ಬಿಜೆಪಿಯ ರಾಜಕಾರಣವೇ ಹಿಂದುತ್ವಕ್ಕಾಗಿದೆ. ಹಿಂದುತ್ವವೇ ಬಿಜೆಪಿ ಜೀವಾಳ ಹಾಗೂ ತತ್ವಾಗಿದೆ. ಈ ತತ್ವಾಕ್ಕಾಗಿ ಸಮಾಜದಲ್ಲಿ ಯಾವುದೇ ಸವಾಲುಗಳು ಎದುರಾದರೂ ನಾವು ಗಳು ಎದುರಿಸಲು ಸದಾಸಿದ್ಧ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್‍ನ ತ್ರಿಮೂರ್ತಿ ದೇಗುಲದ ಭವನದಲ್ಲಿ ಯುವಸಂಗಮ, ರಾಷ್ಟ್ರೀಯ ಸಿದ್ದಾಂತ ಒಪ್ಪಿ ಬಿಜೆಪಿ ಸೇರ್ಪಡೆ ಎಂಬ ಘೋಷಣೆಯಡಿ ಆಯೋಜಿಸಲಾಗಿದ್ಧ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹಿಂದೆ ಬಿಜೆಪಿಗೆ ಸೇರ್ಪಡೆ ವೇಳೆಯಲ್ಲಿ ಪಕ್ಷದಲ್ಲಿ ಹೆಚ್ಚಿನ ಸದಸ್ಯರಿರಲಿಲ್ಲ. ಆದರೆ ಪಕ್ಷದ ತತ್ವ, ಸಂಘಟನೆ ಹಾಗೂ ಕಾರ್ಯಕರ್ತರ ಬಲದ ಮೇಲೆ ಪಕ್ಷವನ್ನು ಬೆಳೆಸಿದ್ದೇವೆ. ಜಿಲ್ಲೆಯ ಅಭೀವೃದ್ದಾಗಿ ಕಳೆದ ಎರಡು ದಶಕದಲ್ಲಿ ಮೆಡಿಕಲ್ ಕಾಲೇಜು, ಕೆ.ಎಂ.ರಸ್ತೆ ಅಭಿವೃದ್ದಿ, ನೂತನ ಡಿಸಿ ಕಚೇರಿಯಂಥ ಮ ಹತ್ವದ ಕಾಮಗಾರಿ ನಡೆಸಲಾಗಿದೆ ಎಂದರು.
ಬಿಜೆಪಿ ಜೀವಿತಾವಧಿಯಲ್ಲಿ ಜಾತಿ ಆಧಾರಿತ ರಾಜಕಾರಣ ಎಂದಿಗೂ ಮಾಡಿಲ್ಲ. ರಾಜೀ ರಾಜಕಾರಣ ಕ್ಕೂ ಅವಕಾಶ ನೀಡಿಲ್ಲ. ಇಲ್ಲಿ ಕಾರ್ಯಕರ್ತರೆ ಬಿಜೆಪಿಯ ಬಹುದೊಡ್ಡ ಶಕ್ತಿ. ಈ ಪಕ್ಷದ ಮೇಲಿನ ನಿಷ್ಟೆ, ಪರಿಶ್ರಮ, ನಿಸ್ವಾರ್ಥ ಕೆಲಸ ನಿರ್ವಹಿಸಿದರೆ ಸಮಾಜದ ಸೇವೆಗೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಉತ್ತಮ ಅವಕಾಶಗಳು ಲಭಿಸಲಿದೆ ಎಂದು ತಿಳಿಸಿದರು.
ಪ್ರಸ್ತುತ ಹೊಸದಾಗಿ ಬಿಜೆಪಿಗೆ ಸೇರ್ಪಡೆಯಾಗಿರುವ ಯವಸಮೂಹ ದೇಶಸೇವೆ, ಹಿಂದುತ್ವ, ನಾಗರೀ ಕ ಸಮಾಜಕ್ಕೆ ಉದ್ದಾರಕ್ಕೆ ಶ್ರಮಿಸುವುದಾಗಿ ಸಮರ್ಪಣಾಭಾವಿಂದ ಕಾರ್ಯನಿರ್ವಹಿಸಬೇಕು. ಸಮಾಜದಲ್ಲ ಎದುರಾಗುವ ಸವಾಲುಗಳಿಗೆ ಜಗ್ಗದೇ ಸಂಘಟನಾತ್ಮಕ ಶಕ್ತಿ ಬೆಳೆಸಿಕೊಂಡು ಪಕ್ಷವನ್ನು ಬಲಪಡಿಸಬೇಕು ಎಂ ದು ಕರೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಕವಿತಾ ಶೇಖರ್ ಮಾತನಾಡಿ ನಗರದ ಪ್ರಥಮ ವಾರ್ಡಿನಿ ಂದಲೇ ಇಂದು ಸದಸ್ಯತ್ವ ಅಭಿಯಾನಕ್ಕೆ ಎಂಎಲ್ಸಿ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ. ಆ ಪ್ರಯುಕ್ತ ಇಂದು ಸುಮಾರು 50ಕ್ಕೂ ಹೆಚ್ಚು ಯುವಕರ ಗುಂಪು ಪಕ್ಷದ ಸೈದ್ದಾಂತಿಕ ನಿಲುವು, ದೇಶ ಮೊದಲು ಎಂಬ ತತ್ವಕ್ಕೆ ಬೆಲೆಕೊಟ್ಟು ಸೇರ್ಪಡೆಯಾಗಿದ್ದಾರೆ ಎಂದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋμï ಕೋಟ್ಯಾನ್ ಮಾತನಾಡಿ ವ್ಯಕ್ತಿ ನಿರ್ಮಾಣದಿಂದ ದೇಶ ನಿರ್ಮಾಣ ಸಾಧ್ಯ. ಯುವಕರು ಒಂದಾಗಿ ರಾಷ್ಟ್ರಸೇವೆಯ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಬೇ ಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರμÁ್ಟಚಾರ, ದುರಾಡಳಿತ ಹಾಗೂ ಅಹಿತಕರ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.
ಹೌಸಿಂಗ್ ಬೋರ್ಡ್‍ನ ಯುವ ಮುಖಂಡ ಕಿಶನ್ ಮಾತನಾಡಿ, ಕಾಂಗ್ರೆಸ್‍ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದ ಸಂದರ್ಭದಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡರು. ಬಿಜೆಪಿ ಹಾಗೂ ಅದರ ನಾಯಕರ ವಿರುದ್ಧ ಯುವಕರಲ್ಲಿ ಅಪಪ್ರಚಾರ ನಡೆಸಲಾಗುತ್ತಿತ್ತು. ಆದರೆ ವಾಸ್ತವ ಸಂಗತಿಗಳನ್ನು ಅರಿತು ರಾಷ್ಟ್ರೀಯ ವಿಚಾರಧಾರೆಯನ್ನು ಒಪ್ಪಿ ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಭಾರ್ಗವ್, ಕಿಶನ್, ಕಿರಣ್ ಕೆ.ಪಿ., ದರ್ಶನ್, ಮಂಜು ನಾಥ್, ರಂಜನ್ ಸೇರಿದಂತೆ ವಾರ್ಡ್‍ನ ಪ್ರಮುಖರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


