24mdg1A Vinay

 

 

ಕಾನೂನು ಸುವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಾಪಾಡುತ್ತಿರುವ ಪೊಲೀಸರ ವರ್ಗಾವಣೆವನ್ನು  ಪಾರದರ್ಶಕವಾಗಿ ಮಾಡಬೇಕೆಂದು ಮೂಡಿಗೆರೆ ತಾಲೂಕು ಬಿಜೆಪಿ  ವಕ್ತಾರ ವಿನಯ್ ಹಳೆಕೋಟೆ ಆಗ್ರಹಿಸಿದ್ದಾರೆ.

ಮೂಡಿಗೆರೆ ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ಪೊಲೀಸರ ದಿಟ್ಟ ನಿರ್ಧಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುತ್ತಿದ್ದರಿಂದ ತಾಲೂಕಿನಲ್ಲಿ ಗಲಭೆಗಳು, ಮನೆ ಕಳ್ಳತನ, ಗೂಂಡಾಗಿರಿ ಮುಂತಾದ ಪ್ರಕರಣಗಳು ಸಂಪೂರ್ಣ ಕ್ಷೀಣಿಸಿದೆ. ಈಗಲೂ ಸದಾ ಪೊಲೀಸರು ರಾತ್ರಿ ಗಸ್ತು ತಿರುಗುವುದು, ವಾಹನ ಚಾಲಕರು ಪಟ್ಟಣಗಳಲ್ಲಿ ವಾಹನ ಸಂಚಾರ ನಿಯಮ ಪಾಲನೆ ಮಾಡುವುದು, ಅಪರಾಧಿಗಳ ಗುರುತಿಸುವಿಕೆ, ವ್ಯವಸ್ಥಿತಿ ತಂತ್ರಜ್ಞಾನ ಬಳಕೆ ಮುಂತಾದ ದಿಟ್ಟ ಕ್ರಮ ಕೈಗೊಂಡಿದ್ದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಿದೆ. ಇದರಿಂದ ಪೊಲೀಸ್ ಇಲಾಖೆ ಮೇಲೆ ಸಾರ್ವಜನಿಕರು ಪ್ರಶಂಸೆ ಕೂಡ ವ್ಯಕ್ತವಾಗಿದೆ.

ಇದೀಗ ರಾಜ್ಯ ಸರಕಾರದ ದ್ವಂದ್ವ ನಿಲುವಿನಿಂದಾಗಿ ಮೂಡಿಗೆರೆ ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಎಎಸ್‌ಐ, ಹೆಡ್ ಕಾನ್ಸ್ಟೇಬಲ್, ಹಾಗೂ ಪಿಸಿ ಸೇರಿದಂತೆ ಒಟ್ಟು 42 ಪೊಲೀಸ್ ಸಿಬ್ಬಂದಿ ಪೈಕಿ 2ರಿಂದ 3 ವರ್ಷ ಕಾರ್ಯ ನಿರ್ವಹಿಸಿದ್ದ ಅನೇಕ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ನಡೆಸಲು ಸರಕಾರ ಮುಂದಾಗಿರುವುದನ್ನು ಬಿಜೆಪಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು. ಜಿಲ್ಲೆಯ ಎಸ್‌ಪಿ ಕಚೇರಿ ಸೇರಿದಂತೆ ಅನೇಕ ಕಡೆಯಲ್ಲಿ ಕಳೆದ 10 ವರ್ಷದಿಂದ ಮೊಕ್ಕಾಂ ಹೂಡಿರುವ ಅನೇಕ ಪೊಲೀಸ್ ಸಿಬ್ಬಂದಿ ಇದ್ದಾರೆ. ಮೊದಲು ಅವರನ್ನು ವರ್ಗಾವಣೆಗೊಳಿಸಿ ನಂತರ ಇತರೇ ಪೊಲೀಸರನ್ನು ವರ್ಗಾವಣೆಗೊಳಿಸುವ ಕಾರ್ಯ ನಡೆಸಲಿ ಎಂದು ಆಗ್ರಹಿಸಿದ್ದಾರೆ.

ಎಸ್ಪಿ ಕಛೇರಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಒಂದು ನಿಯಮ, ಠಾಣೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಒಂದು ನಿಯಮ ಅನುಸರಿಸದೇ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಎಸ್ಪಿಯವರು ಪಾರದರ್ಶಕವಾಗಿ ವರ್ಗಾವಣೆ ನೀತಿ ಅನುಸರಿಸಬೇಕು ಎಂದು ವಿನಯ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ