ಮೂಡಿಗೆರೆ ರೋಟರಿ ಸಂಸ್ಥೆಯ 41ನೇ ಅಧ್ಯಕ್ಷರಾಗಿ ನರೇಂದ್ರ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ನವೀನ್ ಅಧಿಕಾರ ಸ್ವೀಕರಿಸಿದ್ದಾರೆ.
ಬುಧವಾರ ಸಂಜೆ ಮೂಡಿಗೆರೆ ಜೇಸಿಐ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಸಂದರ್ಭದಲಿ ಪದಪ್ರದಾನ ಅಧಿಕಾರಿಯಾಗಿ ಮಾತನಾಡಿದ ಶೇಖರ್ ಶೆಟ್ಟಿಯವರು ಮಾತನಾಡಿ ರೋಟರಿ ಸಂಸ್ಥೆ ಒಂದು ವಿಶ್ವವಿದ್ಯಾಲಯವಿದ್ದಂತೆ, ಇಲ್ಲಿ ಸಿಗುವ ಅನುಭವವೂ ಜೀವನದಲ್ಲಿ ನಮಗೆ ದೊಡ್ಡ ದಾರಿದೀಪವಾಗಿರುತ್ತದೆ. ಅಧಿಕಾರ ಯಾವತ್ತೂ ಶಾಶ್ವತವಲ್ಲ, ನಮಗೆ ಅಧಿಕಾರ ಸಿಕ್ಕಾಗ ಅದರಿಂದ ಸಮಾಜಕ್ಕೆ ಏನು ಕೊಡುಗೆ ನೀಡಿದೆವು ಎಂಬುದು ಬಹಳ ಮುಖ್ಯವಾಗುತ್ತದೆ. ರೋಟರಿಯಲ್ಲಿ ಕೇವಲ ಒಂದು ವರ್ಷದ ಅಧಿಕಾರವನ್ನು ನಿಗದಿಮಾಡಲಾಗಿದೆ. ಇದರಿಂದ ಅಧ್ಯಕ್ಷರಾದವರಿಗೆ ಆಸಕ್ತಿಯಿಂದ ಕೆಲಸ ಮಾಡಲು ಪ್ರೇರಪಣೆ ಸಿಗುತ್ತದೆ ಎಂದರು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಜನರ ನಡುವೆ ಅಪನಂಬಿಕೆಗಳು ಹೆಚ್ಚಾಗುತ್ತಿವೆ. ಅವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಕೆಲಸ ಮಾಡುವ ಜರೂರತ್ತಿದೆ. ಬೇರೆಯವರ ಮೊಗದಲ್ಲಿ ನಗುವನ್ನು ತರುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಅಸಿಸ್ಟೆಂಟ್ ಗವರ್ನರ್ ಅರುಣ್ ರಕ್ಷಿದಿ, ವಲಯ ಅಧಿಕಾರಿ ಲೋಕೇಶ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿರ್ಗಮಿತ ಅಧ್ಯಕ್ಷ ಕೆ.ಎಲ್.ಎಸ್. ತೇಜಸ್ವಿ ; ಕಳೆದ ಸಾಲಿನಲ್ಲಿ ಮೂಡಿಗೆರೆ ರೋಟರಿಯಿಂದ ಅನೇಕ ಜನೋಪಯೋಗಿ ಕೆಲಸಗಳನ್ನು ನೆರವೇರಿಸಲಾಗಿದೆ. ಸಾರ್ವಜನಿರಕು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು ಮತ್ತು ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ನಿರ್ಗಮಿತ ಕಾರ್ಯದರ್ಶಿ ಸಚಿನ್ ಎಸ್. ಕಳೆದ ಸಾಲನ ಕಾರ್ಯಕ್ರಮಗಳ ವರದಿ ಮಂಡಿಸಿದರು.



