ಮೂಡಿಗೆರೆ ತಾಲ್ಲೂಕು ಮತ್ತು ಬಾಳೂರು ಹೋಬಳಿ ಕೆಂಪೇಗೌಡ ಒಕ್ಕಲಿಗರ ವೇದಿಕೆ ವತಿಯಿಂದ ಇತ್ತೀಚೆಗೆ ಹಿರೇಬೈಲ್ ಬಿಳಗಲಿ ಸಮೀಪ ಕಾಡುಕೋಣ ದಾಳಿಯಿಂದ ಮೃತರಾದ ನಸೆಹಡ್ಲು ಶೀಲಾ ಕೃಷ್ಣೇಗೌಡ ಮತ್ತು ಇತ್ತೀಚೇಗೆ ತೋಟದಲ್ಲಿ ಕೆಲಸ ಮಾಡುವಾಗ ನಿಧನರಾದ ಮಾಳಿಂಗನಾಡಿನ ರಾಮೇಗೌಡ ಅವರ ಕುಟುಂಬಕ್ಕೆ ಧನಸಹಾಯ ನೀಡಲಾಯಿತು.
ಸೋಮವಾರ ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಂತಾಪ ಸೂಚಿಸಿ, ಆತ್ಮಸ್ಥೈರ್ಯವನ್ನು ತುಂಬಿ ಧನಸಹಾಯವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬಾಳೂರು ಹೋಬಳಿ ಕೆಂಪೇಗೌಡ ಒಕ್ಕಲಿಗ ವೇದಿಕೆಯ ಅಧ್ಯಕ್ಷ ಉಮೇಶ್ ಡಿ. ಟಿ. ಮಾವಿನಕೊಡಿಗೆ, ಪ್ರಧಾನ ಕಾರ್ಯದರ್ಶಿ ಅಂಜನ್ ಬಾಳೂರು, ಖಜಾಂಚಿÀ ಕಲ್ಲೇಶ್‍ಗೌಡ ಬಿ. ಆರ್. ಬಾಳೂರು, ತಾಲೂಕು ಅಧ್ಯಕ್ಷರಾದ ಬ್ರಿಜೇಶ್ ಗೌಡ ಕಡಿದಾಳು, ತಾಲೂಕು ಪ್ರದಾನ ಕಾರ್ಯದರ್ಶಿ ಪ್ರಸಾದ್ ಬಕ್ಕಿ, ಸಂಜಯಗೌಡ ಕೊಟ್ಟಿಗೆಹಾರ ಹಾಗೂ ವೇದಿಕೆಯ ಪದಾಧಿಕಾರಿಗಳು ಇದ್ದರು.


