ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನ ಜಾಗೃತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟಿನ ಟ್ರಸ್ಟಿ ಪ್ರಶಾಂತ್ ಚಿಪ್ರಗುತ್ತಿ ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ ಮಾದಕ ವಸ್ತುಗಳು ಎಷ್ಟು ಮನುಷ್ಯನಿಗೆ ಅಪಾಯಕಾರಿಯೋ ಅಷ್ಟೇ ಮಾದಕ ವಿಷಯಗಳು ಕೂಡ ಅಷ್ಟೇ ಅಪಾಯಕಾರಿ, ಮಾದಕ ವಸ್ತುಗಳು ಮೊದಲು ದೇಹವನ್ನು ಕೆಡಿಸಿ ನಂತರ ಬುದ್ಧಿಯ ಸ್ಥಿಮಿತವನ್ನು ಹಾಳು ಮಾಡಿ ನಂತರ ಮನಸ್ಸನ್ನ ಕೆಡಿಸುತ್ತದೆ. ಮಾದಕ ವಿಷಯಗಳು ಮೊದಲು ಮನಸ್ಸನ್ನ ಕೆಡಿಸಿ ನಂತರ ಬುದ್ಧಿಯ ಸ್ಥಿತಪ್ರಜ್ಞ ಸ್ಥಿತಿಯನ್ನು ಹಾಳು ಮಾಡಿ ನಂತರ ದೇಹದ ಮೇಲು ದುಷ್ಪರಿಣಾಮ ಮಾಡುತ್ತದೆ. ಎರಡರ ಪರಿಣಾಮವು ಬಹುತೇಕ ಒಂದೆ. ಹಾಗಾಗಿ ಮಾದಕ ವಸ್ತುಗಳು ಹಾಗೂ ಮಾದಕ ವಿಷಯಗಳನ್ನು ಎರಡನ್ನು ಕೂಡ ನಿಮ್ಮಗಳಿಂದ ದೂರ ಇಡಲು ಪ್ರಯತ್ನಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು. ಇದಕ್ಕೆ ನಿಮ್ಮ ವೈಯಕ್ತಿಕ ಪ್ರಯತ್ನ ಒಂದು ಭಾಗ ಆದರೆ, ಇನ್ನೊಂದು ಭಾಗ ಸರಕಾರ ಮಾಧ್ಯಮಗಳಲ್ಲಿ , ಸಾಮಾಜಿಕ ಜಾಲತಾಣಗಳಲ್ಲಿ , ಹಾಗೂ ಇನ್ನಿತರ ಕಡೆ ಇರುವ ಮತ್ತು ಬರುವ ಪ್ರಚೋದನಕಾರಿ ಮಾದಕ ವಿಷಗಳನ್ನು ನಿಷೇಧಿಸಬೇಕು ಹಾಗೂ ಮಾದಕ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದು ಆಗ್ರಹ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ
ಚಂದ್ರವತಿ ರವರು ಮಾತನಾಡುತ್ತಾ ಯುವ ಪೀಳಿಗೆ ಇಂತಹ ದುಶ್ಚಟಗಳಿಂದ ದೂರ ಇದ್ದು ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ಕರೆ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಭಕ್ತಿಪ್ರಭ ಹಾಗೂ ಜ್ಞಾನ ವಿಕಾಸದ ಅಧಿಕಾರಿ ಭಾರತಿ, ಒಕ್ಕೂಟದ ಅಧ್ಯಕ್ಷರಾದ ಕಮಲ, ಸೇವಾ ಪ್ರತಿನಿಧಿ ಗಿರಿಜಾ ಇದ್ದರು.



