kottige

 

 

ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೊಟ್ಟಿಗೆಹಾರದಲ್ಲಿ ನಿರ್ಮಿಸಿರುವ  ನೂತನ ಆಹಾರ ಧಾನ್ಯ ಶಾಖೆ ಕಟ್ಟಡವನ್ನು ಭಾನುವಾರ ಉದ್ಘಾಟಿಸಲಾಯಿತು.

ಸಂಘದ ಅಧ್ಯಕ್ಷ ಬಿ.ಎಸ್. ಕಲ್ಲೇಶ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವನ್ನು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘಗಳಲ್ಲಿ ರೈತರಿಗೆ ಮತ್ತು ಸದಸ್ಯರಿಗೆ ಹಲವು ರೀತಿಯ ಸೌಲಭ್ಯಗಳು ದೊರಕುತ್ತಿದ್ದು, ಇವುಗಳ ಸದುಪಯೋಗಪಡಿಸಿಕೊಂಡು ಆರ್ಥಿಕ ಸಬಲತೆಯನ್ನು ಸಾಧಿಸಬೇಕೆಂದು ಸದಸ್ಯರಿಗೆ ಕಿವಿಮಾತು ಹೇಳಿದರು.

ಆಹಾರ ಧಾನ್ಯ ಶಾಖೆಗಳನ್ನು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ. ದಿವಾಕರ್ ಹಾಗೂ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ. ಸತೀಶ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಎಚ್.ಕೆ.ಮಮತ, ನಿರ್ದೇಶಕರಾದ, ಟಿ.ಎಂ. ಗಜೇಂದ್ರ, ಬಿ.ಎಂ.ಭರತ್, ಎ.ಆರ್.ಅಭಿಲಾಷ್, ರಂಗನಾಥ್, ಬಿ.ಎಸ್.ವಿಕ್ರಂ, ಬಿ.ಎಂ.ಸತೀಶ್, ಜಿ.ಬಿ.ಲಕ್ಷ್ಮಿ, ದಿಲ್ ದಾರ್ ಬೇಗಂ, ಬಿ.ಆರ್.ಚಂದ್ರಶೇಖರ್, ಬಿ.ಎಲ್.ಅಶ್ವಥ್, ಕೆ.ಕೆ.ಯತೀಶ್, ನಾರಾಯಣ್ ಗೌಡ, ಎ.ಬಿ.ನಾಗೇಶ್ ಗೌಡ, ಕೆ.ಪಿ.ರಮೇಶ, ಬಿ.ಎ.ಪ್ರದೀಪ್, ಜಿಲ್ಲಾ ಬ್ಯಾಂಕ್ ಮೇಲ್ವಿಚಾರಕ ಯು.ಸಿ.ಪ್ರಯಾಗ್, ಸಿಇಒ ಜಿ.ಪಿ.ನಿಶಾಂತ್, ಸಿಬ್ಬಂದಿಗಳು ಮತ್ತಿತರರು ಇದ್ದರು.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ