ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಸಮೀಪದ ಹಾಂದಿಯ ಹೆಲ್ಪ್ ಲೈನ್ ಸೇವಾ ತಂಡದ ವತಿಯಿಂದ ಹಾಂದಿಯ ವೃದ್ಧ ದಂಪತಿಗಳಿಗೆ ದುರಸ್ತಿ ಮಾಡಿದ ಮನೆಯನ್ನು ಗುರುವಾರ ಹಸ್ತಾಂತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸತ್ತಿಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಪ್ಪ, ಸಾಮಾಜಿಕ ಕಳಕಳಿಯ ಜನಪರ ಕೆಲಸಗಳನ್ನು ಜನಪ್ರತಿನಿಧಿಗಳು ಮತ್ತು ಸುಧಾರಕರು ಮಾಡಬೇಕೆಂದಿಲ್ಲ, ಈ ರೀತಿಯಲ್ಲಿ ಸಮಾನ ಮನಸ್ಕರೆಲ್ಲರೂ ಒಟ್ಟುಗೂಡಿ ತೀವ್ರವಾಗಿ ಹಾನಿಗೊಂಡಿದ್ದ ವೃದ್ಧ ದಂಪತಿಗಳಾದ ರಾಜು ಸೀತಮ್ಮರವರಿಗೆ ದುರಸ್ತಿ ಮಾಡಿ ಕೊಟ್ಟಿರುವುದು ಶ್ಲಾಘನೀಯ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಪರಿಕರಗಳನ್ನು ಕಳೆದ ವರ್ಷ ವಿತರಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುರೇಶ್ ಬಡಾವಣೆ , ವಾರ್ಷಿಕ ವರದಿ ಮಂಡಿಸಿ ಸೇವಾ ತಂಡದಿಂದ ನಡೆಸಿ ಕೊಟ್ಟಿರುವ ಸಾಮಾಜಿಕ ಕಾರ್ಯಗಳು ರಕ್ತದಾನ ಮಾಡಿರುವ ಮಾಹಿತಿಗಳನ್ನು ನೀಡಿ ಬಳಿಕ ಒಟ್ಟು 40,000 ವೆಚ್ಚದಲ್ಲಿ ವೃದ್ಧ ದಂಪತಿಗಳ ಮನೆ ದುರಸ್ತಿಯನ್ನು ಮಾಡಿಸಲಾಗಿದೆ ಎಂದು ತಿಳಿಸಿದರು. ಹೆಲ್ಪ್ಲೈನ್ ಸೇವಾ ತಂಡದ ಸಂಸ್ಥಾಪಕ ಮಹೇಶ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮನೆ ದುರಸ್ತಿಗೆ ಸಹಕಾರ ನೀಡಿದ ಸೇವಾ ತಂಡದ ಸದಸ್ಯರನ್ನು ದಾನಿಗಳನ್ನು ಸನ್ಮಾನಿಸಲಾಯಿತು. ಜಯಂತ್, ಕೃಷ್ಣ, ಕುಳಾಯಿ, ಗ್ರಾಮದ ಮುಖಂಡರಾದ ಎಂ.ಬಾಬು, ಮಗ್ಗಲ ಮಕ್ಕಿ ಗಣೇಶ್, ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸಂಜೀವ,ಸುರೇಶ್ ಹೊಸಪೇಟೆ, ಶಿವಾನಂದ, ಟೈಲರ್ ಸುರೇಶ್, ಉಪಸ್ಥಿತರಿದ್ದರು.



