ಮನೆಯಲ್ಲಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸುವುದು ಸಹಜ. ಆದರೆ ಮೂಡಿಗೆರೆ ತಾಲ್ಲೂಕು ಬಣಕಲ್ ಸಮೀಪದ ಚೇಗು ಗ್ರಾಮದ ನಿವಾಸಿ ಪೆಡ್ಡಿ ಲೋಬೊ ದಂಪತಿಯ ಮಗ ಶಾಯನ್ ಜೆ.ಲೋಬೊ ಅವರ ಹುಟ್ಟು ಹಬ್ಬವನ್ನು ಕಳಸ ತಾಲ್ಲೂಕಿನ ದೇವರಗುಡ್ಡ ದಿವ್ಯ ಕಾರುಣ್ಯಾಲಯ ಅನಾಥಾಶ್ರಮದ ಜನರೊಂದಿಗೆ ಆಚರಿಸಿ ಅನಾಥರ ಮನಸ್ಸಿಗೆ ಖುಷಿ ನೀಡಿ ಸಂಭ್ರಮಿಸಿದರು.
ಬಣಕಲ್ ಕ್ರೈಸ್ತರ ಅಬಿವೃದ್ದಿ ಸಂಘದ ಅಧ್ಯಕ್ಷರಾಗಿರುವ ಪೆಡ್ಡಿ ಲೋಬೊ ಮಾತನಾಡಿ ‘ಅನಾಥರ ಸೇವೆ ಮಾಡಲು ನಮಗೆ ಸಾಧ್ಯವಿಲ್ಲ. ಆ ನಿಸ್ವಾರ್ಥ ಸೇವೆ ಮಾಡುವವರಿಗೆ ಮಾನಸಿಕವಾಗಿಯೂ ದೈವ ಬಲ ಬೇಕು. ಹಾಗಾಗಿ ಅವರೊಂದಿಗೆ ಮಗನ ಹುಟ್ಟು ಹಬ್ಬ ಆಚರಿಸಿ ಅವರೊಂದಿಗೆ ಬೆರೆತು ಅವರ ಜೀವನ ಶೈಲಿ ಮನನ ಮಾಡಿಕೊಂಡು ಒಂದು ದಿನವಾದರೂ ಅವರ ಸಂತೋಷದ ಒಡನಾಟದಲ್ಲಿ ಬೆರೆತು ದಿನಕಳೆಯಬೇಕು ಎಂದು ಈ ಅನಾಥಾಶ್ರಮಕ್ಕೆ ಬಂದು ಹುಟ್ಟು ಹಬ್ಬ ಆಚರಿಸಿದ್ದೇವೆ.
ಮಗ ಶಾಯನ್ಗೂ ಇಂತಹ ಪ್ರಪಂಚದ ಅರಿವಾಗಲಿ ಎಂಬ ಕಾರಣದಿಂದ ದಾನ ದರ್ಮ ಮಾಡುವುದರಲ್ಲಿ ಸುಖವಿದೆ. ಮಕ್ಕಳು ಅಪ್ಪ ಅಮ್ಮನನ್ನು ಅನಾಥಾಶ್ರಮಕ್ಕೆ ತಳ್ಳದೇ ಕುಟುಂಬದಲ್ಲಿ ಅವರಿಗೆ ಗೌರವ ನೀಡಿ ಅವರ ಆರೈಕೆ ಮಾಡಿ ಪ್ರೀತಿಯಿಂದ ಕಾಣಬೇಕು ಎಂಬ ಸದುದ್ದೇಶದೊಂದಿಗೆ ನಿಜವಾಗಲೂ ವಿವಿಧ ರೋಗದಿಂದ ಬಳಲುವವರು ಅನಾಥರು ಅವರೊಂದಿಗೆ ಕುಟುಂಬದ ವಾತಾವರಣ ಅನುಭವಿಸಿ ಸಾಗುವುದು ಒಂದು ಮಾನವೀಯತೆಯ ಜೀವನ ಎಂದು ನಾವು ದಂಪತಿ ಆಲೋಚಿಸಿ ಅವರೊಂದಿಗೆ ಮಗನ ಹುಟ್ಟು ಹಬ್ಬದ ಕೇಕ್ ಕತ್ತರಿಸಿ ಬೋಜನ ಮಾಡಿ ದಿನ ಕಳೆದಿದ್ದೇವೆ. ಅವರಿಗೆ ಬೇಕಾಗುವ ದಿನ ಸಾಮಾಗ್ರಿಗಳನ್ನು ನೀಡಿದ್ದೇವೆ. ಅವರ ಆಗುಹೋಗುಗಳಿಗೆ ಸ್ಪಂಧಿಸಬೇಕೆಂಬ ಆಶಯ ಹೊತ್ತು ಆಶ್ರಮಕ್ಕೆ ಬಂದೆವು. ಇದು ನಮ್ಮ ಕುಟುಂಬಕ್ಕೆ ಸಂತೋಷ ತಂದಿದೆ’ ಎಂದರು.
ಈ ಸಂದರ್ಭದಲ್ಲಿ ಪತ್ನಿ ಲೇಮಿನ, ಮಗ ಶಾಯನ್ ಜೇಡನ್ ಲೋಬೊ ಸೋನಲ್ ಜೇನಿಷ್ ಲೋಬೊ, ಅನಾಥಾಶ್ರಮದ ನಿರ್ವಾಹಕರಾದ ಬಿಬಿನ್ ಜೋಸ್, ಪತ್ನಿ ರೇಷ್ಮ ಮೊಂತೆರೊ ಮತ್ತಿತರರು ಇದ್ದರು.
ವರದಿ : ಅನಿಲ್ ಮೊಂತೆರೊ



