suddi-6(A)

 

 

ಚಿಕ್ಕಮಗಳೂರಿನ  ಬೀದಿಯಲ್ಲಿ ಅನಾಥವಾಗಿ ಬಿದ್ದಿದ್ದ ಯುವಕನೋರ್ವ ಬಿಹಾರ ಸೇರಿದ್ದಾನೆ ಎಂದು ಬೇತೇಲ್ ಟ್ರಸ್ಟ್ ಅಧ್ಯಕ್ಷ ರೂಬೆನ್  ಮೊಸಸ್ ತಿಳಿಸಿದ್ದಾರೆ.

ನಗರದ ಹೊರ ವಲಯದ ಹಿರೇಮಗಳೂರು ಬಳಿಯ ರೈಲ್ವೇ ಸೇತುವೆ ಮುಂಬಾಗದ ನರ್ಸರಿ ಎದುರಿನ ಮರದ ಕೆಳಗೆ ಹಲವಾರು ದಿನಗಳಿಂದ. ಮಾನಸಿಕ ಅಸ್ವಸ್ಥನಾಗಿ ಲಕ್ಷ್ಮಣ್ ಎಂಬಾತ ಯಾರು ಆರೈಕೆ ಇಲ್ಲದೆ ಬಿದ್ದಿದ್ದ ಆತನನ್ನು ಕರೆತಂದ ನಾವು ಕಟಿಂಗ್ ಶೇವಿಂಗ್ ಮಾಡಿಸಿ ಹಲವು ದಿನಗಳಿಂದ ಮೈಮೇಲಿದ್ದ ಕೊಳಕು ಬಟ್ಟೆಯನ್ನು ಬದಲಾಯಿಸಿ ಮಾನಸಿಕ ಅಸ್ವಸ್ಥನಾಗಿದ್ದ ಕಾರಣ ಕೆಲವು ದಿನಗಳ ನಂತರ ಆತನನ್ನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಯಾವ ದಾಖಲೆಯೂ ಇಲ್ಲದ ಆತನಿಗೆ ಬೇರೆಯೆಲ್ಲ ವ್ಯವಸ್ಥೆಯನ್ನು ಮಾಡಲು ಕಷ್ಟಕರವಾದರೂ ಆರೋಗ್ಯ ಇಲಾಖೆಯ ವೈದ್ಯರುಗಳು ಸಹಕರಿಸಿ ಆತನ ಮಾಹಿತಿಯನ್ನು ಸಂಗ್ರಹಿಸಲು ಪೆÇಲೀಸ್ ಠಾಣೆಗೆ ದೂರನ್ನು ನೀಡಿ ಆತನ ಕುಟುಂಬಸ್ಥರನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರು.

ಪಶ್ಚಿಮ ಬಂಗಾಳದವರಾದ ಈ ಕುಟುಂಬ ಕೆಲಸವನ್ನು ಹುಡುಕಿಕೊಂಡು ಬಿಹಾರದಲ್ಲಿ ನೆಲೆಸಿದ್ದು ಲಕ್ಷ್ಮಣ್ ಎಂಬಾತ ಬಿಹಾರದಿಂದ ಕೆಲಸವನ್ನು ಅರಸಿ ಚಿಕ್ಕಮಗಳೂರಿಗೆ ಬಂದಿದ್ದು ಇಲ್ಲಿ ಯಾರ ಪರಿಚಯವಿಲ್ಲದೆ ದುಶ್ಚಟಗಳಿಗೆ ಒಳಗಾಗಿ ಮಾನಸಿಕ ಅಸ್ವಸ್ಥನಾಗಿ ಆಹಾರವಿಲ್ಲದೆ, ಬಟ್ಟೆ ಇಲ್ಲದೆ ಬೀದಿ ಬೀದಿಯಲ್ಲಿ ಅಲೆಯುತ್ತಾ ಕೊನೆಯಲ್ಲಿ ಹಿರೇಮಗಳೂರಿನ ರೈಲ್ವೆ ಸೇತುವೆ ಬಳಿ ಬಿದ್ದಿದ್ದನು ಇದು ನಗರಸಭೆಯಿಂದ ರಾಮನ ಹಳ್ಳಿಯಲ್ಲಿ ನಡೆಸಲ್ಪಡುತ್ತಿರುವ ಬೇತೇಲ್ ನಿರಾಶ್ರಿತರ ಆಶ್ರಯ ಕೇಂದ್ರಕ್ಕೆ ಆತನನ್ನು ಕರೆತಂದು ಮನುಷ್ಯನನ್ನಾಗಿ ಮಾಡಲು ಪ್ರಯತ್ನಿಸಲಾಯಿತು.

ಅಂದಾಜು 60 ದಿನ ಆಸ್ಪತ್ರೆಯಲ್ಲಿ ಸತತವಾಗಿ ಮಾನಸಿಕ ಆರೋಗ್ಯ ಹಿರಿಯ ತಜ್ಞರಾದ ಡಾ ಚಂದ್ರಶೇಖರ್ ನೇತೃತ್ವದಲ್ಲಿ ಡಾ. ಅನ್ನಪೂರ್ಣ, ಮಾನಸಿಕ ಆರೋಗ್ಯ ಪುನರ್ ವಿಮರ್ಶ ಮಂಡಳಿಯ ಸದಸ್ಯೆ ಡಾಟಟ ಪವಿತ್ರ ರವರು ಉತ್ತಮವಾದ ಚಿಕಿತ್ಸೆ ನೀಡಿದ ಕಾರಣ ಮಾನಸಿಕ ಅಸ್ವಸ್ಥನಾದ ಲಕ್ಷ್ಮಣ್ ಆರೋಗ್ಯವಂತನಾದನು ಇಷ್ಟಕ್ಕೂ ಸುಮ್ಮನಾಗದ ವೈದ್ಯರುಗಳು ಈತನ ಕುರಿತಾಗಿ ಮಾನಸಿಕ ಆರೋಗ್ಯ ಪುನರ್ ವಿಮರ್ಶ ಮಂಡಳಿಯ ಅಧ್ಯಕ್ಷರಿಗೆ ದೂರನ್ನು ನೀಡಿ ಅವರ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯ ನಟರಾಜ್ ಹಾಗೂ ಪೊಲೀಸ್ ಇಲಾಖೆಯ ಪೂರ್ಣೇಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪತ್ರವನ್ನು ಪಡೆದು ಹಾಗೂ ಅದರೊಂದಿಗೆ ವೈದ್ಯರ ಪತ್ರವನ್ನು ಪಡೆದು ಲಕ್ಷ್ಮಣನನ್ನು ಇಲ್ಲಿಂದ ಬೆಂಗಳೂರಿಗೆ ಬಸ್ಸಿನ ಮೂಲಕ ಹಾಗೂ ಬೆಂಗಳೂರಿನಿಂದ ಬಿಹಾರಕ್ಕೆ ವಿಮಾನದ ಮೂಲಕ ಕರೆದುಕೊಂಡು ಹೋಗಿ ಅಲ್ಲಿಂದ 10 ಗಂಟೆಗಳ ಕಾಲ ಬಸ್ಸಿನಲ್ಲಿ ಪ್ರಯಾಣ ಮಾಡಿ ಅವರ ಅಣ್ಣಂದಿರಾದ ಸುಕ್ರ ಚೌಪಾಲ್ , ರಾಮ್ ಚೌಪಾಲ್ ರವರ ಮನೆಗೆ ತಲುಪಿ ಅವರಿಗೆ ಈತನನ್ನು ಅಣ್ಣ ಅತ್ತಿಗೆಗೆ ಹಸ್ತಾಂತರಿಸಿ ಬರುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಕಾರ್ಯದಲ್ಲಿ ಸಹಕರಿಸಿದ ಜಿಲ್ಲಾ ಆಸ್ಪತ್ರೆಯ ಮಾನಸಿಕ ಆರೋಗ್ಯ ತಜ್ಞರಾದ ಡಾಕ್ಟರ್ ಚಂದ್ರಶೇಖರ್ ಡಾ. ಪವಿತ್ರ ಡಾಕ್ಟರ್ ಅನ್ನಪೂರ್ಣ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು , ಹಾಗೂ ಮಾನಸಿಕ ಆರೋಗ್ಯ ಪುನರ್ ವಿಮರ್ಶ ಮಂಡಳಿಯ ಅಧ್ಯಕ್ಷರು,

ಪೊಲೀಸ್ ವರಿಷ್ಠ ಅಧಿಕಾರಿಗಳು ನಗರಸಭೆ ಆಯುಕ್ತರು ಹಾಗೂ ನಿರಾಶ್ರಿತ ಕೇಂದ್ರದ ಕೇರ್ ಟೇಕರ್ ಸುನಿಲ್ ರವರ ಸಹಕಾರದಿಂದ ಬೀದಿಯಲ್ಲಿದ್ದವನೊಬ್ಬ ಬಿಹಾರ ಸೇರಲು ಸಾಧ್ಯವಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ