seeds ball

 

 

ದಿನಾಂಕ 13.07.2024ರ ಶನಿವಾರ ಚಿಕ್ಕಮಗಳೂರು ನಗರದ “ಪವಿತ್ರ ವನ” ಮತ್ತು ‘ಚುರ್ಚೆಗುಡ್ಡ’ ಅರಣ್ಯ ಪ್ರದೇಶದಲ್ಲಿ   ಹೌಸ್ ಆಫ್ ಭಾರತ್ – ಹಾಸನ,  “ಗ್ರೀನ್ ಫೋರ್ಸ್ ಚಿಕ್ಕಮಗಳೂರು” ಮತ್ತು   ‘ಲಿಯೋ ಕ್ಲಬ್’  ಅವರುಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಚಿಕ್ಕಮಗಳೂರು ಅರಣ್ಯ ವಲಯ ಇವರ ನಿರ್ದೇಶನದಲ್ಲಿ ಆಯೋಜಿಸಲಾಗಿದ್ದ “ಬೀಜದುಂಡೆಗಳ ಬಿತ್ತನೆ ಹಾಗೂ ಸಸಿ ನೆಡುವ” ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿಯುಳ್ಳ ಸಮಾನ ಮನಸ್ಕರು ಭಾಗವಹಿಸಿ 25 ಫಲ ಹಾಗೂ ನೆರಳು ನೀಡುವ ಸಸಿಗಳನ್ನು ನೆಟ್ಟು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬೀಜದುಂಡೆಗಳನ್ನು ಚುರ್ಚೆಗುಡ್ಡ ಪ್ರದೇಶದಲ್ಲಿ ಬಿತ್ತಲಾಯಿತು.

ನೈಸರ್ಗಿಕ ಕೃಷಿ ಪರಿಣತರಾದ ಚಂದ್ರಶೇಖರ ನಾರಾಯಣಪುರ, ಮೋಹನ. ವಿ. ಎಸ್., ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ,  ಹೆಚ್. ಕೆ. ಯುವರಾಜ್ ಗೌಡ (ಗಿರೀಶ್) ಪರಿಸರವಾದಿ – ಅಧ್ಯಕ್ಷರು  ‘ಗ್ರೀನರಿ ಟ್ರಸ್ಟ್(ರಿ) – ಬೇಲೂರು’   ಅವರುಗಳೊಂದಿಗೆ ಸಾಮಾಜಿಕ ಕಾರ್ಯಕರ್ತ – ಪರಿಸರ ಸಂರಕ್ಷಣಾ ಹೋರಾಟಗಾರ  ಪ್ರದೀಪ್ ಗೌಡ,  “ಹೌಸ್ ಆಫ್ ಭಾರತ್” – ಹಾಸನ ರಮೇಶ್ ಆಚಾರ್ ವೈ. ಎಸ್,  ಕಿರಣ್ ಆರ್.   ದರ್ಶನ್ ಹೆಚ್. ಸಿ. ಮತ್ತು ಕುಮಾರಿ. ಅನುಷಾ ಕೆ. ಎಸ್. “ಲಿಯೋ ಕ್ಲಬ್” ಅಧ್ಯಕ್ಷರಾದ   ಅಮೃತ್  ಬಿ. ಮತ್ತು  ಕುಮಾರಿ. ನದಿ ಪ್ರದೀಪ್ ಗೌಡ.,  ‘ನಿತ್ಯದಾನಿ’ಗಳಾದ     ಶಶಿಪ್ರಸಾದ್ ಹೆಚ್. ಸಿ.,  ‘ಬುಲೆಟ್ ರೈಡರ್ಸ್ ಕ್ಲಬ್’ ಅಧ್ಯಕ್ಷರಾದ    ಯಧು ಕುಮಾರ್ ಸುಜ್ಗಲ್, ಕುಮಾರಿ ಪ್ರಿಯಾ, ಪೃಥ್ವಿ. ಪ್ರಜ್ವಲ್  ಹಾಗೂ ಚಿಕ್ಕಮಗಳೂರು ವಲಯ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು ಮತ್ತು ಕ್ಷೇತ್ರ ಸಿಬ್ಬಂದಿಗಳು  ಉಪಸ್ಥಿತರಿದ್ದರು.

ಕುಮಾರಿ ಭೂಮಿಕಾ ಸ್ವಾಗತಿಸಿ,   ಪ್ರದೀಪ್ ಗೌಡ  ಸನ್ಮಾನಿತ ಸಾಧಕರುಗಳ ಕಿರು ಪರಿಚಯ ನಿರೂಪಿಸಿದರು, ಶ್ರೀಮತಿ ಪೂರ್ಣಿಮಾ ರಮೇಶ್ ವಂದಿಸಿದರು.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ