IMG-20240807-WA0200

 

 

ಮೂಡಿಗೆರೆ ತಾಲ್ಲೂಕಿನ  ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಾರಿಯ ಮಳೆಗೆ ಒಟ್ಟು 17 ಮನೆ ಗಳಿಗೆ ಹಾನಿ ಅಗಿದ್ದು 11 ಮನೆಗಳು ಸಂಪೂರ್ಣ ಕುಸಿದು ಹೋಗಿದೆ. ನಿಯಮದಂತೆ ಪಿ ಡಿ ಓ ಮತ್ತು ಅಧ್ಯಕ್ಷರು ತಕ್ಷಣಕ್ಕೆ ಭೇಟಿ ನೀಡಿ ಮೂಲ ಸೌಕರ್ಯ ಒದಗಿಸುವುದು ಕರ್ತವ್ಯವಾಗಿದೆ ಕೂಡಲೇ ನಿರಾಶ್ರೀತರಿಗೆ ಸಾಮಗ್ರಿಗಳ ಕಿಟ್ ನ್ನು ಆ ಭಾಗದ ಸದಸ್ಯರನ್ನು ಸೇರಿಸಿಕೊಂಡು ನೀಡಲಾಗಿದೆಯೇ ಹೊರತು ಯಾವ ಸದಸ್ಯರನ್ನು ಕಡೆಗಣಿಸಲಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಮಾರಿ ರಂಜಿತಾ ಡಿ ಹೇಳಿದರು.

ಅವರು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ನಮ್ಮ ಪಂಚಾಯಿತಿಯ ಮೂವರು ಸದಸ್ಯರು ಪಂಚಾಯಿತಿ ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಟ್ಟ ವಿಷಯವಾಗಿ ನನ್ನ ಬಗ್ಗೆ ಅಪ ಪ್ರಚಾರದ ಹೇಳಿಕೆ ನೀಡಿದ್ದಾರೆ ಈ ಹಿಂದೆ ಕರ್ತವ್ಯ ನಿರ್ವಹಿಸುತಿದ್ದ ಸಿಬ್ಬಂದಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಪಂಚಾಯಿತಿಗೆ ದೂರು ಬಂದ ಕಾರಣ ಅವರೆ ರಾಜೀನಾಮೆ ನೀಡಿ ಹೋಗಿದ್ದಾರೆ. ಆದ್ದರಿಂದ ತೆರವಾದ ಜಾಗಕ್ಕೆ ಅರ್ಜಿ ಆಹ್ವಾನಿಸಿದ್ದು ಬಂದ ಅರ್ಜಿದಾರರ ಕೆಲಸದ ಗುಣಮಟ್ಟ ಆಧಾರಿಸಿ ನರೇಗಾ ಕೆಲಸ ಗೊತ್ತಿರುವ ಬೇರೆ ಓರ್ವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದು ಆ ವ್ಯಕ್ತಿ ಹಿಂದೆ ಬೇರೆ ಪಂಚಾಯಿತಿಯಲ್ಲಿ ಕೆಲಸ ಮಾಡಿರುವ ಅನುಭವದ ಆಧಾರದ ಮೇಲೆ ಮತ್ತು ನರೇಗಾ ಯೋಜನೆಯ ಬಗ್ಗೆ ಹೆಚ್ಚು ಅನುಭವ ಇರೋದರಿಂದ ನರೇಗಾ ಕೆಲಸಕ್ಕೆ ಸೇರಿಸಿ ಕೊಳಲಾಗಿದೆ ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಅವರ ಹೇಳಿಕೆ ಸತ್ಯಕ್ಕೆ ದೂರ ಎಂದು ತಿಳಿಸಿದರು.

ಮೂವರು ಸದಸ್ಯರು ಪ್ರತಿ ಸಾಮಾನ್ಯ ಸಭೆಯಲ್ಲಿ ಅಡ್ಡಿ ಪಡಿಸುತ್ತ ಸಭೆಯಲ್ಲಿ ಗದ್ದಲ ಹಬ್ಬಿಸುತ್ತ ಬಂದಿದಾರೆ ಮಹಿಳೆ ಅಧ್ಯಕ್ಷೆ ಆಗಿರುವುದಕ್ಕೆ ಕೆಲಸ ಮಾಡಲು ಅಡ್ಡಿ ಪಡಿಸೋದು ಅವರ ಕಾಯಕ ಆಗುತ್ತಿದೆ. ನಾನು ಅಧ್ಯಕ್ಷೆ ಆದಮೇಲೆ ಎಲ್ಲಾ ಸದಸ್ಯರನ್ನು ವಿಶ್ವಾಸ ದೊಂದಿಗೆ ಪಂಚಾಯಿತಿ ಕೆಲಸ ಮಾಡುತಿದ್ದೇನೆ ಎಂದರು.

ಗ್ರಾ ಪಂ ಸದಸ್ಯ ಶಿವಾನಂದ ಮಾತನಾಡಿ ನನ್ನ ಕ್ಷೆತ್ರದಲ್ಲೆ ಹೆಚ್ಚು ಮನೆ ಹಾನಿಗೋಳಗಾಗಿವೆ, ನಾನು ತಕ್ಷಣಕ್ಕೆ ಅವರ ನೆರವಿಗೆ ಹೋಗಿ ಸಾಮಗ್ರಿ ಕಿಟ್ ಮಾಡಿಸಿ ನಂತರ ಅವರಿಗೆ ನೀಡುವ ಕೆಲಸ ಆಗಿದೆ ಇದನ್ನು ಯಾರು ಪ್ರತಿಷ್ಠೆ ರೀತಿಯಲ್ಲಿ ನೋಡಬಾರದು ಈ ಹಿಂದೆ ಹಳೇ ಮೂಡಿಗೆರೆಯ ಸರ್ವೇ ನಂಬರ್ 7 ರಲ್ಲಿ ನಿವೇಶನಕ್ಕೆ ಎಂದು 3 ಎಕರೆ 34 ಕುಂಟೆ ಜಾಗವನ್ನು ಕಾಯ್ದಿರಿಸಲಾಗಿದೆ. ಆ ಜಾಗದಲ್ಲಿ ಇದ್ದ ಒಂದಷ್ಟು ಸಿಲ್ವರ್ ಮರಗಳನ್ನು ಯಾವ ಸದಸ್ಯರ ಗಮನಕ್ಕೂ ತರದೇ ಕಡಿದು ಮಾರಾಟ ಮಾಡಿದ್ದಾರೆ ಈಗ ಪ್ರಶ್ನೆಸಿದರೆ ಅರಣ್ಯ ಇಲಾಖೆಯ ಡಿಪೋ ದಲ್ಲಿ ಇದೆ  ಸಬೂಬು ಹೇಳುತ್ತಾರೆ ಎಂದು ದೂರಿದರು.

ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್ ಎಸ್, ಅಜಿತ್ ಮುತ್ತಿಗೆಪುರು, ಎಲ್ ಬಿ ಸಂದೀಪ್ ಲೋಕವಳ್ಳಿ, ಶೋಭಾ ಭರತ್ ಇದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ