suddi-5 (1)

 

 

ಉದ್ಯೋಗಾವಕಾಶದಲ್ಲಿ ಇಂಜಿನಿಯರ್ ಪದವೀಧರರಿಗೆ ವ್ಯಾಪಕ ಬೇಡಿಕೆಯಿದೆ. ಈ ಪದವಿ ಗಳಿಸಿದ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಕೆಲಸ ನಿಭಾಯಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಶ್ರೀ ನಿರ್ಮಲನಂದನಾಥ ಸ್ವಾ ಮೀಜಿ ಹೇಳಿದರು.

ನಗರದ ಎಐಟಿ ಕಾಲೇಜಿನ ಎಸ್.ಟಿ.ಎನ್. ರಂಗಮಂದಿರದಲ್ಲಿ ಸೋಮವಾರ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಆಯೋಜಿಸಿದ್ಧ ಪದವಿ ಪ್ರಧಾನ ಸಮಾರಂಭ ಹಾಗೂ ರ್ಯಾಂಕ್ ವಿಜೇ ತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಲಿಕೆಯ ನಂತರ ವಿದ್ಯಾರ್ಥಿಜೀವನ ಸಮಾಜದಲ್ಲಿ ಇನ್ನೊಂದು ರೀತಿ ಬದಲಾವಣೆ ಆಗಲಿದೆ. ನಾಯ ಕತ್ವ, ಶಿಸ್ತು ಮತ್ತು ಸಮಾಜದೊಂದಿಗೆ ಆವಿಭಾವ ಸಂಬಂಧದೊಂದಿಗೆ ಸನ್ನಡತೆಯ ದಾರಿಯಲ್ಲಿ ಸಾಗಬೇಕು . ಭವಿಷ್ಯದಲ್ಲಿ ಉದ್ದಿಮೆಶಾಹಿಗಳಾಗಿ ಬೆಳವಣಿಗೆ ಹೊಂದಬೇಕು ಎಂದು ಸಲಹೆ ಮಾಡಿದರು.

ವೃತ್ತಿರಂಗದ ಆರಂಭದಲ್ಲಿಯೇ ಇಂದಿನ ಯುವಜನತೆ ಅನೇಕ ಒತ್ತಡಗಳನ್ನು ಎದುರಿಸುತ್ತಿವೆ. ಇದನ್ನು ಸಮರ್ಥವಾಗಿ ಎದುರಿಸುವ ಚಾಣಕ್ಯತೆ ಅವಶ್ಯಕ. ಬದುಕಿನಲ್ಲಿ ಅನಿವಾರ್ಯ ಕಷ್ಟ-ಸುಖ, ಲಾಭ-ನಷ್ಟಗಳು ಎಷ್ಟೇ ತೀವ್ರತರವಾಗಿದ್ದರೂ ಉದ್ವೇಗಕ್ಕೆ ಒಳಗಾಗದೇ ಸದಾ ಸಮಾಧಾನದಿಂದ ನಿರ್ವಹಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸಾಮಥ್ರ್ಯವಿರುವ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ, ಶ್ರಮವಹಿಸಿ ದುಡಿ ದರೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು. ನಿಮ್ಮ ಜೀವನದ ಮೌಲ್ಯ ನಿರ್ಧರಿತವಾಗುವುದು ಇತರರ ಬದುಕಿಗೆ ಮತ್ತು ಸಮಾಜದ ಏಳಿಗೆಗೆ ಎಷ್ಟು ನೆರವಾಗಿದ್ದೇವೆ ಎನ್ನುವ ಅಂಶದಲ್ಲಿರುತ್ತದೆ ಎಂದರು.

ಸಮಾಜದ ಎದುರು ವಿದ್ಯಾರ್ಥಿಗಳು ಮೊದಲು ವಿನಯಶೀಲರಾಗಬೇಕು. ಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯಗಳ ಬಗ್ಗೆ ಗಮನಹರಿಸಬೇಕು. ವಿದ್ಯಾರ್ಥಿ ಜೀವನದ ನಂತರ ಸಮಾಜದ ಮುಂದೆ ಯಾವುದೇ ಶಿಕ್ಷಕ ರು, ಪ್ರಾಂಶುಪಾಲರು ತಿದ್ದಲಾಗುವುದಿಲ್ಲ. ಸ್ವಯಂಪ್ರೇರಿತರಾಗಿ ಒಳ್ಳೆಯ ಬೆಳವಣಿಗೆ ಬೆಳೆಸಿಕೊಳ್ಳಬೇಕು. ನಿ ರ್ಲಕ್ಷಿಸಿದರೆ ಜನರಿಂದಲೇ ತೇಗಳುವಿಕೆಗೆ ಒಳಗಾಗಬೇಕಾಗುತ್ತದೆ ಎಂದರು.

ಎ.ಐ.ಸಿ.ಟಿ.ಇ. ಮಾಜಿ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಮಾತನಾಡಿ ವಿದ್ಯಾರ್ಥಿಗಳು ಸಮಾಜಕ್ಕಾಗಿ ಮೌಲ್ಯ ವನ್ನು ಸೃಷ್ಟಿಸಿದಾಗ ಅಲ್ಲಿ ನೀವು ಯಶಸ್ಸು ಸಾಧ್ಯ. ವಾಸ್ತವಾಗಿ ಬಹಳ ಸುವರ್ಣ ಕಾಲದಲ್ಲಿ ನೀವುಗ ಳು ಜೀವಿ ಸುತ್ತಿದ್ದೀರಿ. ಕೇಂದ್ರ ಸರ್ಕಾರವು ಅಮೃತ ಕಾಲವೆಂದೇ ಹೇಳುತ್ತದೆ. ಈ ಸಮಯದಲ್ಲಿ ಏನೇ ಮಾ ಡಿದರೂ ಬಹಳ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಭಾರತ ಉದ್ಯಮಶೀಲ ರಾಷ್ಟ್ರವಾಗಿ ಸಾಗುತ್ತಿದೆ. ಎಐ ತಂತ್ರಜ್ಞಾನ ಯುವಜನತೆಗೆ ಉದ್ಯಮಿಯಾಗಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿದೆಸೆಯಿಂದಲೇ ಕೌಶಲ್ಯಗಳು, ಹೊಂದಾ ಣಿಕೆಯ ಸಾಮಥ್ರ್ಯ ಮತ್ತು ಬಲವಾದ ತಾಂತ್ರಿಕ ಅಡಿಪಾಯವನ್ನು ಸಂಯೋಜಿಸುವ ವೈವಿಧ್ಯಮಯ ಮಾ ನವ ಬಂಡವಾಳವು ರಾಷ್ಟ್ರದ ಭವಿಷ್ಯವನ್ನು ಬದಲಾಯಿಸುತ್ತದೆ ಎಂದರು.

ಎಐಟಿ ಪ್ರಾಂಶುಪಾಲ ಡಾ. ಎಂ.ಎ.ಗೌತಮ್ ಮಾತನಾಡಿ ಜ್ಞಾನ ಮತ್ತು ಕೌಶಲ್ಯಗಳನ್ನು ನವೀಕರಿಸು ವುದನ್ನು ಮುಂದುವರಿಸಬೇಕು. ಅದೇ ಸಮಯದಲ್ಲಿ ಸಮಗ್ರತೆ, ವಿನಯ ಮತ್ತು ಸಹಾನುಭೂತಿಯಂಥ ಬಲವಾದ ಮೌಲ್ಯಗಳನ್ನು ಬೇರೂರಿಸಿಕೊಳ್ಳಬೇಕು. ಪ್ರತಿಯೊಂದು ನಿರ್ಧಾರವನ್ನು ಮಾರ್ಗದರ್ಶನ ಹಾ ಗೂ ಸಲಹೆಯಿಂದ ಪಡೆದುಕೊಳ್ಳುವುದು ಉತ್ತಮ ಎಂದರು.

ಪ್ರತಿಯೊಬ್ಬರ ಹಿನ್ನೆಡೆಯು ಬಲಶಾಲಿಯಾಗಲು ಒಂದು ಅವಕಾಶವಿದೆ. ಎಲ್ಲಕಿಂತ ಹೆಚ್ಚಾಗಿ ಸಮಾಜಕ್ಕೆ ಸೇವೆ ಸಲ್ಲಿಸುವುದು ನೆನಪಿಡಿ. ವಿದ್ಯಾರ್ಥೀಗಳು ಇಂದು ಪದವಿ ಪಡೆದು ನಿರ್ಗಮಿಸಿದರೂ, ಸಂಸ್ಥೆಯೊಂ ದಿಗಿನ ಸಂಬಂಧವು ಕೊನೆಗೊಳ್ಳುವುದಿಲ್ಲ. ಹಳೆಯ ವಿದ್ಯಾರ್ಥಿಗಳಾಗಿ ಜೀವಮಾನದ ಬಂಧವಾಗಿ ರೂ ಪಾಂತರಗೊಳ್ಳುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಎಐಟಿ ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಆದಿಚುಂಚನಗಿರಿ ಯುನಿರ್ಸಿಟಿ ರಿಜಿಸ್ಟರ್ ಸಿ.ಕೆ.ಸುಬ್ಬರಾಯ, ವಿ ದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿ ಸಂಗಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ