀಡಿ ಮಾತನಾಡಿ, ಬಕ್ರೀದ್ ಹಬ್ಬದ ಶುಭಾಶಯ ಸಲ್ಲಿಸಿದರು.

ಎಲ್ಲರೂ ಕೂಡ ಜಾತಿ, ಧರ್ಮವನ್ನು ಬದಿಗಿಟ್ಟಿ ಸೌಹಾರ್ದತೆಯಿಂದ ಬಾಳಬೇಕು. ಇದು, ಸಂವಿಧಾನದ ಆಶಯವಾಗಿದೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಮದಶೀರ್, ವಕ್ಫ್ ಬೋರ್ಡ್ ಚೇರ್‌ಮನ್ ಶಾಹೀದ್ ರಜ್ವಿ ಹಾಗೂ ಧರ್ಮಗುರುಗಳು ಹಾಜರಿದ್ದರು.

ಕೊಟ್ಟಿಗೆಹಾರ ಜುಮ್ಮಾ  ಮಸೀದಿಯ ದರ್ಮಗುರು ಇಮ್ಧಾಧಿ ಕನ್ಯಾಣ ಪ್ರವಚನ ನೀಡಿ ಮಾತನಾಡಿ’ ಮುಸ್ಲಿಂ ಬಾಂದವರು ಆಚರಿಸುವ ಹಬ್ಬಗಳಲ್ಲಿ ಬಕ್ರೀದ್ ಹಬ್ಬವು ದೊಡ್ಡ ಹಬ್ಬವಾಗಿದ್ದು, ಈ ಹಬ್ಬವು ತ್ಯಾಗ, ಬಲಿದಾನದ ಪ್ರತೀಕವಾಗಿದೆ.ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಘಟನೆಯ ಸ್ಮರಣೆಯೇ ಬಕ್ರೀದ್ ಹಬ್ಬದ ಆಚರಣೆ. ಪ್ರವಾದಿ ಇಬ್ರಾಹಿಂ ಅವರು ಇಸ್ಲಾಮಿನ ಏಕದೇವ ವಿಶ್ವಾಸ ಸ್ಥಾಪನೆಗಾಗಿ ತನ್ನ ಹೆತ್ತವರು, ಸ್ವಂತ ಕುಟುಂಬ ಮನೆ, ಆಸ್ತಿ ತ್ಯಾಗ  ಮಾಡಿ ದೇಶಾಂತರ ಹೊರಟು ದೇವರ ಆದೇಶದಂತೆ ವೃದ್ದಾಪ್ಯದಲ್ಲಿ ಸ್ವಂತ ಮಗುವನ್ನು ಬಲಿ ಕೊಡಲು ಹೊರಟ ಅಮರ ಇತಿಹಾಸವನ್ನು ಬಕ್ರೀದ್ ಹಬ್ಬ ನೆನೆಸುತ್ತದೆ’ ಎಂದರು.

ಬಣಕಲ್ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ದರ್ಮಗುರು ಸಫ್ವಾನ್ ಫೈಝೀ ಮಾತನಾಡಿ’ ‘ನಾವು ಸಮಾಜದಲ್ಲಿ ಬಡವರಿಗೆ ದಾನ ಮಾಡುವ ಔದಾರ್ಯವನ್ನು ಹೊಂದಿ ನಮ್ಮ ಸಾಂಸಾರಿಕ ಜೀವನವನ್ನು ಸಫಲಗೊಳಿಸಬೇಕು. ಉಳ್ಳವರು ಬಡವರಿಗೆ ದಾನ ನೀಡುವ ಮೂಲಕ ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು’ ಎಂದರು.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ