14Mudigere2A

 

 

ಕಾಡುಜಾತಿಯ ಮರಗಳಿಂದ ತಯಾರಿಸಿದ ಮರದ ಬಿಲೆಟ್ಸ್‍ಗಳನ್ನು ಸಾಗಿಸುತ್ತಿದ್ದ ಪ್ರಕರಣ ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದ ಬಳಿ ಭಾನುವಾರ ಬೆಳಕಿಗೆ ಬಂದಿದೆ.

ಹಂಡುಗುಳಿ ಗ್ರಾಮದ ಸಮೀಪ ರಸ್ತೆ ಬದಿಯಲ್ಲಿ ಭಾನುವಾರ ಲಾರಿಯೊಂದರಲ್ಲಿ ಮರದ ದಿಮ್ಮಿಗಳನ್ನು ತುಂಬಿಸಿ ನಿಲ್ಲಿಸಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಪರಿಶೀಲಿಸಿದ್ದಾರೆ. ಆಗ ಕಾಡುಜಾತಿ ಮರಗಳಿಂದ ತಯಾರಿಸಿದ ಬಿಲೆಟ್ಸ್ ತುಂಡುಗಳಿರುವುದು ಕಂಡುಬಂದಿದೆ.  ಲಾರಿಯಲ್ಲಿದ್ದ  ಚಿಕ್ಕಮಗಳೂರು ತಾಲೂಕಿನ ಹೊಸಕೋಟೆ ಗ್ರಾಮದ ರಂಗರಾಜು (46) ಎಂಬುವರನ್ನು ವಿಚಾರಿಸಿದಾಗ, ಲಾರಿಯಲ್ಲಿದ್ದ ಸರಕು ಶಿವಪ್ಪ, ಪ್ರಕಾಶ ಹಾಗೂ ಇತರರಿಗೆ ಸೇರಿದ್ದಾಗಿದ್ದು, ಸಾಗಾಣಿಕೆಗೆ ಯಾವುದೇ ರಹದಾರಿ ಇಲ್ಲವೆಂಬುದು  ತಿಳಿದುಬಂದಿದೆ. ಕೂಡಲೇ ಕಾಡುಜಾತಿ ಬಿಲೆಟ್ಸ್ ಮತ್ತು ಲಾರಿಯನ್ನು ವಶಪಡಿಸಿಕೊಂಡು ಲಾರಿ ಚಾಲಕ ರಂಗರಾಜು ಸೇರಿದಂತೆ ಶಿವಪ್ಪ ಹಳೆಮೂಡಿಗೆರೆ (49), ಪ್ರಕಾಶ್ ಮುತ್ತಿಗೆಪುರ (53), ಚಂದ್ರಶೇಖರ್ ಆನೆದಿಬ್ಬ (32), ರಘು ಜೋಗಣ್ಣಕೆರೆ(40), ಚಂದ್ರಶೇಖರ್ ಹಳೆಕೋಟೆ (70) ಇವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಡಿಎಫ್‍ಒ ಕೆ.ಟಿ.ಬೋರಯ್ಯ, ಎಸಿಎಫ್ ಆಕರ್ಷ್ ಅವರ ಮಾರ್ಗದರ್ಶನದಲ್ಲಿ, ಆರ್‍ಎಫ್‍ಒ ಮಂಜುನಾಥ,  ಡಿಆರ್‍ಎಫ್‍ಒ ಕೆ.ಎಸ್.ಅಶ್ವಥ್, ಎಸ್.ಡಿ.ದೀಪಕ್, ಗಸ್ತು ಅರಣ್ಯ ಪಾಲಕರಾದ ಅಭಿಜಿತ್, ಆದರ್ಶ, ಮನು, ವಾಹನ ಚಾಲಕರಾದ ನವರಾಜ್, ಸುಮಂತ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ