gandi jayanthi

 

 

ಗಾಂಧಿ ಜಯಂತಿಯ ಪ್ರಯುಕ್ತ ಗಾಂಧಿ ಸ್ಮೃತಿ ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಗೋಣಿಬೀಡಿನಲ್ಲಿ ಆಯೋಜಿಸಲಾಗಿತ್ತು.

ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಪ್ರಶಾಂತ್ ಚಿಪ್ರಗುತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನಾವು ತೋರಿಕೆಗಾಗಿ ಗಾಂಧಿ ಜಯಂತಿಯನ್ನು ಮಾಡದೆ ಗಾಂಧಿಯ ತತ್ವ ಸಿದ್ಧಾಂತವನ್ನು ಆದಷ್ಟು ಮೈಗೂಡಿಸಿಕೊಂಡಲ್ಲಿ ಗಾಂಧಿ ಜಯಂತಿಯ ಆಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ನಾಥುರಾಮ್ ಗೋಡ್ಸೆ ಎಂಬ ಕಿಡಿಗೇಡಿ, ಗಾಂಧೀಜಿಯನ್ನು ಒಂದು ಬಾರಿ ಕೊಂದರೆ ಈಗಿನ ದಿನಗಳಲ್ಲಿ ಭ್ರಷ್ಟ ರಾಜಕಾರಣಿಗಳು ಅಧಿಕಾರಿಗಳು ಹಾಗೂ ಬಹುತೇಕ ದುಷ್ಟ ಜನರು, ಗಾಂಧೀಜಿಯವರು ಏನು ಮಾಡಬಾರದು ಎಂದು ಹೇಳಿದ್ದಾರೋ, ಅದನ್ನ ಮಾಡಿ, ಏನು ಮಾಡಬೇಕು ಎಂದು ಹೇಳಿದರೋ ಅದನ್ನು ಮಾಡದೆ ನಿತ್ಯ ಅವರನ್ನು ಕೊಲ್ಲುತ್ತಿದ್ದಾರೆ. ಗಾಂಧೀಜಿ ಅವರಿಗೆ ತಮ್ಮ ದೇಹದ ಮೇಲಿನ ವ್ಯಾಮೋಹ ಆಸಕ್ತಿಗಿಂತ ತಮ್ಮ ತತ್ವ ಸಿದ್ಧಾಂತದ ಮೇಲಿನ ಆಸಕ್ತಿ ಹೆಚ್ಚು ಇದ್ದಿದ್ದರಿಂದ ಅವರಿಗೆ ದೇಹ ಸತ್ತರು ಚಿಂತೆ ಇಲ್ಲ, ಆದರೆ ತಮ್ಮ ತತ್ವ ಸಿದ್ಧಾಂತ ಸಾಯಬಾರದೆಂಬ ಯೋಚನೆ ಇತ್ತು. ಹಾಗಾಗಿ ನಾವುಗಳು ಅವರ ತತ್ವ ಸಿದ್ಧಾಂತವನ್ನು ಕೊಲ್ಲದೆ, ಅದನ್ನ ಪಾಲಿಸುವ ಮುಖಾಂತರ ಗಾಂಧಿ ಜಯಂತಿ ಆಚರಣೆಯನ್ನು ಅರ್ಥಪೂರ್ಣ ಮಾಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ದಿನೇಶ್ ಮಾತನಾಡಿ ಸ್ವಚ್ಛತೆ ಗಾಂಧೀಜಿಯ ಉಸಿರು ಅದು ನಮ್ಮ ಬದುಕಿನ ಭಾಗವಾಗಲಿ ಎಂದು ಹೇಳಿದರು. ರಾಜ್ಯ ಚೆಸ್ ಅಸೋಷಿಯೇಷನ್ ಉಪಾಧ್ಯಕ್ಷ ಗಿರೀಶ್ ಮಣ್ಣಿಕೆರೆ ಗಾಂಧೀಜಿ ಆದರ್ಶವನ್ನು ಪಾಲಿಸಲು ಕರೆ ನೀಡಿದರು.

ಜನಜಾಗೃತಿ ವೇದಿಕೆಯ ನಾಗರಾಜ್ ರವರು ವೇದಿಕೆಯ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಅಧ್ಯಕ್ಷತೆಯನ್ನು ಸುಪ್ರೀತ ನಯನ ವಹಿಸಿದ್ದರು. ಶಿವಾನಂದ್ ಯೋಜನಾಧಿಕಾರಿ ಹಾಗೂ ದೀಪಕ್ ದಾಮೋದರ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ