bus

 

 

ಬಿಎಂಟಿಸಿ ಬಸ್ ಗುದ್ದಿ ಹಲವು ಸರಣಿ ಅಪಘಾತದಿಂದ ಹಲವು ವಾಹನಗಳು ಜಖಂಗೊಂಡಿವೆ. ಬಿಎಂಟಿಸಿ ಬಸ್ ಹಲವು ಬೈಕ್‌ಗಳಿಗೆ, ಕಾರುಗಳಿಗೆ ಗುದ್ದಿದೆ. ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಮೇಲೆ ಬಿಎಂಟಿಸಿ ಬಸ್  ಅಪಘಾತದ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು ಏರ್‌ಪೋರ್ಟ್‌ನಿಂದ ನಗರದೊಳಗೆ ಬರುತ್ತಿದ್ದ ವೋಲ್ವೋ ಬಸ್ ಏಕಾಏಕಿ ಮುಂದಿದ್ದ ಬೈಕ್‌ಗಳಿಗೆ ಗುದ್ದಿದೆ. ಬಳಿಕ ಒಂದೆರಡು ಕಾರುಗಳಿಗೆ  ಗುದ್ದಿ ನಿಂತಿದೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.  ಬಸ್ ಡ್ರೈವರ್ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ್ದಾರೋ ಅಥವಾ ಬಸ್ ಬ್ರೇಕ್ ಸಮಸ್ಯೆಯಿಂದ ಘಟನೆ ಸಂಭವಿಸಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಬಸ್‌ ಚಾಲಕನ ನಿರ್ಲಕ್ಷ್ಯ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಬಸ್ ಮುಂಭಾಗದಲ್ಲಿದ್ದ ಬೈಕ್‌ಗಳು ಹಾಗೂ ಕಾರು ಜಖಂಗೊಂಡಿದೆ. ಬೈಕ್‌ ಸವಾರರು ಗಾಯಗೊಂಡು ಚೀರಾಡುತ್ತಾ ನರಳಾಡುತ್ತಿದ್ದರು.
ಬಸ್‌ ಗುದ್ದಿದ ರಭಸಕ್ಕೆ ಸವಾರರು ಒಬ್ಬರ ಮೇಲೆ ಒಬ್ಬರು ಬಿದ್ದಿದ್ದರು. ಅದೃಷ್ಟವಶಾತ್‌ ಸಣ್ಣಪುಟ್ಟ ಗಾಯದಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ