suddi-6 (2)

 

 

ನೂರಾರು ಕೋಟಿ ಒಡೆಯನಾದರೂ ಕಲಿತಿರುವ ಶಾಲೆಯನ್ನು ಮರೆಯದೇ, ಪುನಶ್ಚೇತನಗೊಳಿಸಿ ನೂರಾರು ವಿದ್ಯಾರ್ಥಿಗಳಿಗೆ ಆಶ್ರಯವಾದ ಬ್ರಿಗ್ರೇಡ್ ಸಂಸ್ಥಾಪಕರು, ಇನ್ನಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಚಿರಾಯುವಾಗಲಿ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇ ಶ್ ಹೇಳಿದರು.

ನಗರದ ಹೊಸಮನೆ ಬಡಾವಣೆ ಸಮೀಪದ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ವಿಶ್ವವಿದ್ಯಾಲಯ ವಿದ್ಯಾಶಾಲೆ ನವೀಕರಣ ಮತ್ತು ಹೊಸದಾಗಿ ಅಭಿವೃದ್ದಿಪಡಿಸಿದ ಆಟದ ಮೈದಾನ ಉದ್ಘಾಟನಾ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಹವ್ಯಾಸಕ್ಕೆ ತಕ್ಕಂತೆ ಕೊಠಡಿಗಳ ನಿರ್ಮಾಣ, ಆಟದ ಮೈದಾನವು ಗುಣಮಟ್ಟತೆಯಿಂ ದ ಕೂಡಿದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಸುಂದರ ಭವಿಷ್ಯ ರೂಪಿಸಲು ಹಾಗೂ ಬ್ರಿಗ್ರೇಡ್ ಫೌಂಡೇಷ ನ್ ಸಂಸ್ಥಾಪಕರ ನೆನಪು ಮರುಸೃಷ್ಟಿಸಲು ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ವಿದ್ಯಾಲಯ ನವೀ ಕರಿಸಿರು ವುದು ಹೆಮ್ಮೆಯ ಸಂಗತಿ ಎಂದರು.

ಸಾರ್ವಜನಿಕ ಬದುಕಿಗಾಗಿ ಬ್ರಿಗ್ರೇಡ್ ದುಡಿಯುವ ಒಂದಿಷ್ಟು ಪಾಲನ್ನು ಸಮಾಜಕ್ಕೆ ಮುಡಿಪಿಟ್ಟಿದೆ. ಈ ಶಾಲೆಯಲ್ಲಿ ವಿದ್ಯಾರ್ಜನೆ ಪೂರೈಸಿದ ಅನೇಕರು ಐಪಿಎಸ್, ವೈದ್ಯ, ಕಾಫಿಬೋರ್ಡ್ ನಿರ್ದೇಶಕ, ರಾಜಕಾರ ಣಿಗಳಾಗಿ ಹೊರಹೊಮ್ಮಿದ್ದಾರೆ. ಇಂಥ ಹಿನ್ನೆಲೆ ಹೊಂದಿರುವ ಶಾಲೆಗೆ ಇದೀಗ ಬ್ರಿಗ್ರೇಡ್ ಸಕಲ ಸೌಕರ್ಯ ಕಲ್ಪಿಸುವ ಮೂಲಕ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದೆ ಎಂದರು.

ದೇಶದಾದ್ಯಂತ ಎಂ.ಆರ್.ಜಯಶಂಕರ್ ಛಾಪು ಮೂಡಿಸುವ ವ್ಯಕ್ತಿ, ಓದಿದ ಶಾಲೆಗೆ ಅಪಾರವಾದ ಕೊಡುಗೆ ನೀಡಿದ್ದು ಮುಂಬರುವ ದಿನದಲ್ಲಿ ಈ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುವ ಮಕ್ಕಳು ಅದೃಷ್ಟವಂ ತಾಗಿದ್ದಾರೆ. ಹೀಗಾಗಿ ಪಾಲಕರು ಮೌಲ್ಯಯುತ ಸಂಸ್ಕಾರ ನೀಡುವ ಶಾಲೆಯ ಸೌಲಭ್ಯವನ್ನು ಪಡೆದುಕೊಳ್ಳ ಬೇಕು ಎಂದು ಕಿವಿಮಾತು ಹೇಳಿದರು.

ಬ್ರಿಗ್ರೇಡ್ ಫೌಂಡೇಷನ್ ಸಂಸ್ಥಾಪಕ ಎಂ.ಆರ್.ಜಯಶಂಕರ್ ಮಾತನಾಡಿ ಬ್ರಿಗ್ರೇಡ್ ಕೇವಲ ಒಂದು ಕಟ್ಟಡವನ್ನು ನವೀಕರಿಸಿಲ್ಲ. ನಮ್ಮ ಪರಂಪರೆಯನ್ನು ಸಂರಕ್ಷಿಸಿದ್ದೇವೆ. ಭವಿಷ್ಯದ ವಿದ್ಯಾರ್ಥಿಗಳ ಪೀಳಿಗೆಗೆ ಅಡಿಪಾಯ ಬಲಪಡಿಸಿದ್ದು ಶಾಲಾಡಳಿತ ಮಂಡಳಿ ಮತ್ತು ಈ ಯೋಜನೆಗೆ ಬೆಂಬಲ ನೀಡಿದ ಎಲ್ಲರಿಗೂ ಪ್ರಾಮಾಣೀಕವಾಗಿ ಕೃತಜ್ಞನಾಗುತ್ತೇನೆ ಎಂದು ತಿಳಿಸಿದರು.

ಶಾಲೆಯ ಹಿಂದಿನ ವೈಭವವನ್ನು ಮರುಸ್ಥಾಪಿಸಲು ಈ ಯೋಜನೆಯನ್ನು ಪೂರ್ಣಗೊಳಿಸಲು ಶ್ರದ್ದೆ ಯಿಂದ ಕೆಲಸ ಮಾಡಿದ್ದೇವೆ. ಲಭ್ಯವಿರುವ ಜಾಗದಲ್ಲಿ ಆಟದ ಮೈದಾನ ಮೇಲ್ಜರ್ಜೆಗೇರಿಸಲು ಸಾಧ್ಯವಾಗಿದೆ . ವಿದ್ಯಾರ್ಥಿಗಳೇ ಈ ಸಂಸ್ಥೆಯ ಭವಿಷ್ಯ. ಈ ಸೌಲಭ್ಯವನ್ನು ಉತ್ತಮವಾಗಿ ಬಳಸಿ, ಉತ್ಪøಷ್ಟತೆಯನ್ನು ಬೆನ್ನ ಟ್ಟಿ ಮತ್ತು ಸಮರ್ಪಣಾ ಮನೋಭಾವದಿಂದ ಬಲವಾದ ಮೌಲ್ಯ ಎತ್ತಿಹಿಡಿಯಬೇಕು ಎಂದರು.

ವಿಶ್ವವಿದ್ಯಾಲಯ ಶಾಲೆಯು ಜ್ಞಾನ ಮತ್ತು ಸೇವೆಯನ್ನು ಪೋಷಿಸುವುದನ್ನು ಮುಂದುವರೆಸಬೇಕು. ಅನೇಕ ದಶಕಗಳವರೆಗೆ ಅತ್ಯುತ್ತಮ ನಾಗರೀಕರನ್ನು ಉತ್ಪಾದಿಸಿರುವ ಶಾಲೆಗೆ ಬ್ರಿಗೇಡ್ ಫೌಂಡೇಷನ್ ಮತ್ತು ಟ್ರಸ್ಟಿಗಳು ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಶೇ.33ರಷ್ಟು ಸರ್ಕಾರಿ ಶಾಲೆಗಳಲ್ಲಿ ಶೇ.60ರಷ್ಟು ಶಿಕ್ಷಕರ ಕೊರತೆಯಿಂದ ಮುಚ್ಪಲ್ಪಡುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸುವ ಸರ್ಕಾರಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಗ್ರಾಮೀಣ ಮಕ್ಕಳು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದರು.

ವಿದ್ಯಾಲಯದ ನವೀಕರಣಕ್ಕೆ ಎಂ.ಆರ್.ಜಯಶಂಕರ್ ತುಂಬ ಮನಸ್ಸಿನಿಂದ ಸಹಕರಿಸುವ ಮೂಲಕ ಶಾಲೆಯ ಋಣ ತೀರಿಸುವ ಬಹುದೊಡ್ಡ ಕೆಲಸ ಮಾಡಿದ್ದಾರೆ. ಅದರಂತೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆ, ಐಡಿ ಎಸ್‍ಜಿ, ಪಾಲಿಟೆಕ್ನಿಕ್ ಕಾಲೇಜುಗಳು ಅಭಿವೃಧ್ದಿಗೆ ಸರ್ಕಾರ ಹೊರತಾಗಿ ಅತಿಹೆಚ್ಚು ದಾನಿಗಳ ಕೊಡುಗೆ ಅ ಪಾರವಿದ್ದು ಇದನ್ನು ಉಳಿಸಿಕೊಳ್ಳುವ ಕೆಲಸ ಆಡಳಿತ ಮಂಡಳಿ ಮಾಡಬೇಕಿದೆ ಎಂದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಮೈಸೂರಿನ ಎಂ.ಆರ್.ಜಯಶಂಕರ್ ಕುಟುಂಬವು ಜಿಲ್ಲೆಗೆ ಅ ನೇಕ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ದಾನ, ಧರ್ಮದ ವಿಷಯದಲ್ಲಿ ಅಗ್ರಗಣ್ಯ ಸ್ಥಾನ ಪಡೆ ದುಕೊಂಡಿದ್ದಾರೆ. ಅಲ್ಲದೇ ದುಡಿಮೆಯ ಒಂದಿಷ್ಟು ಪಾಲನ್ನು ಸಮಾಜಕ್ಕಾಗಿ ವ್ಯಯಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಹಣ ಜೀವನದಲ್ಲಿ ಎರಡು ಕಾರಣಕ್ಕೆ ಉಪಯೋಗಿ ಸಿಕೊಳ್ಳಬೇಕು. ವೆಚ್ಚದಿಂದ ಮನುಷ್ಯನಿಗೆ ಸುಖ, ಸಮೃದ್ದಿ ದೊರೆಯಲಿದೆ. ದಾನದಲ್ಲಿ ವಿನಿಯೋಗಿಸಿದ ಹಣ ಕೀರ್ತಿ ಜೊತೆಗೆ ಸಾವಿನ ಬಳಿಕವು ಆ ದಾನಿಯ ಹೆಸರನ್ನು ಸದಾಕಾಲ ನೆನಪಿಸುವಂತೆ ಶಕ್ತಿಯಿದ್ದು ಆ ನಿಟ್ಟಿ ನಲ್ಲಿ ನಾವೆಲ್ಲರೂ ಹಣವನ್ನು ವಿನಿಯೋಗಿಸಬೇಕು ಎಂದರು.

ಇದೇ ವೇಳೆ ಶಾಲೆಯ ನವೀಕರಣಕ್ಕೆ ಶ್ರಮಿಸಿದ ಅನೇಕರನ್ನು ಹಾಗೂ ಹಿರಿಯರನ್ನು ಸನ್ಮಾನಿಸಲಾಯಿ ತು. ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ನಿತೇಶ್ ಪಾಟೀಲ್, ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಸದಸ್ಯೆ ಸುಜಾತ ಶಿವಕುಮಾರ್, ಎ.ಸಿ.ಕುಮಾರಗೌಡ, ವಿದ್ಯಾಸಂಸ್ಥೆ ಆಡ ಳಿತ ಮಂಡಳಿ ಅಧ್ಯಕ್ಷ ಪ್ರೇಮ್‍ಕುಮಾರ್, ಬ್ರಿಗ್ರೇಡ್ ಟ್ರಸ್ಟಿಗಳಾದ ಎಂ.ಆರ್.ಗುರುಮೂರ್ತಿ, ಎಂ.ಆರ್.ನಾಗ ರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ