kadane

 

 

ಮಳೆ ಹಾನಿಯ ನಡುವೆ ಮಲೆನಾಡಲ್ಲಿ ಕಾಡಾನೆಗಳ ಕಾಟ ಮತ್ತೆ ಹೆಚ್ಚಾಗಿದೆ.  18 ಕಾಡಾನೆಗಳ ಹಿಂಡಿನಿಂದ ಮಲೆನಾಡಿನ ಕೆಲವು ಭಾಗಗಳಲ್ಲಿ ಸಂಚರಿಸುತ್ತಾ ಆತಂಕ ಸೃಷ್ಟಿಸಿವೆ.

ಮೂಡಿಗೆರೆ ತಾಲೂಕಿನ ಪುರ, ಗಬ್ಬಳ್ಳಿ, ಕಾರ್ಬೈಲು ಗ್ರಾಮ ಸುತ್ತಮುತ್ತ ಕಾಡಾನೆಗಳ ತಂಡ ಸಂಚರಿಸುತ್ತಿದೆ. ದಿನಕ್ಕೊಂದು ಹಳ್ಳಿ ಭಾಗದಲ್ಲಿ ಕಾಣಿಸಿಕೊಳ್ತಿರೋ ಕಾಡಾನೆಗಳ ಹಿಂಡು. 18 ಕಾಡಾನೆಗಳ ಹಿಂಡಿನಿಂದ ಕಾಫಿ ತೋಟಗಳು ನಾಶವಾಗುತ್ತಿವೆ.

ಮಳೆಯಿಂದಾ ನಾನಾ ಅವಾಂತರವಾಗಿರೋ ಮೂಡಿಗೆರೆ ತಾಲೂಕಿನಲ್ಲಿ ಈಗ ಕಾಡಾನೆಗಳ ಕಾಟ ವಿಪರೀತವಾಗಿದೆ.  18 ಕಾಡಾನೆಗಳು ತಂಡಗಳಾಗಿ ಒಂದೊಂದು ಹಳ್ಳಿಗೆ ದಾಂಗುಡಿ ಇಡತ್ತಿವೆ.

ಇತ್ತ ಕೊಟ್ಟಿಗೆಹಾರ, ಗುತ್ತಿಹಳ್ಳಿ, ಗುತ್ತಿ, ಮೂಲರಹಳ್ಳಿ, ಬೈದುವಳ್ಳಿ ಭಾಗದಲ್ಲಿಯೂ ಕಾಡಾನೆಯೊಂದು ನಿರಂತರ ಸಂಚರಿಸುತ್ತಾ ಜನರಲ್ಲಿ ಭಯದ ವಾತಾರವಣ ಸೃಷ್ಟಿಸಿದೆ.

ಆನೆಗಳನ್ನ ಓಡಿಸುವಂತೆ ಮೂಡಿಗೆರೆಯ ಗ್ರಾಮೀಣ ಭಾಗದ ಜನರ ಆಗ್ರಹಿಸುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ